'ಕಾವೇರಿ' ವಿಚಾರದಲ್ಲಿ ಸುದ್ದಿಯಾಗಿದ್ದ ಸಿಂಬು ಮೇಲೆ MeToo ಬಾಂಬ್ ಸಿಡಿಸಿದ ನಟಿ.!

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಸ್ನೇಹ ಸಂಬಂಧ ನಿರ್ಮಿಸಲು ತಮಿಳು ನಟ ಸಿಂಬು ಪ್ರಯತ್ನ ಪಟ್ಟಿದ್ದರು. ಒಂದು ಬಾಟಲ್ ನೀರು ಕೇಳಿ ಇಡೀ ಕರ್ನಾಟಕ ಜನರ ಮನಗೆದ್ದ ಈ ನಟನನ್ನು ಯಾರೂ ಮರೆಯುವುದಿಲ್ಲ.

ಈ ಘಟನೆ ಬಳಿಕ ಸಿಂಬು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದಲ್ಲೂ ಸ್ಟಾರ್ ಆಗಿಬಿಟ್ಟರು. ಇದೀಗ, ಈ ನಟನ ಮೇಲೆ ಮೀಟೂ ಆರೋಪ ಕೇಳಿಬಂದಿದೆ.

ತನ್ನ ಜೊತೆಯಲ್ಲಿ ಅಭಿನಯಿಸಿದ್ದ ನಟಿಯಿಂದಲೇ ಲೈಂಗಿಕ ಕಿರುಕುಳದ ದೂರು ಕೇಳಿಬಂದಿದೆ. ಇದನ್ನ ಆ ನಟಿ ಕೇವಲ ಒಂದೇ ಪದದಲ್ಲಿ ಹೇಳಿದ್ದಾರೆ. ಪ್ರತ್ಯಕ್ಷವಾಗಿ ಸಿಂಬು ಹೆಸರು ಪ್ರಸ್ತಾಪ ಮಾಡದ ನಟಿ ಒಂದೇ ಒಂದು ಪದದಲ್ಲಿ ಸುಳಿವು ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟಕ್ಕೂ, ಆ ನಟಿ ಯಾರು.? ಅವರು ಕೊಟ್ಟಿರುವ ಆ ಸುಳಿವು ಏನು.? ಮುಂದೆ ಓದಿ.....

ಲೇಖಾ ವಾಷಿಂಗ್ ಟನ್ ಸಿಡಿಸಿದ ಮೀಟೂ ಬಾಂಬ್

ಲೇಖಾ ವಾಷಿಂಗ್ ಟನ್ ಸಿಡಿಸಿದ ಮೀಟೂ ಬಾಂಬ್

ಬಾಲಿವುಡ್, ಸ್ಯಾಂಡಲ್ ವುಡ್ ರೀತಿಯಲ್ಲೇ ಈಗ ತಮಿಳಿನಲ್ಲೂ ಈ ಮೀಟೂ ಅಭಿಯಾನ ಚುರುಕಾಗಿದೆ. ಬಹುಭಾಷಾ ನಟಿ ಲೇಖಾ ವಾಷಿಂಗ್ ಟನ್ ಈಗ ಮೀಟೂ ಅಭಿಯಾನದಲ್ಲಿ ಸಂಚಲನ ಸೃಷ್ಟಿಸಿದ್ದು, ತಮಿಳಿನ ಖ್ಯಾತ ನಟ ಸಿಂಬು ಅವರ ಮೇಲೆ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಒಂದೇ ಒಂದು ಪದವನ್ನ ಪ್ರಕಟಿಸಿ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ್ದಾರೆ.

'ಕೆಟ್ಟವನ್' ಮೀಟೂ

'ಕೆಟ್ಟವನ್' ಮೀಟೂ

ಲೇಖಾ ವಾಷಿಂಗ್ ಟನ್ ತಮ್ಮ ಟ್ವಿಟ್ಟರ್ ನಲ್ಲಿ ಮೀಟೂ ಅಭಿಯಾನಕ್ಕೆ ಪ್ರತಿಕ್ರಿಯಿಸಿದ್ದು, ತಮಗೂ ಕಿರುಕುಳವಾಗಿ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. MeToo ಎಂಬ ಹ್ಯಾಷ್ ಟ್ಯಾಗ್ ಬಳಸಿ 'ಕೆಟ್ಟವನ್' ಎಂಬ ಒಂದೇ ಒಂದು ಪದವನ್ನ ಬರೆದುಕೊಂಡಿದ್ದಾರೆ. ಅಲ್ಲಿಗೆ ಕೆಟ್ಟವನ್ ಸಿನಿಮಾದಲ್ಲಿ ನನಗೆ ಕಿರುಕುಳ ನೀಡಲಾಗಿತ್ತು ಎಂದು ದೂರಿದ್ದಾರೆ.

ಯಾರು ಈ ಕೆಟ್ಟವನ್.?

ಯಾರು ಈ ಕೆಟ್ಟವನ್.?

ತಮಿಳು ನಟ ಸಿಂಬು ಮತ್ತು ಲೇಖಾ ವಾಷಿಂಗ್ ಟನ್ ಅಭಿನಯಿಸಿದ್ದ ಸಿನಿಮಾ 'ಕೆಟ್ಟವನ್'. ಆದ್ರೆ, ಈ ಸಿನಿಮಾ ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ. ಶೂಟಿಂಗ್ ಮಾಡಿದ್ದರೂ, ಸಿಂಬು ಅವರಿಂದಲೇ ಸಿನಿಮಾ ರಿಲೀಸ್ ಆಗಿಲ್ಲ ಎಂಬ ಆರೋಪವನ್ನ ನಿರ್ದೇಶಕರು ಮಾಡಿದ್ದರು. ಇನ್ನು ವಿಶೇಷ ಅಂದ್ರೆ, ಸಿಂಬು ಫ್ಯಾನ್ಸ್ ಸಿಂಬು ಅವರನ್ನ 'ಕೆಟ್ಟವನ್' ಎಂದು ಕೂಡ ಕರೆಯುತ್ತಾರೆ. ಹೀಗಾಗಿ, ಲೇಖಾ ಅವರ ಟ್ವೀಟ್ ಸಿಂಬು ಅವರ ಕುರಿತೇ ಎಂದು ಚರ್ಚೆಯಾಗುತ್ತಿದೆ.

ಲೇಖಾ ಮೇಲೆ ಫ್ಯಾನ್ಸ್ ಫೈರ್

ಲೇಖಾ ಮೇಲೆ ಫ್ಯಾನ್ಸ್ ಫೈರ್

ಇನ್ನು 'ಕೆಟ್ಟವನ್ ಮೀಟೂ' ಎಂದು ಲೇಖಾ ವಾಷಿಂಗ್ ಟನ್ ಟ್ವಿಟ್ಟರ್ ಹಾಕಿರುವುದನ್ನ ಗಮನಿಸಿದ ಸಿಂಬು ಫ್ಯಾನ್ಸ್ ಲೇಖಾ ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಸಭ್ಯ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಬೇಸರಗೊಂಡು ಲೇಖಾ ಇನ್ನೊಂದು ಟ್ವೀಟ್ ಮಾಡಿ ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ.

ಕನ್ನಡದಲ್ಲೂ ಅಭಿನಯಿಸಿರುವ ಲೇಖಾ

ಕನ್ನಡದಲ್ಲೂ ಅಭಿನಯಿಸಿರುವ ಲೇಖಾ

ಅಂದ್ಹಾಗೆ, ಲೇಖಾ ವಾಷಿಂಗ್ ಟನ್ ಬಹುಭಾಷಾ ನಟಿ. ತಮಿಳು, ಹಿಂದಿ, ಕನ್ನಡದಲ್ಲೂ ಅಭಿನಯಿಸಿದ್ದಾರೆ. ತೆಲುಗಿನಲ್ಲಿ 'ವೇದಂ' ಸಿನಿಮಾದಲ್ಲಿ ಅಭಿನಯಿಸಿದ್ದರು. ಸಿಂಬು ಜೊತೆ ಕೆ'ಟ್ಟವನ್' ಸಿನಿಮಾ ಮಾಡಿದ್ದರು (ಬಿಡುಗಡೆಯಾಗಿಲ್ಲ). ಕನ್ನಡದಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಹುಡುಗ ಹುಡುಗಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲೂ ಅಭಿನಯಿಸಿದ್ದಾರೆ.

More from Filmibeat

English summary
Actress Lekha Washington, who was last seen in Tamil in 'Kalyana Samayal Saadham' is the latest to share her #MeToo story in just one word.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X