twitter
    For Quick Alerts
    ALLOW NOTIFICATIONS  
    For Daily Alerts

    ಕೊಕೇನ್, ಹೆರಾಯಿನ್ ಬಿಡಿ, ಗಾಂಜಾ ಕಾನೂನುಬದ್ಧಗೊಳಿಸಿ: ನಟಿ ನಿವೇದಿತಾ ಆಗ್ರಹ

    |

    ಭಾರತೀಯ ಕಾನೂನಿನಂತೆ ಗಾಂಜಾ ಮಾರುವುದು, ಹೊಂದುವುದು, ಔಷಧೀಯವಲ್ಲದ ಕಾರಣಕ್ಕೆ ಬಳಸುವುದು, ಅನುಮತಿ ಇಲ್ಲದೆ ಗಾಂಜಾ ಬೆಳೆಯುವುದು ಶಿಕ್ಷಾರ್ಹ ಅಪರಾಧ.

    Recommended Video

    ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

    ಶಿವನನ್ನು ಪೂಜಿಸುವ ದೇಶದಲ್ಲಿ ಅವನ ಮೆಚ್ಚಿನ ಗಾಂಜಾ ಅಥವಾ ಕೆಲವೆಡೆ ಇನ್ನೂ ಬೇರೆ-ಬೇರೆ ಹೆಸರುಗಳಲ್ಲಿ ಕರೆಯಲ್ಪಡುವ ಇದಕ್ಕೆ ನಿಷೇಧವೇಕೆ? ಇದರ ಬಗ್ಗೆ ಉತ್ತರ ಭಾರತದಲ್ಲಿ ಚರ್ಚೆಗಳು ಜೋರಾಗಿಯೇ ಆಗುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಚರ್ಚೆ ಕಡಿಮೆ.

    ತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾ

    ಆದರೆ ಈಗ ಈ ಬಗ್ಗೆ ಕನ್ನಡದ ನಟಿಯೊಬ್ಬರು ಮಾತನಾಡುವ ಧೈರ್ಯ ತೋರಿದ್ದಾರೆ. ಪುರುಷರೇ ಮಾತನಾಡಲು ಹೆದರುವ ಸೂಕ್ಷ್ಮ ವಿಷಯದ ಬಗ್ಗೆ ಅಳುಕಿಲ್ಲದೆ ಮಾತನಾಡಿದ್ದಾರೆ ನಟಿ ನಿವೇದಿತಾ. ಅಷ್ಟೆ ಅಲ್ಲ ತಾವು ಮಾಡುತ್ತಿರುವ ಆಗ್ರಹಕ್ಕೆ ಆರೋಗ್ಯಕರ ಚರ್ಚೆಗೆ ಒಳಪಡಿಸಬಹುದಾದ. ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕು ಎಂಬ ಬಗ್ಗೆ 'ಫಿಲ್ಮೀಬೀಟ್‌' ಜೊತೆಗೆ ನಿವೇದಿತಾ ಆಡಿದ ಮಾತುಗಳು ಇಲ್ಲಿವೆ...

    'ದೇವಸಸ್ಯ ಗಾಂಜಾವನ್ನು ಡ್ರಗ್ಸ್‌ ಹೋಲಿಸುವುದು ಸರಿಯಲ್ಲ'

    'ದೇವಸಸ್ಯ ಗಾಂಜಾವನ್ನು ಡ್ರಗ್ಸ್‌ ಹೋಲಿಸುವುದು ಸರಿಯಲ್ಲ'

    ಕೆಲವು ದಿನಗಳಿಂದ ಸುದ್ದಿವಾಹಿನಿಗಳಲ್ಲಿ ಕೊಕೇನ್, ಹೆರಾಯಿನ್ ಜೊತೆಗೆ ಗಾಂಜಾವನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ. ಸನಾತನ ಧರ್ಮದ ಬಗ್ಗೆ ಅದರ ಆಚರಣೆಗಳ ಬಗ್ಗೆ ಕಾಳಜಿಯುಳ್ಳ ನನಗೆ ಇದು ಬಹುಬೇಸರ ತರಿಸಿದೆ. ಸನಾತನ ಧರ್ಮದಲ್ಲಿ ಗಾಂಜಾಕ್ಕೆ ತನ್ನದೇ ಆದ ಸ್ಥಾನವಿದೆ. ಔಷಧೀಯಗುಣವುಳ್ಳ ದೇವಸಸ್ಯವೊಂದನ್ನು ಸಿಂಥೆಟಿಕ್ ಡ್ರಗ್ಸ್ ಜೊತೆಗೆ ಹೋಲಿಕೆ ಮಾಡುತ್ತಿರುವುದು ಧರ್ಮಕ್ಕೆ ಅದರ ಸನಾತನೆಗೆ ಮಾಡುವ ಅಪಚಾರ ಎಂದರು ನಟಿ ನಿವೇದಿತಾ.

    ಕನ್ನಡ ಜನಪದದಲ್ಲೂ ಗಾಂಜಾ ಉಲ್ಲೇಖವಿದೆ: ನಿವೇದಿತಾ

    ಕನ್ನಡ ಜನಪದದಲ್ಲೂ ಗಾಂಜಾ ಉಲ್ಲೇಖವಿದೆ: ನಿವೇದಿತಾ

    'ನಮ್ಮದೇ ರಾಜ್ಯದ ಸಂಸ್ಕೃತಿ, ಇತಿಹಾಸದ ಪರಿಚಯ ಇದ್ದರು ಗಾಂಜಾ ಕುರಿತು ಪೂರ್ವಾಗ್ರಹ ಇಟ್ಟುಕೊಳ್ಳಲಾರರು. ಮಂಟೇಸ್ವಾಮಿಯ ಬಹುತೇಕ ಹಾಡುಗಳಲ್ಲಿ ಗಾಂಜಾ ಅಥವಾ ಭಂಗಿಯ ಪ್ರಸ್ತಾಪವಿದೆ. ಕನಕಪುರದ ಕಡೆಗಳಲ್ಲಿ ಶಿವರಾತ್ರಿಯಂದು ಗಾಂಜಾ ಪ್ರಸಾದವಾಗಿ ವಿನಿಯೋಗವಾಗುತ್ತದೆ. ನಾನು, ನೀನಾಸಂ ತಂಡದೊಂದಿಗೆ ಮಂಟೆಸ್ವಾಮಿ ನಾಟಕ ಮಾಡಿದ್ದಾಗ ಈ ವಿಷಯ ನನ್ನ ಗಮನಕ್ಕೆ ಬಂದಿತು' ಎಂದು ಕರ್ನಾಟಕದ ಜನಪದ ಪರಂಪರೆಯಲ್ಲೂ ಗಾಂಜಾದ ಉಲ್ಲೇಖ ಇರುವ ಬಗ್ಗೆ ಗಮನ ಸೆಳೆದರು ನಿವೇದಿತಾ.

    ಪೈರಸಿ ಕಾಟ: ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ರಾಧಿಕಾ ಕುಮಾರಸ್ವಾಮಿಪೈರಸಿ ಕಾಟ: ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ರಾಧಿಕಾ ಕುಮಾರಸ್ವಾಮಿ

    'ಗಾಂಜಾವನ್ನು ವಿಜಯ ಎಂದು ಕರೆದಿದ್ದಾರೆ ಗುರು-ಹಿರಿಯರು'

    'ಗಾಂಜಾವನ್ನು ವಿಜಯ ಎಂದು ಕರೆದಿದ್ದಾರೆ ಗುರು-ಹಿರಿಯರು'

    ಹಲವು ಔಷಧೀಯ ಗುಣಗಳನ್ನು ಗಾಂಜಾ ಹೊಂದಿದೆ. ಆಯುರ್ವೇದ ಶಾಸ್ತ್ರದಲ್ಲಿ ಪ್ರಭಾವಿಯಾದ ಔಷಧ ಈ ಗಾಂಜಾ. ಗಾಂಜಾವನ್ನು 'ವಿಜಯ' ಎಂಬ ಹೆಸರಿನಿಂದ ಕರೆಯಲಾಗಿದೆ. ತುಳಸಿ ಸಮಾನವಾದ ಔಷಧೀಯ ಗುಣವಿರುವ ಈ ಗಿಡವನ್ನು ಮಾದಕ ವಸ್ತುಗಳಿಗೆ ಹೋಲಿಸುವುದು ನಮ್ಮ ಪೂರ್ವಿಕರ, ಹಿರಿಯರ ಜ್ಞಾನ ಸಂಪತ್ತಿಗೆ ಮಾಡುವ ಅಪಮಾನ' ಎಂದು ಆಕ್ರೋಶ ಹೊರಹಾಕಿದರು ನಿವೇದಿತಾ.

    ಸಂಶೋಧಕಿಯೊಬ್ಬರ ಸಂಶೋಧನೆ ಆಧಾರದಲ್ಲಿ ನಿವೇದಿತಾ ಮಾತು

    ಸಂಶೋಧಕಿಯೊಬ್ಬರ ಸಂಶೋಧನೆ ಆಧಾರದಲ್ಲಿ ನಿವೇದಿತಾ ಮಾತು

    ಕೃಷಿ, ವ್ಯವಹಾರ ಉದ್ದೇಶ, ಔಷಧೀಯ ಉದ್ದೇಶ ಇನ್ನೂ ಹಲವು ಕಾರಣಗಳಿಗೆ ಗಾಂಜಾವನ್ನು ಬಳಸಬಹುದು. ಗಾಂಜಾ ಜೈವಿಕ ಇಂಧನವಾಗಿಯೂ ಬದಲಾಗುತ್ತದೆ. ಅಣುಬಾಂಬ್ ನಿಂದ ನಾಶವಾಗಿರುವ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಹಿರೋಶಿಮಾ-ನಾಗಸಾಕಿಯಲ್ಲಿ ಗಾಂಜಾವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗಿತ್ತಂತೆ. ಇದೆಲ್ಲವನ್ನೂ ನಾನು ಪ್ರಿಯಾ ಮಿಶ್ರಾ ಎಂಬ ಸಂಶೋಧಕಿಯ ಸಂಶೋಧನೆಯನ್ನಾಧರಿಸಿ ಹೇಳುತ್ತಿದ್ದೇನೆ. ಇವು ಕಟ್ಟುಕತೆಗಳಲ್ಲ ಎಂದು ತಮ್ಮ ಮಾತುಗಳಿಗೆ ಸಂಶೋಧಕಿಯ ಪ್ರಮಾಣ ಒದಗಿಸಿದರು.

    ಕೆಲವು ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆ ಆಗಿದೆ: ನಿವೇದಿತಾ

    ಕೆಲವು ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆ ಆಗಿದೆ: ನಿವೇದಿತಾ

    ಇದಾಗಲೇ ಹೆರಾಯಿನ್, ಕೊಕೇನ್‌, ಎಲ್‌ಎಸ್‌ಡಿಗಳಂಥಹಾ ಸಿಂಥೆಟಿಕ್ ಡ್ರಗ್ಸ್ ನ ಬಳಕೆ ಹೆಚ್ಚಾಗಿಬಿಟ್ಟಿದೆ. ಇವುಗಳ ಅವಲಂಬನೆ ಕಡಿಮೆಗೊಳಿಸಲೂ ಸಹ ಗಾಂಜಾ ಬಳಸಬಹುದು. ಗಾಂಜಾ ಕಾನೂನುಬದ್ಧಗೊಳಿಸಿರುವ ಹಲವು ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆ ಇದೆ. ಇದರ ಅಂಕಿ-ಅಂಶಗಳು ಲಭ್ಯವಿದೆ ಎಂದರು ನಿವೇದಿತಾ.

    English summary
    Actress Nivedhitha said Cannabis should legalize in India. It has high medicine value.
    Tuesday, September 1, 2020, 19:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X