ಬಾಲಿವುಡ್ ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ
ಬಾಲಿವುಡ್ ಲೆಜೆಂಡ್ ನಟ ದಿಲೀಪ್ ಕುಮಾರ್ (94) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿಲೀಪ್ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ದಿಲೀಪ್ ಕುಮಾರ್ ಅವರ ಆರೋಗ್ಯದ ಬಗ್ಗೆ ಮಾತನಾಡಿರುವ ವೈದ್ಯರು ''ದಿಲೀಪ್ ಆರೋಗ್ಯ ಚೇತರಿಸಿದೆ. ಅವರು ಡಯಾಲೀಸಿಸ್ ನಲ್ಲೂ ಇಲ್ಲ ಹಾಗೂ ವೆಂಟಿಲೇಟರ್ ನಲ್ಲೂ ಇಲ್ಲ. ಕಿಡ್ನಿಯ ಸಂಬಂಧಿ ಕಾರ್ಯಗಳು ಸುಧಾರಿಸಿದೆ'' ಎಂದು ತಿಳಿಸಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದ ದಿಲೀಪ್ ಕುಮಾರ್ ಅವರು, ನಿರ್ಜಲೀಕರಣದಿಂದ ಅಶ್ವಸ್ಥಗೊಂಡು ಆಗಸ್ಟ್ 3 ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಬೇಸರದ ಸಂಗತಿ ಎಂದರೆ, ಹಿರಿಯ ನಟನ ಆರೋಗ್ಯ ವಿಚಾರಿಸಲು ಬಾಲಿವುಡ್ ಚಿತ್ರರಂಗದ ಯಾವ ನಟರೂ ಆಸ್ಪತ್ರಗೆ ಭೇಟಿ ನೀಡಿಲ್ಲ ಎನ್ನಲಾಗಿದೆ.
ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಕೊನೆಯದಾಗಿ 1998 ರಲ್ಲಿ 'ಖಿಲಾ' ಚಿತ್ರದಲ್ಲಿ ಅಭಿನಯಿಸಿದ್ದರು. 'ದೇವದಾಸ್', 'ಕರ್ಮ', 'ಮುಘಲ್ ಎ ಆಝಾಮ್' ಅಂತಹ ಚಿತ್ರಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟ ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ದಿಲೀಪ್ ಕುಮಾರ್ ಅವರಿಗೆ, 1994 ರಲ್ಲಿ ದಾದಾ ಪಾಲ್ಕೆ ಪ್ರಶಸ್ತಿ ಹಾಗೂ 2015 ರಲ್ಲಿ 'ಪದ್ಮ ವಿಭೂಷಣ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.


Click it and Unblock the Notifications











