ವಿಡಿಯೋ: ಕನಸು,ಭಾಷೆ, ಜೀವನದ ಜೊತೆ 'ಒಂದ್ ಸೆಲ್ಫಿ'
'ಲೈಫ್ ಜೊತೆ ಒಂದ್ ಸೆಲ್ಫಿ'.. ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್, ಹರಿಪ್ರಿಯಾ ಮೊದಲ ಬಾರಿಗೆ ಅಭಿನಯಿಸಿರುವ ಚಿತ್ರ. ಆರಂಭದಿಂದಲೂ ಸಾಕಷ್ಟು ವಿಚಾರಗಳಲ್ಲಿ ಸದ್ದು ಮಾಡುತ್ತಿದ್ದ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ.
ಜೀವನ, ಕನಸು, ಭಾಷೆ, ಸಂಬಂದಗಳ ಮೌಲ್ಯಗಳನ್ನ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ ಎನ್ನುವ ಸೂಚನೆಯನ್ನು ನಿರ್ದೇಶಕರು ಟ್ರೇಲರ್ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ದೇಶ ಸುತ್ತಿ ನೋಡು.. ಕೋಶ ಓದಿ ನೋಡು.. ಎನ್ನುವ ಮಾತಿನಂತೆಯೇ ಚಿತ್ರದ ಮೂರು ಪ್ರಮುಖ ಪಾತ್ರಗಳು ಟ್ರಾವೆಲಿಂಗ್ ನಲ್ಲಿ ಒಂದಾಗುವಂತ ದೃಶ್ಯಗಳು ಟ್ರೇಲರ್ ನಲ್ಲಿವೆ. ಸುಧಾರಾಣಿ ಸಿನಿಮಾದಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಕರ್ನಾಟಕದ ಸುಂದರ ತಾಣಗಳು ಹಾಗೂ ಗೋವಾದ ಸಮುದ್ರ ತೀರವನ್ನು ಸಿನಿಮಾದಲ್ಲಿ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. 'ಲೈಫ್ ಜೊತೆ ಒಂದ್ ಸೆಲ್ಫಿ' ಟೈಟಲ್ ಡಿಸೈನ್ಸ್ ನಂತೆಯೇ ಸಿನಿಮಾ ಟ್ರೇಲರ್ ಕೂಡ ಕಲರ್ ಫುಲ್ ಆಗಿದೆ. ಇನ್ನು ಕಲಾವಿದರಾದ ನಟ ಪ್ರೇಮ್ ಹಾಗೂ ಪ್ರಜ್ವಲ್ ತೆರೆ ಮೇಲೆ ಸಖತ್ ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಹರಿಪ್ರಿಯಾ ಕೂಡ ಮಾಡ್ರನ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಸಿನಿಮಾ ಟೆಕ್ನಿಕಲಿ ಸೌಂಡ್ ಮಾಡುವ ಸೂಚನೆ ಈಗಾಗಲೇ ಸಿಕ್ಕಿದೆ. ಸದ್ಯ ಟ್ರೇಲರ್ ಬಿಡುಗಡೆ ಮಾಡಿರುವ ನಿರ್ದೇಶಕರು ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಪೋಸ್ಟರ್ ಹಾಗೂ ಸ್ಟಾರ್ ಕಾಸ್ಟ್ ನಿಂದ ಭರವಸೆ ಮೂಡಿಸಿದ್ದ ಸಿನಿಮಾ ಸದ್ಯ ಟ್ರೇಲರ್ ನಿಂದ ಸೌಂಡ್ ಮಾಡುತ್ತಿದೆ. ನಿನ್ನೆ ರಾತ್ರಿಯಷ್ಟೇ ಬಿಡುಗಡೆ ಆಗಿರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಟ್ರೇಲರ್ ಯೂ ಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.


Click it and Unblock the Notifications











