ಕರುನಾಡ ಕಾವೇರಿಗಾಗಿ ಧ್ವನಿ ಎತ್ತಿದ ಹಾಲಿವುಡ್ ನಟ
ಕಾವೇರಿ ಕೂಗು (cauvery calling) ಅಭಿಮಾನಕ್ಕೆ ಭಾರತ ಚಿತ್ರರಂಗದ ಅನೇಕ ಕಲಾವಿದರು ತಮ್ಮ ಬೆಂಬಲ ನೀಡಿದ್ದಾರೆ. ಇದೀಗ ಹಾಲಿವುಡ್ ನಟ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
'ಟೈಟಾನಿಕ್' ಸಿನಿಮಾದ ನಟ ಲಿಯೊನಾರ್ಡೊ ಡಿಕಾಪ್ರಿಯೊ ಕಾವೇರಿ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಾಲ್ಕು ಸಾಲುಗಳನ್ನು ಬರೆಯುವ ಮೂಲಕ ಈ ಅಭಿಯಾನದ ಪರ ನಿಂತಿದ್ದಾರೆ.
''ಭಾರತದ ನದಿಗಳು ಅಪಾಯಕಾರಿ ಸ್ಥಿತಿಯಲ್ಲಿ ಇವೆ. ಸಣ್ಣ ಸಣ್ಣ ನದಿಗಳೆಲ್ಲ ಬತ್ತುತ್ತಿವೆ. ಸದ್ಗುರು ಮತ್ತು ಈಶ ಫೌಂಡೆಷನ್ ಕಾವೇರಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಅವರ ಪರವಾಗಿ ನಾವು ಕೈ ಜೋಡಿಸೋಣ.'' ಎಂದು ಲಿಯೊನಾರ್ಡೊ ಡಿಕಾಪ್ರಿಯೊ ಬರೆದುಕೊಂಡಿದ್ದಾರೆ.

ಈಗಾಗಲೇ ಬಾಲಿವುಡ್ ನಟಿ ಕಂಗಾನ ರಣಾವತ್, ತಮನ್ನಾ ಭಾಟಿಯಾ, ಕಾಜಲ್, ಕನ್ನಡ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ರಕ್ಷಿತ್ ಶೆಟ್ಟಿ, ದಿಗಂತ್, ನಟಿ ಸುಹಾಸಿನಿ, ಪ್ರಣಿತಾ, ರಾಗಿಣಿ ದ್ವಿವೇದಿ ಹೀಗೆ ಸಾಕಷ್ಟು ಸ್ಟಾರ್ ಗಳು ಕಾವೇರಿಗಾಗಿ ಧ್ವನಿ ಎತ್ತಿದ್ದಾರೆ.

ನೂರು ವರ್ಷದ ಹಿಂದೆ ಬೀಳುತ್ತಿದ್ದ ಮಳೆಯ ಪ್ರಮಾಣ ಈಗೇನೂ ಕಡಿಮೆ ಆಗಿಲ್ಲ. ಆದರೆ, ಮಳೆಯಿಂದ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಯಲ್ಲಿ ಇಲ್ಲ. ಹೀಗಾಗಿ ಪಶ್ಚಿಮಫಟ್ಟದಲ್ಲಿ ಭೂಕುಸಿತ ಆಗುತ್ತಿದೆ. ಎಂದು ಸದ್ಗುರು ಹೇಳಿದ್ದಾರೆ. ಕಾವೇರಿ ಉಳಿವಿಗೆ ಈ ಮಹಾ ಅಭಿಯಾನ ಶುರು ಮಾಡಲಾಗಿದೆ.


Click it and Unblock the Notifications











