»   » ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾ

ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾ

Posted By:
Subscribe to Filmibeat Kannada

'ಜೋಗಿ' ಎಂಬ ಹೆಸರು ಕೇಳಿದರೆ ಒಂದು ಕ್ಷಣ ಮೈ ರೋಮಾಂಚನವಾಗುತ್ತೆ. ಈ ಸಿನಿಮಾ ಮಾಡಿದ ದಾಖಲೆ ಬಗ್ಗೆ ಜಾಸ್ತಿ ಹೇಳುವುದೇ ಬೇಡ. 'ಜೋಗಿ'ಯ ಖದರ್ ಎಂಥದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಈ ಸಿನಿಮಾದ ಬಗ್ಗೆ ಅನೇಕರಿಗೆ ತಿಳಿಯದ ಎಷ್ಟೋ ವಿಷಯಗಳು ಇವೆ.

'ಜೋಗಿ' ಸಿನಿಮಾ ಹುಟ್ಟಿದ್ದೇ ರೋಚಕ. ಆ ಸಿನಿಮಾ ಸೃಷ್ಟಿಗೆ ಕಾರಣವಾಗಿದ್ದು ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲುಗಳಂತೆ. 'ಜೋಗಿ' ಸಿನಿಮಾದಲ್ಲಿ ಯೋಗೇಶನ ಪಾತ್ರ ಮಾಡಿದ್ದ ನಿರ್ದೇಶಕ ರಘು ರಾಮ್ 'ಜೋಗಿ' ಸಿನಿಮಾದ ಪರದೆ ಹಿಂದಿನ ಕಥೆಯನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

'ದಿ ವಿಲನ್' ಚಿತ್ರದಲ್ಲಿ ಶಿವಣ್ಣ-ಸುದೀಪ್ ಮುಖಾಮುಖಿ ಆಗ್ತಾರಾ, ಇಲ್ವಾ?

ಶಿವಣ್ಣನ 'ಜೋಗಿ' ಸಿನಿಮಾದ ಹಿಂದಿನ ಯಾರಿಗೂ ತಿಳಿಯದ ಕೆಲ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ಓದಿ...

ಅವಕಾಶ ಸಿಕ್ಕಿದ್ದು

ಎರಡು ಸೂಪರ್ ಹಿಟ್ ಸಿನಿಮಾ ಮಾಡಿದ್ದ ನಿರ್ದೇಶಕ ಪ್ರೇಮ್ ಅವರನ್ನು ಮಧು ಬಂಗಾರಪ್ಪ ಕರೆಸಿ ಶಿವಣ್ಣ ಅವರಿಗೊಂದು ಕಥೆ ಮಾಡಿ ಅಂತ ಹೇಳಿದ್ದರಂತೆ. ಆಗ ಪ್ರೇಮ್ 'ಜೋಗಿ' ಕಥೆಯನ್ನು ರೆಡಿ ಮಾಡಿದ್ದಾರೆ.

ಆ ನಾಲ್ಕು ಸಾಲು ಇವೆ

''ಮಾನವನ ಜೀವಿತದಿ...

ಬೇಡುವಿದೆ ಕಾಯಕವು...

ಕೈ ತುಂಬಾ ಇದ್ದೋನೆ ಯೋಗಿ...

ಕಡೆ ತನಕ ಬೇಡೋನೆ ಜೋಗಿ..''

ಈ ನಾಲ್ಕು ಸಾಲುಗಳನ್ನು ಮನಸಿನಲ್ಲಿ ಇಟ್ಟುಕೊಂಡು ಪ್ರೇಮ್ 'ಜೋಗಿ' ಸಿನಿಮಾದ ಇಡೀ ಕಥೆಯನ್ನು ಹೆಣೆದರಂತೆ.

ಶಿವಣ್ಣನ 'ಲೀಡರ್' ಮತ್ತು 'ಟಗರು' ಚಿತ್ರಗಳಿಗೆ ನಟ ಬಾಲಯ್ಯ ಸಾಥ್

ಮೊದಲ ಶಾಟ್

'ಜೋಗಿ' ಸಿನಿಮಾದ ಮುಹೂರ್ತದ ದಿನ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಜೋಗಿಯ ಜೋಳಿಗೆ ತುಂಬುವ ದೃಶ್ಯವನ್ನು ತೆಗೆದರಂತೆ. ಇದೇ ಸಿನಿಮಾದ ಮೊದಲ ಶಾಟ್ ಆಗಿದೆ. ಈ ಸೀನ್ ಆದ ಬಳಿಕ ರಾಜ್ ಎಮೋಷನಲ್ ಆಗಿ ಶಿವಣ್ಣನಿಗೆ ಒಂದು ಮುತ್ತು ಕೊಟ್ಟರಂತೆ ಅದೇ ಎಮೋಷನ್ ಇಡೀ ಸಿನಿಮಾದಲ್ಲಿ ಇದೆ.

ಕ್ಲೈಮ್ಯಾಕ್ಸ್ ಸೀನ್

'ಜೋಗಿ' ಸಿನಿಮಾದ ನೋಡಿದವರು ಕ್ಲೈಮ್ಯಾಕ್ಸ್ ಸೀನ್ ಮರೆಯುವುದಕ್ಕೆ ಸಾಧ್ಯ ಇಲ್ಲ. ಆ ಸೀನ್ ನಲ್ಲಿ ಶಿವಣ್ಣ ಎಡವಿ ಕೊಚ್ಚೆಗೆ ಬೀಳುವ ಶಾಟ್ ಇದೆ. ಆ ರೀತಿಯ ಶಾಟ್ ಸ್ಟಾರ್ ನಟರು ಮಾಡುವಾಗ ಕೃತಕವಾದ ಕೊಚ್ಚೆ ಗುಂಡಿಯನ್ನು ರೆಡಿ ಮಾಡಲಾಗುತ್ತದೆ. ಆದರೆ ಶಿವಣ್ಣ 'ಸುಮ್ಮನೆ ಯಾಕಮ್ಮ ಟೈಂ ವೇಸ್ಟ್' ಅಂತ ಅಲ್ಲೇ ಇದ್ದ ಕೊಚ್ಚೆಯಲ್ಲಿ ಬಿದ್ದರಂತೆ.

'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ...

ತಾಯಿ ಮಗನ ಕುಣಿತದ ಸೀನ್

ಚಿತ್ರದಲ್ಲಿ ಶಿವಣ್ಣ ಮತ್ತು ಅರುಂಧತಿ ನಾಗ್ ಗದ್ದೆಯಲ್ಲಿ ಕುಣಿಯುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಆ ದೃಶ್ಯದಲ್ಲಿ ಆರುಂಧತಿ ನಾಗ್ ಕುಣಿಯುವಾಗ ಅವರಿಗೆ ಮಂಡಿ ಆಪರೇಷನ್ ಆಗಿತಂತೆ. ಆಗ ಪ್ರೇಮ್ 'ಮಮ್ಮಿ ಪ್ಲೀಸ್.. ಪ್ಲೀಸ್ ಒಂದೇ ಒಂದು ಶಾಟ್' ಅಂತ ಹೇಳಿ ಅದ್ಭುತವಾಗಿ ಚಿತ್ರೀಕರಿಸಿದರಂತೆ. ಜೊತೆಗೆ ಚಿತ್ರದ ಕೊನೆಯ ಸೀನ್ ನಲ್ಲಿ ಅರುಂಧತಿ ನಾಗ್ ತಾವೇ ವಿದ್ಯುತ್ ಶವಗಾರದ ಮೇಲೆ ಮಲಗಿದರಂತೆ.

ಯೋಗೀಶ್ ಪಾತ್ರ

ಸಂದರ್ಶನದಲ್ಲಿ 'ಜೋಗಿ' ಚಿತ್ರದ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿರುವ ರಘು ರಾಮ್ ಯೋಗೇಶನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಶಿವಣ್ಣ ಅಂತೆ. ಇನ್ನು ಚಿತ್ರದ ಕೊನೆಯ ಸೀನ್ ನಲ್ಲಿ ನಟಿಸುವಾಗ ಪ್ರೇಮ್ 'ನಿಜವಾಗಿಯೂ ನಿನ್ನ ಸ್ನೇಹಿತನ ತಾಯಿ ಸತ್ತಿದ್ದಾರೆ' ಎಂದು ಫೀಲ್ ಮಾಡಿ ನಟಿಸಿ ಅಂತ ಹೇಳಿದ್ದರಂತೆ. ಅದೇ ಕಾರಣಕ್ಕೆ ಆ ದೃಶ್ಯ ಅಷ್ಟೊಂದು ರಿಯಲ್ ಆಗಿ ಮೂಡಿ ಬಂದಿದೆಯಂತೆ.

ಭಯ ಪಟ್ಟ ಹುಡುಗ

ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಶಿವಣ್ಣ ಅಭಿನಯವನ್ನು ಹತ್ತಿರದಿಂದ ಕಂಡು ಆ ದೃಶ್ಯದಲ್ಲಿ ನಟಿಸಿರುವ ಚಿಕ್ಕ ಹುಡುಗ ಹೆದರಿಕೊಂಡು, ಅಳುವುದಕ್ಕೆ ಶುರು ಮಾಡಿದನಂತೆ. ಆಗ ಶಿವಣ್ಣ 'ಇದು ಆಕ್ಟಿಂಗ್ ಕಂದ' ಅಂತ ಸಮಾಧಾನ ಮಾಡಿದರಂತೆ.

ಭಾವುಕರಾದ ರಾಜಣ್ಣ

'ಜೋಗಿ' ಸಿನಿಮಾದ ಸ್ಪೆಷಲ್ ಶೋವನ್ನು ಏರ್ಪಡಿಸಲಾಗಿತ್ತು. ಆಗ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಜನಿಕಾಂತ್ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ಮುಗಿದ ಮೇಲೆ ರಾಜ್ ಭಾವುಕರಾಗಿ ಮೌನವಾಗಿಬಿಟ್ಟರು. ಶಿವಣ್ಣ ಅಂತು ಚಿಕ್ಕ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು.

English summary
Kannada Director Raghu Ram Reveals lesser known facts about Shivarajkumar starrer Kannada Movie 'Jogi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada