»   » ದುರಂತ ಸಾವನ್ನಪ್ಪಿದ ನಟ 'ಜೀವನ್' ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ದುರಂತ ಸಾವನ್ನಪ್ಪಿದ ನಟ 'ಜೀವನ್' ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

Posted By:
Subscribe to Filmibeat Kannada

ಕಿರುತೆರೆಯಲ್ಲಿ ತಮ್ಮದೇ ಆದ ಪ್ರತಿಭೆ ಮೂಲಕ ಮನೆ ಮಾತಾಗಿದ್ದ ಇಬ್ಬರು ಪ್ರತಿಭಾನ್ವಿತ ಕಲಾವಿದರು ಇಂದು ದುರಂತ ಸಾವಿಗೀಡಾಗಿದ್ದಾರೆ. 'ಮಹಾನದಿ', 'ತ್ರಿವೇಣಿ ಸಂಗಮ', 'ಮಧು ಬಾಲಾ' ಅಂತಹ ಕನ್ನಡ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ರಚನಾ ಇನ್ನು ನೆನಪು ಮಾತ್ರ.

ನಟ ರಚನಾ ಅವರಂತೆ ಸಹನಟ ಜೀವನ್ ಕೂಡ ಪ್ರತಿಭಾವಂತ. ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಎಲ್ಲರ ಗಮನ ಸೆಳೆದಿದ್ದ ಕಲಾವಿದ.

ಜೀವನ್ ಯಾರು? ಜೀವನ್ ಬಗ್ಗೆ ನಿಮಗೆಷ್ಟು ಗೊತ್ತು? ಸಾಧಿಸಬೇಕಿದ್ದ ವಯಸ್ಸಿನಲ್ಲಿ ಅನಿರೀಕ್ಷಿತ ಸಾವಿಗೀಡಾದ ಈ ಜೀವನ್ ಬಗ್ಗೆ ಒಂದು ಸಣ್ಣ ಪರಿಚಯ ಇಲ್ಲಿದೆ ನೋಡಿ.....

ಜೀವನ್ ಸುರೇಶ್ ಯಾರು?

ಹೆಸರು ಜೀವನ್ ಸುರೇಶ್.....ಎಲ್ಲರೂ ಪ್ರೀತಿಯಿಂದ ಸುಜೀವ್ ಎಂದು ಕರೆಯುತ್ತಿದ್ದರು. ವಯಸ್ಸು 25. ನಟನೆ ಇವರ ಆಸಕ್ತಿ. ಇವರ ತಂದೆ-ತಾಯಿಗೆ ಇಬ್ಬರು ಮಕ್ಕಳು. ಇವರಿಗೆ ಒಬ್ಬರು ಅಣ್ಣ ಇದ್ದಾರೆ.

100 ಸಿನಿಮಾ, 40 ಧಾರಾವಾಹಿಯಲ್ಲಿ ಕೆಲಸ

ಜೀವನ್ ಇಂಡಸ್ಟ್ರಿಗೆ ಬಂದು ಸುಮಾರು 8 ವರ್ಷ ಆಗಿದೆ. ಹಾಸ್ಯ ಕಲಾವಿದ ಆಗ್ಬೇಕು ಎನ್ನುವ ಬಹುದೊಡ್ಡ ಕನಸು ಇವರದ್ದು. ಇದುವರೆಗೂ ಸುಮಾರು 100 ಸಿನಿಮಾಗಳಲ್ಲಿ, 40 ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.

'ಮಜಾ ಭಾರತ'ದಲ್ಲಿ ಜೀವನ್ ಸ್ಪರ್ಧಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಜಾಭಾರತ' ರಿಯಾಲಿಟಿ ಕಾರ್ಯಕ್ರಮದಲ್ಲಿ ಜೀವನ್ ಸ್ಪರ್ಧಿಯಾಗಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಜನರನ್ನ ನಕ್ಕು ನಗಿಸುತ್ತಿದ್ದರು. ಹೀಗಿರುವಾಗಲೇ, ಅಪಘಾತದಲ್ಲಿ ಜೀವನ್ ಇಹಲೋಕ ತ್ಯಜಿಸಿದ್ದಾರೆ.

ನಟನೆ, ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ

ಓದಿನಲ್ಲಿ ಹಿಂದೆ ಬಿದ್ದಿದ ಜೀವನ್ ನಟನೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ಡ್ಯಾನ್ಸ್ ಅಂದ್ರೆ ಜೀವನ್ ಗೆ ತುಂಬ ಇಷ್ಟ. ಅಷ್ಟೇ ಅಲ್ಲದೆ, ಸಾಹಿತ್ಯ ಬರೆಯುವುದು, ಡ್ರಾಯಿಂಗ್ ಕೂಡ ಇವರ ಅಭ್ಯಾಸವಾಗಿತ್ತು. ಇನ್ನು ಅಡುಗೆ ಮಾಡೋದ್ರಲ್ಲೂ ಜೀವನ್ ಎತ್ತಿದ ಕೈ.

'ಬಿಗ್ ಬಾಸ್ ಕನ್ನಡ-5' ಆಕಾಂಕ್ಷಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಬಿಗ್ ಬಾಸ್' ರಿಯಾಲಿಟಿ ಶೋ ನ 5ನೇ ಆವೃತ್ತಿಯಲ್ಲಿ ಕಾಮನ್ ಮ್ಯಾನ್ ವಿಭಾಗದಲ್ಲಿ ಸ್ಪರ್ಧೆ ಮಾಡಲು ಜೀವನ್ ಆಸೆ ಹೊಂದಿದ್ದರು. ಅದಕ್ಕಾಗಿ ತಯಾರಿ ಕೂಡ ಮಾಡಿಕೊಂಡು, 3 ಮೂರು ನಿಮಿಷದ ವಿಡಿಯೋ ಕೂಡ ಮಾಡಿಕೊಂಡಿದ್ದರು. ಆದ್ರೆ, ವಿಧಿಯ ಆಟ ಬೇರೆಯೇ ಆಗಿತ್ತು.

ಜೀವನ್ ಅವರ ಪರಿಚಯದ ವಿಡಿಯೋ ನೋಡಿ

kannada Serial Actress Rachana Tragic End ..

English summary
Lesser Known facts about serial actor Jeevan who died in road accident today (August 24th)
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada