twitter
    For Quick Alerts
    ALLOW NOTIFICATIONS  
    For Daily Alerts

    ಗಾನ ಕೋಗಿಲೆ ಎಸ್.ಜಾನಕಿ ಸಾವಿನ ವದಂತಿ ವೈರಲ್: ಸ್ಪಷ್ಟನೆ ನೀಡಿದ ಪುತ್ರ ಮುರಳಿ ಕೃಷ್ಣ

    |

    ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ, ಗಾನ ಸರಸ್ವತಿ ಎಸ್.ಜಾನಕಿ ನಿಧನದ ವದಂತಿ ವೈರಲ್ ಆಗಿದೆ. ಎಸ್. ಜಾನಕಿ ಆರೋಗ್ಯವಾಗಿದ್ದಾರೆ, ದಯವಿಟ್ಟು ಗಾಳಿಸುದ್ದಿ ಹಬ್ಬಿಸಬೇಡಿ ಎಂದು ಪುತ್ರ ಮುರಳಿ ಕೃಷ್ಣ ಸ್ಪಷ್ಟನೆ ಪಡಿಸಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡುತ್ತಿದ್ದಾರೆ.

    Recommended Video

    ಪತಿ ನೆನಪಿನಲ್ಲಿ ಡಿ.ಪಿ ಬದಲಿಸಿದ ಮೇಘನಾ ರಾಜ್ | Meghana Raj | Chiranjeevi Sarja

    ಎಸ್.ಜಾನಕಿ ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪುತ್ರ ಮುರಳಿ ಕೃಷ್ಣ ವೆಬ್ ಪೋರ್ಟಲ್ ಒಂದಕ್ಕೆ ಸ್ಪಷ್ಟನೆ ನೀಡುವ ಮೂಲಕ ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಇನ್ನೂ ನಟ ಮತ್ತು ನಿರ್ಮಾಪಕ ಮನೋಬಲ ಅವರು ಟ್ವೀಟ್ ಮಾಡಿ 'ಇದು ಸುಳ್ಳು ಸುದ್ದಿ ಚಿಕ್ಕ ಶಸ್ತ್ರ ಚಿಕಿತ್ಸೆಯಾಗಿದೆ. ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಹೇಳಿದ್ದಾರೆ.

    ಖ್ಯಾತ ಗಾಯಕಿಯ ಆರೋಗ್ಯದ ಬಗ್ಗೆ ವದಂತಿ ಹಬ್ಬುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅಂದರೆ 2016 ಮತ್ತು 2017ರಲ್ಲಿಯೂ ಇದೆರೀತಿಯ ವದಂತಿ ಹಬ್ಬಿತ್ತು. ಎಸ್.ಜಾನಕಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂದೆ ಗಾಳಿ ಸುದ್ದಿಗಳು ಹರಿದಾಡುತ್ತಿರುತ್ತೆ. ಕುಟುಂಬದವರು ಸ್ಪಷ್ಟನೆ ನೀಡುವ ಮೂಲಕ ರೂಮರ್ ಗೆ ತೆರೆಎಳೆಯುತ್ತಿರುತ್ತಾರೆ.

    Legendary Singer S.Janaki Son Clarified About His Mother Health

    ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿಯಿಂದ ಗಾನಕೋಗಿಲೆಗೆ ಗಾನ ಗೌರವಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿಯಿಂದ ಗಾನಕೋಗಿಲೆಗೆ ಗಾನ ಗೌರವ

    ಮೂರಿ ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ಮೂಲಕ ಸಂಗೀತ ಲೋಕಕ್ಕೆ ಗಾನ ಕೋಗಿಲೆ ವಿದಾಯ ಹೇಳಿದ್ದರು. ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಆಯೋಜಿಸಿದ್ದ ಸಂಗೀತ ಸಂಜೆಯಲ್ಲಿ ಪಿ.ಬಿ ಶ್ರೀನಿವಾಸ್ ಜೊತೆ ಎಸ್.ಜಾನಕಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಿದ್ದರು. ಹಾಗಾಗಿ ಮೈಸೂರಿನಿಂದ ಪ್ರಾರಂಭವಾದ ಸಂಗೀತ ಪಯಣವನ್ನು ಮೈಸೂರಿನಲ್ಲಿಯೆ ಕೊನೆಗೊಳಿಸಿದ್ದಾರೆ.

    ಎಸ್. ಜಾನಕಿ ಅವರಿಗೀಗ 82 ವರ್ಷ. ಎಸ್. ಜಾನಕಿ ಸುಮಾರು 17 ಭಾಷೆಯಲ್ಲಿ 48 ಸಾವಿರಕ್ಕು ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಜಾನಕಿ ಅವರನ್ನು ಜಾನಕಿಅಮ್ಮ ಅಂತಾನೆ ಕರೆಯಲಾಗುತ್ತೆ. ಜಾನಕಿ ಅಮ್ಮ ಆರೋಗ್ಯವಾಗಿರಲಿದೆ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    English summary
    Legendary singer S.Janaki death rumours viral. Her son clarified about mother health.
    Monday, June 29, 2020, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X