ಪತಿಯ ಅನುಪಸ್ಥಿತಿಯಲ್ಲಿ ದೀಪಾವಳಿ ಆಚರಿಸಿ ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?

ನಟ ದರ್ಶನ್ 3ನೇ ಬಾರಿ ಪರಪ್ಪನ ಅಗ್ರಹಾರ ಸೇರಿ 2 ತಿಂಗಳು ಕಳೆದಿದೆ. ಈ ವರ್ಷ ಕಾರಾಗೃಹದಲ್ಲೇ ನಾಲ್ಕು ಗೋಡೆಗಳ ನಡುವೆ ದೀಪಾವಳಿ ಹಬ್ಬ ಆಚರಿಸುವಂತಾಗಿದೆ. ತೂಗುದೀಪ ನಿವಾಸದಲ್ಲಿ ಕೂಡ ಹಬ್ಬಗಳ ಸಡಗರ ಕಮ್ಮಿ ಆಗಿದೆ. ವಿಜಯಲಕ್ಷ್ಮಿ ದರ್ಶನ್ ಹಾಗೂ ವಿನೀಶ್ ಹಬ್ಬ ಮಾಡುವಂತಾಗಿದೆ.

ಸೋಮವಾರ ನರಕ ಚತುದರ್ಶಿ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ಹಬ್ಬದೂಟ ನೀಡಲಾಗಿದೆ. ದರ್ಶನ್ ಸೇರಿದಂತೆ ಎಲ್ಲಾ ಕೈದಿಗಳಿಗೆ ಮೈಸೂರ್ ಪಾಕ್ ನೀಡಿದ್ದಾರೆ. ಊಟದ ಮೆನುನಲ್ಲಿ ಮುದ್ದೆ, ಚಪಾತಿ, ಅನ್ನ, ಸಾಂಬಾರ್ ಮಜ್ಜಿಗೆ ಜೊತೆಗೆ ಮೈಸೂರ್ ಪಾಕ್ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Let the Light Shine Vijayalakshmi Darshan s Diwali Message Amid Darshan s Jail Stay

ದರ್ಶನ್ ಬೆನ್ನುನೋವಿನಿಂದ ಬಳುತ್ತಿರುವುದು ಗೊತ್ತೇಯಿದೆ. ಜೈಲು ಸೇರಿದ ಬಳಿಕ ನೋವು ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಫಿಸಿಯೋಥೆರಪಿಗೆ ಮನವಿ ಮಾಡಿದ್ದಾರೆ. ದರ್ಶನ್‌ಗೆ ಈಗಾಗ್ಲೇ ಬೆನ್ನು ನೋವಿಗೆ ಹೀಟಿಂಗ್ ಬೆಲ್ಟ್ ಹಾಗೂ ಚೇರ್ ನೀಡಲಾಗಿದ್ದು ಫಿಸಿಯೋಥೆರಪಿಗಾಗಿ ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.

ಎಲ್ಲಾ ಹಬ್ಬಗಳನ್ನು ದರ್ಶನ್ ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಳ್ಳಾರಿ ಜೈಲಿನಿಂದ ಬಿಡುಗಡೆ ಆದರೂ ವಿಶ್ರಾಂತಿ ಪಡೆದಿದ್ದರು. ಆದರೆ ಈ ಬಾರಿ ದೀಪಾವಳಿ ಸಂಭ್ರಮದಲ್ಲಿ ಮತ್ತೆ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

ಸದ್ಯ ದೀಪಾವಳಿ ಹಬ್ಬ ಆಚರಿಸಿರುವ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ. "ಲೋಕವು ನಿಮ್ಮನ್ನು ಕೀಳಾಗಿ ಕಾಣಲು ಯತ್ನಿಸಿದಾಗ, ಆ ಬೆಳಕು ಬೆಳಗಲಿ" ಎಂದು ಬರೆದುಕೊಂಡಿದ್ದಾರೆ.

More from Filmibeat

Read more about: darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X