"ನೋ ಕಂಪ್ಲೈಂಟ್ಸ್.. ನೋ ಕಮೆಂಟ್ಸ್..ನೋಯಿಸಬೇಡಿ ಅಂತಷ್ಟೇ ಹೇಳುತ್ತಿದ್ದೇನೆ"– ವಿನೋದ್ ರಾಜ್

By ಫಿಲ್ಮಿಬೀಟ್ ಡೆಸ್ಕ್

ದೊಡ್ಮೆನೆಗೆ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ಸಂಚಲನ ಸೃಷ್ಟಿಸಿತ್ತು. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರ ವೈಯಕ್ತಿಕ ವಿಚಾರಗಳನ್ನು ಆ ಪೋಸ್ಟ್‌ನಲ್ಲಿ ಪ್ರಸ್ತಾಪ ಮಾಡಿದ್ದರು. ಅದೇ ಪೋಸ್ಟ್ ಈಗ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿದೆ.

"ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾ ಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ. ಚೆನ್ನೈನಲ್ಲಿದ್ದಾರೆ. ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ." ಎಂದು ವಿನೋದ್ ರಾಜ್ ಮದುವೆ ಬಗ್ಗೆ ಬರೆದಿದ್ದರು.

Leelavathi Son Vinod Raj Says No Complaints No Comments on Prakash Raj Mehu Issue

ಇನ್ನೊಂದು ಕಡೆ, "ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ." ಎಂದು ಬರೆದುಕೊಂಡಿದ್ದರು. ಈ ಎರಡು ವಿಷಯಗಳಿಗೆ ಸ್ವತ: ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಇಬ್ಬರೂ ಸಿನಿವುಡ್ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯಿಸಿದ್ದರು. ಈ ವೇಳೆ ಪ್ರಕಾಶ್ ರಾಜ್ ಮೇಹು ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮಲಗಿಯೋ ತಾಯಿಗ್ಯಾಕೆ ತೊಂದರೆ ಕೊಡ್ತೀರಾ?

ಪ್ರಕಾಶ್ ರಾಜ್ ಮೇಹು ಮಾಡಿದ ಆರೋಪಗಳಿಗೆ ವಿನೋದ್ ರಾಜ್ ತಿರುಗೇಟು ನೀಡಿದ್ದಾರೆ. ತಾಯಿ ಲೀಲಾವತಿಯವರಿಗೆ ಈ ವಯಸ್ಸಿನಲ್ಲಿ ತೊಂದರೆ ಕೊಡಬೇಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

"ಅಭಿಮಾನಿಗಳೇ ಉತ್ತರ ಕೊಡುತ್ತಾರೆ. ಈಗಾಗಲೇ ಸಿಕ್ಕಾಪಟ್ಟೆ ಅವರಿಗೆ ಉತ್ತರ ಕೊಟ್ಟಿದ್ದಾರೆ. ಎಷ್ಟು ನೋವಾಗಿದೆ ಅಂದ್ರೆ, ಹೆಣ್ಣು ಮಕ್ಕಳು ಮಾತಾಡಿದ್ದಾರಲ್ಲ ಅವರನ್ನೇ ಕೇಳಿ. ಅವರು ಹೇಳ್ತಾರೆ ನೋಡಿ, ನಾವು ಹೇಳಬಾರದು. ಅವರ ನೋವೇ ನಮ್ಮ ನೋವು. ಯಾಕ್ರಿ, ಮಲಗಿರೋ ಹೆಂಗಸರಿಗೆ ಈ ರೀತಿ ತೊಂದರೆ ಕೊಡ್ತೀರಾ ಅಂತ ಕೇಳಿದ್ರಲ್ಲ ಅದೇ. ಭವಿಷ್ಯದಲ್ಲಿ ಅಮ್ಮವರು ಏನೇನು ಮಾಡಿದ್ದಾರೆ ಅನ್ನೋದು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು." ಎಂದು ಸಿನಿವುಡ್‌ ಯೂಟ್ಯೂಬ್ ಚಾನೆಲ್‌ಗೆ ವಿನೋದ್ ರಾಜ್ ಹೇಳಿದ್ದಾರೆ.

Leelavathi Son Vinod Raj Says No Complaints No Comments on Prakash Raj Mehu Issue

"ಹನಿ ಕೂಡಿ ಹಳ್ಳ.. ಧ್ವನಿ ಕೂಡ ರಾಗ"

ತಾಯಿ ಲೀಲಾವತಿ ಅವರ ಬಗ್ಗೆ ವಿನೋದ್ ರಾಜ್ ನೋವಿನಿಂದ ಮಾತಾಡಿದ್ದಾರೆ. ಅವರು ಮಾಡಿರೋ ಕೆಲಸ ಅವರ ಹೆಸರನ್ನು ಉಳಿಸುತ್ತೆ. ಅವರು ಕಟ್ಟಿರುವ ಎರಡು ಆಸ್ಪತ್ರೆಗಳೇ ಅವರ ಬಗ್ಗೆ ಜನರಿಗೆ ತಿಳಿಸಿಕೊಡುತ್ತೆ ಎಂದಿದ್ದಾರೆ.

"ಅವರು ಮಾಡಿರೋ ಎರಡು ಕಟ್ಟಡನೇ ಅವರ ಹೆಸರನ್ನು ನಿಲ್ಲಿಸುತ್ತೆ. ಅವರು ಏನು ಅನ್ನೋದನ್ನು ಜನತೆಗೆ ತೋರಿಸುತ್ತೆ. ಮೊದಲು ನಿಮಗೆ ಆ ಒಳ್ಳೆಯ ಕೆಲಸ ಮಾಡೋಕೆ ಆದರೆ, ನೀವು ಮಾಡಿ. ಕೊರೊನಾ ಟೈಂನಲ್ಲಿ ನನ್ನ ತಾಯಿ ಓಡಾಡಿದ್ರಲ್ಲ. ಅವರೇನು ಕೋಟ್ಯಾಧೀಶ್ವರರಲ್ಲ. ಹಾಗೇನೆ ಹನಿ ಕೂಡಿ ಹಳ್ಳ. ಧ್ವನಿ ಕೂಡ ರಾಗ. ಯಾವತ್ತೋ ಕೊಂಡಿರೋ ಭೂಮಿ, ಬೆಲೆ ಬಂದ್ಮೇಲೆ ಮಾರಿ ಆ ದುಡ್ಡಿನಲ್ಲಿ ಆದಾಯ ತೆರಿಗೆ ಕಟ್ಟಿನೇ ಆ ಕಟ್ಟಡ ಕಟ್ಟಿರೋದು. ಈಗ ಕಟ್ಟಿರೋ ದನದ ಆಸ್ಪತ್ರೆಯನ್ನೂ ನಾವು ಅದೇ ತರಹನೇ ಮಾಡುತ್ತಿರೋದು." ಎಂದು ವಿನೋದ್ ರಾಜ್ ಆಕ್ರೋಶ ಹೊರಹಾಕಿದ್ದಾರೆ.

"ನೋ ಕಂಪ್ಲೈಂಟ್ಸ್.. ನೋ ಕಮೆಂಟ್ಸ್"

"ಯಾರ ಮೇಲೆ ಕಂಪ್ಲೈಂಟ್ಸ್ ಇಲ್ಲ. ನೋ ಕಂಪ್ಲೈಂಟ್ಸ್.. ನೋ ಕಮೆಂಟ್ಸ್. ಇದರ ಬಗ್ಗೆ ನಾನು ಕಮೆಂಟ್ ಮಾಡಿಲ್ಲ. ನೋಯಿಸಬೇಡಿ ಅಂತ ಮಾತ್ರ ನಾನು ಹೇಳುತ್ತಿದ್ದೇನೆ. ನಾನು ಯಾರನ್ನೂ ನೋಯಿಸುವುದಕ್ಕೆ ಇಷ್ಟಪಡಲ್ಲ. ನಾನು ನೋಡಿದ್ರಲ್ಲಿ 75 ರಿಂದ 80 ಭಾಗದ ಜನರಿಗೆ ನೋವಾಗಿದೆ. ಆ 80 ಭಾಗದಲ್ಲಿ ನನ್ನ ತಾಯಿಯವರು ಹಾಗೂ ನಾನು ಸೇರಿದ್ದೇವೆ." ಎಂದು ಸಿನಿವುಡ್ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯಿಸಿದ್ದಾರೆ.

"10 ವರ್ಷದಿಂದ ಬೀದಿ ನಾಯಿಗಳಿಗೆ ಊಟ ಹಾಕಿದ್ದೇವೆ. ಅದು ಬಿಟ್ಟರೆ ನಮ್ಮ ಜೀವನದಲ್ಲಿ ಏನಿದೆ? ಅದನ್ನು ಬಿಟ್ಟರೆ ನಮ್ಮ ಜೀವನದಲ್ಲಿ ಇನ್ನೇನಿದೆ? ಜೀವನ ನಡೀಬೇಕು ನಡೆಸುತ್ತಿದ್ದೇವೆ. ಏನೋ ಕಂಡು ಹಿಡಿದು ಬಿಟ್ಟಿದ್ದೇವೆ ಅಂತ ಮಾತ್ರ ಹೇಳ್ಬೇಡಿ. ಏನದು? ಅದು ನಮ್ಮ ವೈಯಕ್ತಿಕ ಜೀವನ ನಿಮಗ್ಯಾಕೆ ಬೇಕು? ನಾನ್ಯಾಕೆ ಕಮೆಂಟ್ ಮಾಡ್ಬೇಕು? ನೀವ್ಯಾಕೆ ಪ್ರಶ್ನೆ ಕೇಳ್ಬೇಕು? ಇದರಿಂದ ನೀವು ಪ್ರಶ್ನೆ ಕೇಳಿದಷ್ಟೇ ಬಂತು. ಮನಸ್ಸಿಗೆ ನೋವು ಮಾಡಿದ್ದಷ್ಟೇ ಬಂತು." ಎಂದು ವಿನೋದ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ.

More from Filmibeat

English summary
Leelavathi Son Vinod Raj Says No Complaints No Comments on Prakash Raj Mehu Issue, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X