ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮೇಲಿನ ಆರೋಪ ಸಾಬೀತಾದರೆ ಶಿಕ್ಷೆ ಏನು? ರಮ್ಯಾ ಹೇಳಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಿದ್ದರಿಂದ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ಪ್ರೇಯಸಿ/ಪತ್ನಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಹೀಗಾಗಿ ಸಿಟ್ಟಿಗೆದ್ದಿದ ಪವಿತ್ರಾ ಗೌಡ ನಟ ದರ್ಶನ್‌ ಗಮನಕ್ಕೆ ತಂದಿದ್ದರು.

ಇದೇ ರೇಣುಕಾಸ್ವಾಮಿ ಹಲ್ಲೆ ಹಾಗೂ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಈ ಸಂಬಂಧ ದರ್ಶನ್‌ರನ್ನು ಇಂದು (ಜೂನ್ 11) ಮೈಸೂರಿನಲ್ಲಿ ಬಂಧಿಸಿ, ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಅವರ ಕೊಲೆ ಮಾಡಿದ ಆರೋಪವೀಗ ದರ್ಶನ್ ಮೇಲಿದೆ. ಹೀಗಾಗಿ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಸಾಬೀತಾದರೆ ಏನಾಗುತ್ತೆ? ಶಿಕ್ಷೆಯ ಪ್ರಮಾಣವೇನು?

Legal Consequences for Darshan if Found Guilty in Renukaswamy Murder Case Ramya tweet Viral

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ಯಾಪ್ ಮಾಡಿದ ಆರೋಪ, ಅಜ್ಞಾತ ಸ್ಥಳದಲ್ಲಿ ಇರಿಸಿ, ಮಾರಣಾಂತಿಕ ಹಲ್ಲೆ, ಕೊಲೆ ಮಾಡಿರುವ ಆರೋಪ, ಬಳಿಕ ಮೃತದೇಹವನ್ನು ಎಸೆದು ಸಾಕ್ಷ್ಯವನ್ನು ನಾಶ ಮಾಡಿದ ಆರೋಪಗಳು ದರ್ಶನ್ ಹಾಗೂ ಅವರ ಸಹಚರರ ಮೇಲಿದೆ. ಈ ಸಂಬಂಧ ದರ್ಶನ್ ಸೇರಿ ಸುಮಾರು 10 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ.

ಈ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಸಾಬೀತಾದರೆ, ದೊಡ್ಡ ಕಂಟಕ ಎದುರಾಗಲಿದೆ. ಒಂದು ವೇಳೆ ಆರೋಪ ಸಾಬೀತಾದರೆ, ದರ್ಶನ್‌ಗೆ ಏನು ಶಿಕ್ಷೆ ಆಗುಬಹುದು? ಅನ್ನೋ ಸಹಜವಾಗಿ ಜನರ ಮುಂದಿದೆ. ದರ್ಶನ್ ವಿರುದ್ಧ 302 (ಕೊಲೆ), 201 (ಸಾಕ್ಷ್ಯ ನಾಶ), ಸೇರಿದಂತೆ ಕಿಡ್ನಾಪ್ ಕೇಸ್ ಅನ್ನೂ ಸೇರಿಸಲಾಗುತ್ತಿದೆ ಅಂತ ವರದಿಯಾಗಿದೆ. ಈ ಸಂಬಂಧ ಕಾನೂನಿನ ಅಡಿಯಲ್ಲಿ ಏನೆಲ್ಲ ಶಿಕ್ಷೆ ಆಗಬಹುದು ಎಂದು ಟ್ವೀಟ್ ಮಾಡಿದ ಪೋಸ್ಟ್‌ನ್ನು ಮೋಹಕತಾರೆ ರಮ್ಯಾ ರೀಟ್ವೀಟ್ ಮಾಡಿದ್ದಾರೆ.

ಮೋಹಕತಾರೆ ಟ್ವೀಟ್ ಮಾಡಿದ ಪೋಸ್ಟ್‌ನಲ್ಲಿ ಕರ್ನಾಟಕ ಬಾಕ್ಸಾಫೀಸ್ ಅನ್ನುವ ಖಾತೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೇಸ್ ದಾಖಲಾದರೆ ಏನಾಗುತ್ತೆ? ಅನ್ನೋದನ್ನು ವಿವರಿಸಲಾಗಿದೆ ಅದನ್ನೇ ರಮ್ಯಾ ಕೂಡ ರೀ ಟ್ವೀಟ್ ಮಾಡಿದ್ದರು. ಐಪಿಸಿ ಸೆಕ್ಷನ್ ಪ್ರಕಾರ, ಇವೆಲ್ಲವೂ ದೊಡ್ಡ ಅಪರಾಧವಾಗಿದ್ದು, ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆಯಿದೆ. ಈ ಶಿಕ್ಷೆಯಲ್ಲಿ ಸುಮಾರು 7 ವರ್ಷಗಳಿಂದ 14 ವರ್ಷಗಳ ವರೆಗೆ ಶಿಕ್ಷೆಯಾಗಬಹುದು ಎಂದು ಆ ಟ್ವೀಟ್‌ನಲ್ಲಿ ಹೇಳಲಾಗಿದೆ.

ಇತ್ತ ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ದರ್ಶನ್ ಅವರನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದಾರೆ. ಅವರನ್ನು ಅರೆಸ್ಟ್ ಮಾಡಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಕೇವಲ ವಿಚಾರಣೆ ಮಾಡಲಾಗುತ್ತಿದೆ. ಈ ವಿಚಾರಣೆಗೆಯಲ್ಲಿ "ನಾನು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ದರ್ಶನ್ ಹೇಳಿದ್ದಾರೆ" ಎಂದು ಹೇಳಿದ್ದಾರೆ.

ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಸುಮಾರು 10 ಮಂದಿಯನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ಕ ಮಂದಿಗಳ ಜೊತೆ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ಇದ್ದರು ಎನ್ನಲಾಗಿದೆ. ಸದ್ಯಕ್ಕೆ ಈಗ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹತ್ತ ಮಂದಿಯನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

More from Filmibeat

English summary
Explore the potential legal penalties that Darshan could face if convicted in the murder case of Renukaswamy. Insight on judicial outcomes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X