ತಂದೆ ತಾಯಿಯಿಂದ ದೂರವಾಗಿ ಮತ್ತೊಬ್ಬರ ಮಡಿಲಲ್ಲಿ ಬೆಳೆದಿದ್ದ ನಟಿ ಲೀಲಾವತಿಗೂ ತುಳುನಾಡಿಗೂ ಇರುವ ಬಾಂಧವ್ಯ ಅಪರೂಪದ್ದು!

ಕನ್ನಡದ ಮೇರುನಟಿ ಲೀಲಾವತಿ ಅವರ ನಿಧನ ಕರುನಾಡಿನ ಜನ ಮತ್ತು ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಡಿಸೆಂಬರ್ 8 (ಶುಕ್ರವಾರ) ರಂದು ವಿಧಿವಶರಾಗಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ನಾಡಿನ ಅನೇಕ ಗಣ್ಯರು ಅವರ ಜೊತೆಗಿನ ಸುಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಅವರ ಬಾಲ್ಯದ ದಿನಗಳನ್ನು ಅವರ ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ನಟಿ ಲೀಲಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಲೀಲಾವತಿ ಅವರ ಬಾಲ್ಯದ ಜೀವನ, ತುಳು ಸಿನಿಮಾರಂಗಕ್ಕೆ ಅವರು ಕೊಟ್ಟ ಕೊಡುಗೆ, ಸಿನಿಮಾದ ಆರಂಭದ ಜೀವನದ ನೆನಪುಗಳನ್ನು ತುಳು ಚಿತ್ರರಂಗದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

Leelavathi Death: Actress Leelavathi childhood friends from belthangady shared some memories

ಲೀಲಾವತಿ ಅವರ ತುಳು ಭಾಷಾ ಪ್ರೇಮ

ನಟಿ ಲೀಲಾವತಿ ಅವರೊಂದಿಗೆ ಒಡನಾಟದಲ್ಲಿದ್ದ ತಮ್ಮ ಲಕ್ಷ್ಮಣ ಅವರು ಲೀಲಾವತಿ ಅವರ ತುಳು ಭಾಷಾ ಪ್ರೇಮ, ತುಳು ಸಿನಿಮಾದ ಆರಂಭದ ಕಾಲದಲ್ಲಿ ಲೀಲಾವತಿಯವರು ಬೆನ್ನೆಲುಬಾಗಿ ನಿಂತ ಬಗ್ಗೆ ಮಾತನಾಡಿದ್ದಾರೆ. ನಟಿ ಲೀಲಾವತಿ ಅವರು ತುಳು ಸಿನಿಮಾಗಳಲ್ಲಿಯೂ ಅಭುನಯಿಸಿದ್ದಾರೆ.

ಲೀಲಾವತಿ ಅವರು ತುಳುನಾಡಿನ ವಿಶೇಷ ಮೀನಿನ ಖಾದ್ಯವನ್ನು ತಯಾರಿಸುತ್ತಿದ್ದರು ಎಂದು ತಮ್ಮ ಲಕ್ಷ್ಮಣ ನೆನಪಿಸಿಕೊಂಡಿದ್ದಾರೆ. ಇದಲ್ಲದೆ ವಿನೋದ್ ರಾಜ್ ಹಾಗೂ ಲೀಲಾವತಿಯವರು ತುಳುಭಾಷೆಯಲ್ಲಿಯೇ ನಿತ್ಯ ವ್ಯವಹರಿಸುತ್ತಿದ್ದ ಬಗ್ಗೆಯೂ ನೆನಪು ಮಾಡಿದ್ದಾರೆ.

ಬೆಳ್ತಂಗಡಿಯಲ್ಲಿ ನಾವೂರಿನಲ್ಲಿ ಬಾಲ್ಯ ಕಳೆದಿದ್ದ ಲೀಲಾವತಿ

ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದು, ಅವರು ತಮ್ಮ ಬಾಲ್ಯದ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾವೂರಿನಲ್ಲಿ ಕಳೆದಿದ್ದರು. ಬಾಲ್ಯದಲ್ಲಿ ಲೀಲಾವತಿಯವರು ವಾಸವಿದ್ದ ಮನೆ ಈಗ ಇಲ್ಲದಿದ್ದರೂ, ಆ ಜಾಗದ ಕುರುಹು ಈಗಲೂ ಇದೆ ಎಂದು ನೆನಪಿಸಿಕೊಂಡಿದ್ದಾರೆ.

ನಟಿ ಲೀಲಾವತಿ ಅವರು ಹುಟ್ಟಿದಾಗ ಮಗು ಹೆಣ್ಣೆಂದು ಅವರ ತಂದೆ ತಾಯಿ ತೊರೆದಿದ್ದರು. ಆಗ ಅವರನ್ನು ಮತ್ತೊಂದು ಕ್ರಿಶ್ಚಿಯನ್ ದಂಪತಿ ಇವರನ್ನು ಮಡಿಲಲ್ಲಿ ಹಾಕಿಕೊಂಡು ಸಾಕಿದ್ದರು. ಈ ದಂಪತಿಯ ಸಂಬಂಧಿ, ಲೀಲಾವತಿಯವರೊಂದಿಗೆ ಒಡನಾಟವಿದ್ದ ದನ್ವಿಲ್ ಡಿಸಿಲ್ವಾ ಲೀಲಾವತಿವಯವರಿದ್ದ ಮನೆಯಿದ್ದ ಸ್ಥಳದ ಕುರುಹನ್ನು ತೋರಿಸಿದ್ದಾರೆ.

Leelavathi Death: Actress Leelavathi childhood friends from belthangady shared some memories

ತಮ್ಮ ಒಡನಾಟದ ಬಗ್ಗೆ ಮಾತನಾಡಿದ ದನ್ವಿಲ್ ಡಿಸಿಲ್ವಾ, ಲೀಲಾವತಿ ಅವರು 15 ವರ್ಷಗಳ‌ ಹಿಂದೆ ನಾವೂರಿನ ಮುರಕ್ಕೆ ಬಂದಿದ್ದ ದಿನವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಬಾಲ್ಯ ಕಳೆದ ಊರಿಗೆ ಬಂದಿದ್ದ ಬಗ್ಗೆ ಅಂದು ಮಾತನಾಡಿದ್ದ ನಟಿ 'ಇಲ್ಲಿ ಬಂದು ತನಗೆ ಸಂತೋಷವಾಗಿದೆ. ಬಾಲ್ಯ ನೆನಪಾಗುತ್ತದೆ" ಎಂದು ಲೀಲಾವತಿ ಹೇಳಿದ್ದರು ಎಂದು ದನ್ವಿಲ್ ಡಿಸೋಜ ನೆನಪಿಸಿದ್ದಾರೆ.

ಹಿರಿಯ ನಟಿ ಲೀಲಾವರಿಯವರಿದ್ದ ಮನೆ ಈಗ ಇಲ್ಲ. ಅವರು ಮುಳಿ ಹುಲ್ಲಿನ‌ ಮನೆಯಲ್ಲಿ ವಾಸವಿದ್ದರಂತೆ. ಲೀಲಾವತಿಯವರನ್ನು ಸಾಕಿದ್ದ ಕ್ರಿಶ್ಚಿಯನ್ ಕುಟುಂಬದ ಮಗಳು, ಲೀಲಾವತಿಯವರಿಗೆ ಸೋದರಿಯಂತಿದ್ದ ಲೂಸಿ ಸಿಕ್ವೇರಾ ತಮ್ಮಿಬ್ಬರ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಲೀಲಾವತಿ ಅವರ ಹೆಸರು ಲೀನಾ ಸಿಕ್ವೇರಾ ಎಂದಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಲೀಲಾವತಿ ಅಂತ್ಯಕ್ರಿಯೆ

ನಟಿ ಲೀಲಾವತಿ ಡಿಸೆಂಬರ್ 8 (ಶುಕ್ರವಾರ) ರಂದು ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ನೆಲಮಂಗಲದಿಂದ ತಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಸಂಜೆಯ ಸುಮಾರಿಗೆ ನೆಲಮಂಗಲದ ಸೋಲದೇವನಹಳ್ಳಿಗೆ ವಾಪಸ್ ತೆಗೆದುಕೊಂಡು ಹೋಗಿ ಅವರ ನೆಚ್ಚಿನ ತೋಟದ ಮನೆಯ ಬಳಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

More from Filmibeat

English summary
Leelavathi childhood friends from belthangady shared some memories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X