ಕನ್ನಡದ ನಿರ್ಮಾಪಕನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ನಟಿ..!
ಚಿತ್ರರಂಗದಲ್ಲಿ ಒಮ್ಮೊಮ್ಮೆ ಪ್ರಣಯ ಪಕ್ಷಿಗಳಂತೆ ಜೊತೆಯಾಗಿ ಓಡಾಡಿಕೊಂಡು ಇದ್ದವರನ್ನು ಕಂಡು ಅನೇಕರು ಇವರು ಒಂದಿಲ್ಲೊಂದು ದಿನ ಮದುವೆಯಾಗುತ್ತಾರೆ ಎಂದುಕೊಂಡಿರುತ್ತಾರೆ. ಆದರೆ ಎಲ್ಲರ ಕಣ್ಣು ಕುಕ್ಕುವಂತೆ ಓಡಾಡುವ ಇವರು ಕೊನೆವರೆಗೆ ಮದುವೆಯಾಗುವುದೇ ಇಲ್ಲ. ಬದಲಿಗೆ ಬ್ರೇಕಪ್ ಮಾಡಿಕೊಂಡು ಬಿಡುತ್ತಾರೆ. ಇನ್ನು ಕೆಲ ಒಮ್ಮೆ ಜೊತೆ ಜೊತೆಯಲ್ಲಿ ತಿರುಗಾಡಿರುವುದಿಲ್ಲ. ಸಾರ್ವಜನಿಕವಾಗಿ ಎಲ್ಲಿಯೂ ಯಾರ ಕಣ್ಣಿಗೆ ಬಿದ್ದಿರುವುದಿಲ್ಲ. ಆದರೆ
ಏಕಾಏಕಿ ಮದುವೆಯ ಸುದ್ದಿಯನ್ನು ಹಂಚಿಕೊಂಡು ನೋಡುಗರನ್ನು ಅಚ್ಚರಿಗೆ ದೂಡುತ್ತಾರೆ. ಇದಕ್ಕೆ ಲೇಖಾ ಚಂದ್ರ ಸದ್ಯದ ಉದಾಹರಣೆ. ಹೌದು, ಲೇಖಾ ಚಂದ್ರ.. ಕೋಮಲ್ ಅಭಿನಯದ ನಮೋ ಭೂತಾತ್ಮ 2 .. ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ..ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಸೇರಿ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಚೆಲುವೆ.

ಇಂಥಾ ಲೇಖಾ ಚಂದ್ರ ಸದ್ಯ ಸದ್ದಿಲ್ಲದೇ ಶ್ರೇಯಸ್ ದರ್ಶನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಶ್ರೇಯಸ್ ದರ್ಶನ್ ಬೇರೆ ಯಾರು ಅಲ್ಲ. ಬದಲಿಗೆ ಇವರು ಕೂಡ ಕನ್ನಡ ಚಿತ್ರರಂಗದವರೇ.
ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ ಬಲರಾಮನ ದಿನಗಳು ಚಿತ್ರಕ್ಕೆ ಹಣ ಹೂಡಿರುವ ನಿರ್ಮಾಪಕ ಇವರು. ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಅತುಲ್ ಕುಲಕರ್ಣಿ, ಪ್ರಿಯಾ ಆನಂದ್, ಇದ್ದಾರೆ. ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಹೀಗೆ ಮೊದಲ ಪ್ರಯತ್ನದಲ್ಲಿಯೇ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಶ್ರೇಯಸ್ ದರ್ಶನ್ ಅವರ ಕೈಯನ್ನು ಈಗ ಲೇಖಾ ಚಂದ್ರ ಹಿಡಿದಿದ್ದಾರೆ. ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇನ್ನು ಲೇಖಾ ಚಂದ್ರ ಮತ್ತು ಶ್ರೇಯಸ್ ದರ್ಶನ್ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. ಇಬ್ಬರ ಲವ್ ಸ್ಟೋರಿ ಇನ್ನು ಬಹಿರಂಗವಾಗದಿದ್ದರೂ ಕಳೆದ ಮೇನಲ್ಲಿ ಲೇಖಾ ಚಂದ್ರ ಜೊತೆ ಕ್ಲಿಕಿಸಿಕೊಂಡ ಕೆಲ ಫೋಟೊಗಳನ್ನು ಕೊಲಾಜ್ ಮಾಡಿ ಶ್ರೇಯಸ್ ದರ್ಶನ್ ಹಂಚಿಕೊಂಡಿದ್ದರು.
ಸದ್ಯ ಲೇಖಾ ಚಂದ್ರ ಮತ್ತು ಶ್ರೇಯಸ್ ದರ್ಶನ್ ತಮ್ಮ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಕಲೇಶಪುರದ ರೆಸಾರ್ಟ್‌ವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಶೀಘ್ರದಲ್ಲಿಯೇ ಮದುವೆಯಾಗುವ ಸಾಧ್ಯತೆ ಇದೆ.
ಇನ್ನುಳಿದಂತೆ ಸದ್ಯ ಲೇಖಾ ಚಂದ್ರ ಮತ್ತು ಶ್ರೇಯಸ್ ದರ್ಶನ್ ಅವರಿಗೆ ಅನೇಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶಿಶಿರ್ ಮತ್ತು ಸಿದ್ದು ಮೂಲಿಮನಿ ಅವರು ಕೂಡ ಲೇಖಾ ಚಂದ್ರ ಮತ್ತು ಶ್ರೇಯಸ್ ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


Click it and Unblock the Notifications










