ಹಳೆದು ಹೋಗ್ಲಿ, ಹೊಸದು ಬರ್ಲಿ: ಸಾಧುಗೆ ಕಿಚ್ಚ ಸಲಹೆ
ಕಿಚ್ಚ ಸುದೀಪ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಿ ಬಿಡಿ. ಆದರೆ, ಈಗ ಸುದೀಪ್ ಜೊತೆಗೆ ಸಾಧು ಕೋಕಿಲ ಕಾಂಬಿನೇಷನ್ ನಲ್ಲಿ ಜಾಹೀರಾತೊಂದು ಬಂದಿದೆ. ಓಎಲ್ಎಕ್ಸ್ ಸಂಸ್ಥೆಯ ಮೊಬೈಲ್ ಅಪ್ಲಿಕೇಷನ್ ಜಾಹೀರಾತು ಸರಳವಾಗಿ ಕನ್ನಡಿಗರಿಗೆ ಅರ್ಥವಾಗುವಂತೆ ಚಿತ್ರಿಸಲಾಗಿದೆ.
ಯಾವುದೋ ಭಾಷೆಯಲ್ಲಿ ಮಾಡಿದ ಜಾಹೀರಾತು ಕಾಪಿ ಮಾಡಿಕೊಂಡು ಡಬ್ ಮಾಡಿದ ಜಾಹೀರಾತು ನೋಡುವ ಕರ್ಮದಿಂದ ಕನ್ನಡ ಪ್ರೇಕ್ಷಕರು ಬಚಾವಾಗಿದ್ದಾರೆ.
ಏನಿದೆ ಜಾಹೀರಾತಿನಲ್ಲಿ ? : ಬ್ಯಾಚುಲರ್ ಲೈಫ್ ಬೋರ್ ಆಗಿ ಹೆಣ್ಣು ಸಿಗದೆ ಸಾಧು ಕೋಕಿಲ ಅಳುತ್ತಿರುತ್ತಾರೆ. ಸಾಧು ಇರುವ ರೂಮಿಗೆ ಸುದೀಪ್ ಸಡನ್ ಆಗಿ ಎಂಟ್ರಿ ಕೊಡುತ್ತಾರೆ. ಇವರು ನನ್ನ ಮದುವೆನೇ ಆಗಲ್ಲ ಎನ್ನುತ್ತಿದ್ದಾರೆ. ಎಂದು ಹಳೆ ಫ್ರಿಡ್ಜ್ ಬಳಿ ತಾವು ನಿಂತ ಚಿತ್ರವನ್ನು ಸುದೀಪ್ ಕೈಗೆ ನೀಡುತ್ತಾರೆ.

ತುಂಬಾ ಚೆನ್ನಾಗಿದ್ಯಾ ಆದರೆ, ಬ್ಯಾಕ್ ಗ್ರೌಂಡು ಸರಿ ಇಲ್ಲ. ಇದಕ್ಕೆ ಸರಳ ಉಪಾಯ ಇಲ್ಲಿದೆ ಎಂದು ಹೇಳುತ್ತಾ ಮೊಬೈಲ್ ತೆಗೆದುಕೊಂಡು ಓಎಲ್ ಎಕ್ಸ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಹಳೆ ವಸ್ತುಗಳನ್ನು ಮಾರುವುದು ಹೇಗೆ ಎಂದು ತೋರಿಸುತ್ತಾರೆ. ತಕ್ಷಣವೇ ಸಾಧು ಮೊಬೈಲಿಗೆ ಕರೆ ಬರುತ್ತದೆ. ನಮ್ಮನೆ ವಸ್ತುಗಳಿಗೆ ಇಷ್ಟು ಒಳ್ಳೆ ಆಫರಾ ಎಂದು ಸಾಧು ಅಚ್ಚರಿಪಡುತ್ತಾರೆ.
ಓಎಲ್ ಎಕ್ಸ್ ನಲ್ಲಿ ಏನು ಬೇಕಾದರೂ ಮಾರಬಹುದು, ಮಾರಿ ಬಿಡಿ ಎಂದು ಸುದೀಪ್ ಜಾಹೀರಾತಿನ ಕೊನೆಗೆ ಹೇಳುತ್ತಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಹಾಗೂ ತಮಿಳಿನಲ್ಲಿ ಧನುಷ್ ಅವರು ಈಗಾಗಲೇ ಓಎಲ್ ಎಕ್ಸ್ ಆಡ್ ನಲ್ಲಿ ಕಾಣಿಸಿಕೊಂಡು ಉತ್ಪನ್ನವನ್ನು ಜನಪ್ರಿಯಗೊಳಿಸಿದ್ದಾರೆ.


Click it and Unblock the Notifications












