twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚ ಸುದೀಪ್ ಬಗ್ಗೆ ತಿಳಿಯಬೇಕಾದ ಆಸಕ್ತಿಕರ ಸಂಗತಿಗಳು

    |

    ಕಿಚ್ಚ ಸುದೀಪ್ ಎನ್ನುವುದು ಕೇವಲ ಹೆಸರಲ್ಲ. ಅಭಿಮಾನಿಗಳ ಪಾಲಿಗೆ ಇದೊಂದು ಬ್ರ್ಯಾಂಡ್. ಬಹುಭಾಷೆ ನಟ, ಪ್ಯಾನ್ ಇಂಡಿಯಾ ಸ್ಟಾರ್, ನ್ಯಾಷನಲ್ ಸ್ಟಾರ್, ಅತ್ಯುತ್ತಮ ನಿರೂಪಕ ಹೀಗೆ ಬಹುಮುಖ ಪ್ರತಿಭೆ. ಸುದೀಪ್ ಅವರ ಧ್ವನಿಗೆ ಬಹಳಷ್ಟು ಜನರು ಅಭಿಮಾನಿಗಳಿದ್ದಾರೆ. ತಮ್ಮ ಚಿತ್ರಗಳಿಗೆ ಸುದೀಪ್ ಹಿನ್ನೆಲೆ ಧ್ವನಿ ಕೊಟ್ಟರೆ ಸಾಕು ಎಂದು ಕಾಯುವ ನಿರ್ದೇಶಕ-ನಿರ್ಮಾಪಕರಿದ್ದಾರೆ.

    500 ರೂಪಾಯಿ ವೇತನದೊಂದಿಗೆ ವೃತ್ತಿ ಜೀವನ ಆರಂಭಿಸಿದ ಸುದೀಪ್ ಸಂಜೀವ ಈಗ ಸಿನಿಮಾವೊಂದಕ್ಕೆ 6 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ಸಿನಿಮಾದಿಂದ ಆಚೆಯೂ ಸುದೀಪ್ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ಮೂಲಕ ಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ, ನೆರವಾಗುತ್ತಿದ್ದಾರೆ. ಖ್ಯಾತ ಉದ್ಯಮಿಯ ಮಗನಾಗಿದ್ದರೂ ಜೀರೋ ಮಟ್ಟದಿಂದ ಬೆಳೆದ ಬಂದಿರುವ ಸುದೀಪ್ ಜೀವನವೇ ರೋಚಕ ಜರ್ನಿ. ಈ ಜರ್ನಿಯಲ್ಲಿ ಅನೇಕ ಅಪರೂಪದ ಸಂಗತಿಗಳಿವೆ. ಅವುಗಳ ಬಗ್ಗೆ ಒಂದು ನೋಟ. ಮುಂದೆ ಓದಿ...

    ಕಿಚ್ಚ ಸುದೀಪ್ ಹುಟ್ಟುಹಬ್ಬ: ತಾರೆಗಳಿಂದ ಪ್ರೀತಿಯ ಶುಭಾಶಯ ಕಿಚ್ಚ ಸುದೀಪ್ ಹುಟ್ಟುಹಬ್ಬ: ತಾರೆಗಳಿಂದ ಪ್ರೀತಿಯ ಶುಭಾಶಯ

    500 ರೂಪಾಯಿ ವೇತನ

    500 ರೂಪಾಯಿ ವೇತನ

    ಸ್ವತಃ ಕಿಚ್ಚ ಸುದೀಪ್ ಅವರೇ ಈ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ, ಆರಂಭಿಕ ದಿನದಲ್ಲಿ ಕೇವಲ 500 ರೂಪಾಯಿಯಲ್ಲಿ ಇಡಿ ತಿಂಗಳ ಜೀವನ ಸಾಗಿಸುತ್ತಿದ್ದರಂತೆ. ತಂದೆ ಸಂಜೀವ್ ದೊಡ್ಡ ಹೋಟೆಲ್ ಉದ್ಯಮಿಯಾಗಿದ್ದರೂ ಅಪ್ಪನ ಬಳಿಕ ಕೈ ಚಾಚಿ ಪಡೆಯಲಿಲ್ಲ. ಸಂಗೀತ ಹಾಗೂ ಗಾಯನದ ಮೇಲೆ ಹೆಚ್ಚು ಅಸಕ್ತಿ ಹೊಂದಿದ್ದ ಸುದೀಪ್‌ಗೆ ನಟನೆ ಕೈ ಬೀಸಿ ಕರೆಯಿತು. 'ತಾಯವ್ವ' ಚಿತ್ರದ ಮೂಲಕ ನಾಯಕನಟನಾಗಿ ನಟಿಸಿದರೂ ಅದು ಕೈಹಿಡಿಯಲಿಲ್ಲ. ಆಮೇಲೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಮೊದಲ ಸಿನಿಮಾ ಎನಿಸಿಕೊಂಡಿತು. ವಿಮರ್ಶಾತ್ಮಕವಾಗಿ ಸುದೀಪ್ ಗಮನ ಸೆಳೆದರೂ ಈ ಚಿತ್ರವೂ ಗೆಲ್ಲಲಿಲ್ಲ. ಕಿಚ್ಚನಿಗೆ ಬ್ರೇಕ್ ಕೊಟ್ಟ ಸಿನಿಮಾ 'ಹುಚ್ಚ'.

    ಸುದೀಪ್ ಬಿಸಿನೆಸ್‌ಮ್ಯಾನ್ ಮಗ

    ಸುದೀಪ್ ಬಿಸಿನೆಸ್‌ಮ್ಯಾನ್ ಮಗ

    ಸುದೀಪ್ 500 ರೂಪಾಯಿಯಲ್ಲಿ ತಿಂಗಳು ಕಳೆಯುತ್ತಿದ್ದರು ಎಂದರೆ ಬಡತನ ಕಂಡವರು ಅಂತಲ್ಲ. ಕಿಚ್ಚನ ಕುಟುಂಬ ಶ್ರೀಮಂತ ಹಿನ್ನೆಲೆ ಹೊಂದಿತ್ತು. ಅವರ ತಂದೆ ಸಂಜೀವ್ ಹೋಟೆಲ್ ಉದ್ಯಮಿ. ಅಂದಿನ ಸಿನಿಮಾ ಸ್ಟಾರ್‌ಗಳೆಲ್ಲರೂ ಅವರ ಹೋಟೆಲ್‌ನಲ್ಲಿ ಕಾಲ ಕಳೆಯುತ್ತಿದ್ದರು. ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ ಸುದೀಪ್. ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ರಾಜ್ಯದ ಅತ್ಯುನ್ನತ ಟೂರ್ನಿಗಳಲ್ಲಿ ಸುದೀಪ್ ಭಾಗವಹಿಸಿದ್ದರು. ಹಲವು ತಂಡಗಳನ್ನು ಪ್ರತಿನಿಧಿಸಿದ್ದರು.

    ಸಿನಿಮಾ ಆರಂಭಿಕ ಜೀವನ ಸುಲಭಿ ಇರಲಿಲ್ಲ

    ಸಿನಿಮಾ ಆರಂಭಿಕ ಜೀವನ ಸುಲಭಿ ಇರಲಿಲ್ಲ

    ಸುದೀಪ್ ವೃತ್ತಿ ಜೀವನ ಸುಖಕರವಾಗಿರಲಿಲ್ಲ ಹಾಗೂ ಸಂತೋಷವಾಗಿಯೂ ಇರಲಿಲ್ಲ. ಸ್ಪರ್ಶ ಆದ್ಮೇಲೆ ಹುಚ್ಚ ಮಾಡಿ ಖ್ಯಾತಿ ಗಳಿಸಿಕೊಂಡರು. ನಂತರ ವಾಲಿ, ಚಂದು, ಧಮ್, ನಂದಿ, ಕಿಚ್ಚ, ಪಾರ್ಥ ಅಂತಹ ಸಿನಿಮಾಗಳಲ್ಲಿ ನಟಿಸಿದರು. ಹುಚ್ಚ ಸಿನಿಮಾ ಆದ್ಮೇಲೆ ಸುದೀಪ್ ಸ್ಟಾರ್ ನಟ ಆದರೂ ನಿರೀಕ್ಷೆಯ ಸಕ್ಸಸ್ ಸಿಕ್ಕಿರಲಿಲ್ಲ. ಸ್ವಾತಿಮುತ್ತ, ರಂಗ ಎಸ್‌ಎಸ್‌ಎಲ್‌ಸಿ, ಮೈ ಆಟೋಗ್ರಫ್ ಅಂತಹ ಚಿತ್ರಗಳೊಂದಿಗೆ ಕಂಬ್ಯಾಕ್ ಮಾಡಿದರು.

    ಕರ್ನಾಟಕದಾಚೆ ಮಿಂಚಿದ ಕಲಾವಿದ

    ಕರ್ನಾಟಕದಾಚೆ ಮಿಂಚಿದ ಕಲಾವಿದ

    ಕನ್ನಡ ಸಿನಿಮಾಗಳಲ್ಲಿ ಮಾತ್ರ ಮಿಂಚುತ್ತಿದ್ದ ಸುದೀಪ್ ನೋಡು ನೋಡುತ್ತಲೇ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡರು. ಈಗಿನ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬರುವುದಕ್ಕೂ ಮುಂಚೆಯೇ ಸುದೀಪ್ ಬಹಳ ದೊಡ್ಡ ಹೆಸರು ಸಂಪಾದಿಸಿದ್ದರು. 2008ರಲ್ಲಿ ಫೋಂಕ್ ಸಿನಿಮಾದೊಂದಿಗೆ ಚೊಚ್ಚಲ ಬಾರಿಗೆ ಹಿಂದಿ ಇಂಡಸ್ಟ್ರಿ ಎಂಟ್ರಿ ಕೊಟ್ಟರು. 2010ರಲ್ಲಿ ರಕ್ತಚಿರಿತ್ರೆ 1 ಚಿತ್ರದೊಂದಿಗೆ ತೆಲುಗು ಇಂಡಸ್ಟ್ರಿ ಪ್ರವೇಶಿಸಿದರು. ರಾಜಮೌಳಿಯ 'ಈಗ' ಸಿನಿಮಾದೊಂದಿಗೆ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿದರು. 2015ರಲ್ಲಿ ವಿಜಯ್ ಜೊತೆ 'ಪುಲಿ' ಸಿನಿಮಾ ಮಾಡುವುದರೊಂದಿಗೆ ತಮಿಳು ಇಂಡಸ್ಟ್ರಿಗೆ ಎಂಟ್ರಿಯಾದರು.

    ಸುದೀಪ್ ಖಾಸಗಿ ಲೈಫ್ ಹೇಗಿದೆ?

    ಸುದೀಪ್ ಖಾಸಗಿ ಲೈಫ್ ಹೇಗಿದೆ?

    ಸಿನಿಮಾದಿಂದ ಬ್ರೇಕ್ ಸಿಕ್ಕರೆ ಅಡುಗೆ ತಯಾರಿಸುವುದರಲ್ಲಿ ಸುದೀಪ್ ಸಮಯ ಕಳೆಯುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಸುದೀಪ್ ತುಂಬಾ ಚೆನ್ನಾಗಿ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದನ್ನು ಸಾಬೀತು ಪಡಿಸಿದ್ದಾರೆ. ಸೆಲೆಬ್ರಿಟಿಗಳು ಅವರ ಮನೆಗೆ ಭೇಟಿ ನೀಡಿದಾಗಳು ತಮ್ಮ ಕೈಯಾರೆ ತಿಂಡಿ ಮಾಡಿಕೊಡುತ್ತಾರೆ ಎನ್ನುವುದು ಆಸಕ್ತಿಕರ ವಿಷಯ. ವೆಜ್ ಬಿರಿಯಾನಿ, ರಾಗಿ ಮುದ್ದೆ ಮತ್ತು ರೋಟಿ ಸುದೀಪ್‌ಗೆ ಇಷ್ಟವಾದ ಆಹಾರ.

    ಸುದೀಪ್ ನೆಚ್ಚಿನ ಕಲಾವಿದರು

    ಸುದೀಪ್ ನೆಚ್ಚಿನ ಕಲಾವಿದರು

    ಸುದೀಪ್ ಎಲ್ಲರನ್ನು ಇಷ್ಟಪಡ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಡಾ ವಿಷ್ಣುವರ್ಧನ್ ಅಂದ್ರೆ ಸ್ವಲ್ಪ ಹೆಚ್ಚು ಅಭಿಮಾನ. ಸಣ್ಣ ವಯಸ್ಸಿನಿಂದಲೂ ವಿಷ್ಣುದಾದ ಕಂಡ್ರೆ ಬಹಳ ಪ್ರೀತಿ-ಅಭಿಮಾನ. ರಜನಿಕಾಂತ್, ಬ್ರಾಡ್ ಪಿಟ್, ಉಪೇಂದ್ರ ಅಂದ್ರೂ ಅಚ್ಚುಮೆಚ್ಚು. ನಟಿಯರಲ್ಲಿ ಭಾರತಿ ವಿಷ್ಣುವರ್ಧನ್, ಐಶ್ವರ್ಯ ರೈ ಇಷ್ಟ.

    ನಿರ್ದೇಶನದಲ್ಲಿ ಸಕ್ಸಸ್

    ನಿರ್ದೇಶನದಲ್ಲಿ ಸಕ್ಸಸ್

    ನಟರಾಗಿ ದೊಡ್ಡ ಯಶಸ್ಸು ಕಂಡಿರುವ ಸುದೀಪ್ ನಿರ್ದೇಶನದಲ್ಲೂ ಮೋಡಿ ಮಾಡಿದ್ದಾರೆ. ಸುದೀಪ್ ಇದುವರೆಗೂ ಆರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ ಅಂದ್ರೆ ಬಹಳಷ್ಟು ಜನರಿಗೆ ಅಚ್ಚರಿಯಾಗಬಹುದು. ಡೈರೆಕ್ಟರ್ ಆಗಿ ಸುದೀಪ್ ಸಕ್ಸಸ್ ಕಂಡಿದ್ದು, ಕಿಚ್ಚನ ನಿರ್ದೇಶನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. 2006ರಲ್ಲಿ ಮೈ ಆಟೋಗ್ರಾಫ್ ಚಿತ್ರಕ್ಕೆ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದರು. ನಂ 73 ಶಾಂತಿನಿವಾಸ (2007), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011) ಹಾಗು ಮಾಣಿಕ್ಯ (2014) ಚಿತ್ರಗಳಿಗೆ ಸುದೀಪ್ ಆಕ್ಷನ್ ಕಟ್ ಹೇಳಿದ್ದಾರೆ.

    English summary
    Happy Birthday Kiccha Sudeep: Lesser Known Facts About National Star.
    Thursday, September 2, 2021, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X