ರಕ್ಷಿತಾ ಪ್ರೇಮ್‌ ತಮ್ಮ ರಾಣಾ ಹೊಸ ಪಬ್ 'ಲೆವಲ್ಸ್‌'ನ ದರ ಎಷ್ಟು? ಪಾರ್ಟಿ ಮಾಡಿದರೆ ಕಥೆ ಹೆಂಗೆ..?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.

ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್‌ ನಲ್ಲಿ ಹಣ ಹೂಡಿದ್ದಾರೆ.

Lights Camera Price Tag Kannada Star Raanna s Levels Pub Will the Rates Make You Cheer or Cringe

ತೀರಾ ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮದೇ ''ಪರ್ಫ್ಯೂಮ್'' ಬ್ರ್ಯಾಂಡ್ ಶುರು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಸೇರಿ ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತಮ್ಮ ಹೋಟೆಲ್ ಬ್ರ್ಯಾಂಚ್‌ಗಳನ್ನು ಶುರು ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿಯ ಉದ್ಯಮಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ಕನ್ನಡದ ನಟ ಮತ್ತು ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಕೂಡ ಒಬ್ಬರು.

ಹೌದು, ರಾಣಾ.. ''ಏಕ್ ಲವ್ ಯಾ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸುರ ಸುಂದರ. ''ಏಳುಮಲೆ'' ಇವರ ಅಭಿನಯದ ಮತ್ತೊಂದು ಚಿತ್ರ. ಈ ಎರಡು ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಹಲವರ ಹೃದಯ ಗೆದ್ದ ರಾಣಾ ಕೇವಲ ಆಕ್ಟರ್ ಮಾತ್ರ ಅಲ್ಲ ಉದ್ಯಮಿ ಕೂಡ ಹೌದು. ಬೆಂಗಳೂರಿನ ಜೆಪಿ ನಗರದ ನಾಲ್ಕನೇ ಹಂತದಲ್ಲಿ ಈಗಾಗಲೇ ಕಿರಣ್.. ರಾಜ್ ಕುಮಾರ್.. ಅಜಯ್.. ಕೇಶವ್ ಅವರ ಜೊತೆ ಸೇರಿ ರಾಣಾ ''ಲೆವಲ್ಸ್'' ಪಬ್ ಶುರು ಮಾಡಿದ್ದಾರೆ. ಈಗಾಗಲೇ ಈ ಪಬ್ ಐದು ವರ್ಷಗಳನ್ನು ಪೂರೈಸಿದೆ.

lights-camera-price-tag-kannada-star-raannas-levels-pub-will-the-rates-make-you-cheer-or-cringe

ಇಂಥಾ ರಾಣಾ ಸದ್ಯ ತಮ್ಮ ''ಲೆವಲ್ಸ್‌'' ಪಬ್‌ನ ಎರಡನೇ ಬ್ರ್ಯಾಂಚ್ ಶುರು ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ನಾಗರಭಾವಿ ಸರ್ಕಲ್‌ನಲ್ಲಿ ಈ ಪಬ್ ಶುರುವಾಗಿದ್ದು, ಈ ಪಬ್‌ಗೆ ನೀವೇನಾದರೂ ಯೋಗುವ ಯೋಚನೆ ಮಾಡಿದ್ದರೆ ನಾವು ನಿಮಗಾಗಿ ಇಲ್ಲಿ ಹಂಚಿಕೊಂಡಿರುವ ಲೆವಲ್ಸ್‌ ಪಬ್‌ನ ಮೆನು ಕಾರ್ಡ್‌ ಮೇಲೊಮ್ಮೆ ಕಣ್ಣಾಡಿಸಿ ಬಿಡಿ.

ರಾಣಾ ಅವರ ಈ ''ಲೆವಲ್ಸ್‌'' ಪಬ್‌ನಲ್ಲಿ ಸೂಪ್‌ನ ಬೆಲೆ ₹195 ರೂಪಾಯಿಂದ ಶುರುವಾಗುತ್ತೆ. ಟಾಮ್ ಯಮ್ ಸೂಪ್.. ಸ್ಪೈಸಿ ಕಾರ್ನ್ ಸೂಪ್.. ಲೆಮನ್ ಕೋರಿಯಂಡರ್ ಸೂಪ್‌ಗಳನ್ನು ನೀವು ₹195 ರೂಪಾಯಿ ನೀಡಿ ಕುಡಿಯಬಹುದು. ಇನ್ನು. ಪೀನಟ್ ಮಸಾಲಾಗೆ ₹215 ರೂಪಾಯಿಯನ್ನು ನೀವು ಕೊಡಬೇಕು. ಮಸಾಲಾ ಪಾಪಡ್ ತಿನ್ನಬೇಕು ಎಂದು ನಿಮಗೆ ಅನಿಸಿದರೆ ₹175 ರೂಪಾಯಿ ನೀಡಬೇಕು. ಫ್ರೆಂಚ್ ಫ್ರೈಸ್‌ಗೆ ₹255 ದರ ನಿಗದಿ ಮಾಡಲಾಗಿದೆ. ಹತ್ತು ರೂಪಾಯಿ ಹೆಚ್ಚು ನೀಡಿದರೆ ಪೆರಿ ಪೆರಿ ಫ್ರೈಸ್ ಸಿಗುತ್ತೆ.

Lights Camera Price Tag Kannada Star Raanna s Levels Pub Will the Rates Make You Cheer or Cringe

ಇನ್ನು ವೆಜ್ ಸ್ಟಾರ್ಟರ್ಸ್ ₹330 ರೂಪಾಯಿಯಿಂದ ಶುರುವಾಗುತ್ತವೆ. ಅತ್ಯಂತ ಕಡಿಮೆ ಅಂದರೆ ಸಾಬೂದಾನಾ ವಡಾ ಇದೆ. ಅದಕ್ಕೂ ಕೂಡ ₹265 ರೂಪಾಯಿಯನ್ನು ನೀವು ಕೊಡಬೇಕು. ಮಾಂಸಾಹಾರ ಪ್ರಿಯರಿಗೆ ಇಲ್ಲಿ ₹375 ರೂಪಾಯಿಯಿಂದ ಸ್ಟಾಟರ್ಸ್‌ ಲಭ್ಯ ಇವೆ. ಚಿಕನ್ ಲಾಲಿ ಪಾಪ್.. ಡ್ರ್ಯಾಗನ್ ಚಿಕನ್.. ಥಾಯಿ ಚಿಕನ್.. ಪೆಪ್ಪರ್ ಚಿಕನ್.. ಎಲ್ಲವೂ ₹375 ರೂಪಾಯಿಗೆ ಲಭ್ಯ.

ಊಟ ಮಾಡಲು ಬಯಸಿದರೆ ನಾಲ್ಕು ಪೀಸ್ ನೀರ್ ದೋಸೆಗೆ ₹125 ರೂಪಾಯಿಯನ್ನು ನೀವು ಕೊಡಬೇಕಾಗುತ್ತೆ. ತಂದೂರ್ ರೋಟಿ ಪ್ಲೇನ್ ₹65.. ತಂದೂರ್ ಬಟರ್ ₹75 ಮತ್ತು ಕುಲ್ಚಾ ಪ್ಲೇನ್‌ಗೆ ₹65 ರೂಪಾಯಿ ದರ ನಿಗದಿ ಮಾಡಲಾಗಿದೆ. ಪಾಲಕ್ ಪನ್ನೀರ್ ₹315.. ಪಾಲಕ್ ಟಿಕ್ಕಾ ಮಸಾಲಾ ₹315.. ಪನ್ನೀರ್ ಕಡಾಯಿ ₹325ಕ್ಕೆ ಸಿಗುತ್ತವೆ.

Lights Camera Price Tag Kannada Star Raanna s Levels Pub Will the Rates Make You Cheer or Cringe

₹385 ರೂಪಾಯಿ ನೀಡಿದರೆ ಬಟರ್ ಚಿಕನ್, ಚಿಕನ್ ಟಿಕ್ಕಾ ಮಸಾಲಾ ನೀವು ಸವಿಯಬಹುದು. ಮಟನ್ ದರ ₹500 ರೂಪಾಯಿ ಮೇಲಿದೆ. ಇನ್ನು ವೆಜ್ ಫ್ರೈಡ್ ರೈಸ್ ₹285.. ಎಗ್ ಫ್ರೈಡ್ ರೈಸ್‌ಗೆ ₹295.. ಚಿಕನ್ ಫ್ರೈಡ್ ರೈಸ್ ₹325.. ಪ್ರಾನ್ಸ್ ಫ್ರೈಡ್ ರೈಸ್‌ಗೆ ₹365 ರೂಪಾಯಿ ದರ ಫಿಕ್ಸ್ ಮಾಡಲಾಗಿದೆ.

ಇನ್ನು ಎಣ್ಣೆಪ್ರಿಯರು 330 ML ಕಿಂಗ್ ಫಿಶರ್ ಪ್ರೀಮಿಯಂಗೆ ₹245 ರೂಪಾಯಿ ಕೊಡಬೇಕು. 30 Ml ಓಲ್ಡ್ ಮಾಂಕ್ ಕುಡಿಯುವ ಆಸೆ ಆದರೆ ₹175 ರೂಪಾಯಿಯನ್ನು ನೀವು ನೀಡಬೇಕು. 30 ml ಜಾನಿ ವಾಕರ್ ಬ್ಲೂಗೆ ₹1645 ರೂಪಾಯಿ ದರ ಇಲ್ಲಿದೆ.

Lights Camera Price Tag Kannada Star Raanna s Levels Pub Will the Rates Make You Cheer or Cringe

ಹೀಗೆ ವೆರೈಟಿ ವೆರೈಟಿ ಡಿಶ್‌ಗಳನ್ನೊಂದಿರುವ ''ಲೆವಲ್ಸ್‌''ನಲ್ಲಿ ವೆರೈಟಿ ವೆರೈಟಿ ದರಗಳನ್ನು ನಿಗದಿ ಮಾಡಲಾಗಿದ್ದು, ''ಲೆವಲ್ಸ್‌''ನಲ್ಲಿ ತಮಗಾದ ಅನುಭವವನ್ನು ಕೆಲ ಗ್ರಾಹಕರು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ.

ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಸ್ನೇಹಾ ''ಲೆವಲ್ಸ್‌''ನಲ್ಲಿನ ವಾತಾವರಣ ಚೆನ್ನಾಗಿದೆ, ವೈಬ್ ಚೆನ್ನಾಗಿದೆ, ಆದರೆ.. ನಾನ್ ವೆಜ್‌ಗಿಂತ ವೆಜ್‌ನ ದರ ಹೆಚ್ಚಿದೆ ಎಂದು ಹೇಳಿದ್ದಾರೆ. ನಾವು ಕುಲ್ಚಾ ಪ್ಲೇನ್ ಮತ್ತು ಪನೀರ್ ಮಂಚೂರಿಯನ್ ಗ್ರೇವಿ ತೆಗೆದುಕೊಂಡಿದ್ದೇವು, ಪರವಾಗಿಲ್ಲ ರುಚಿ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

lights-camera-price-tag-kannada-star-raannas-levels-pub-will-the-rates-make-you-cheer-or-cringe

ಇನ್ನು ಮತ್ತೊಬ್ಬ ಕಸ್ಟಮರ್ ರಿತಿಕಾ ಕೂಡ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ತಮ್ಮ ''ಲೆವಲ್ಸ್‌'' ಅನುಭವ ಹಂಚಿಕೊಂಡಿದ್ದು ಗ್ರಾಹಕರು ಕೊಟ್ಟಿರುವ ದುಡ್ಡಿಗೆ ಮೋಸ ಆಗಲ್ಲ ಎಂದು ಹೇಳಿದ್ದಾರೆ. ''ಲೆವಲ್ಸ್‌''ನಲ್ಲಿ ನಮ್ಮ ಅನುಭವ ಚೆನ್ನಾಗಿತ್ತು ಎಂದು ಹೇಳಿರುವ ರಿತಿಕಾ ನಮ್ಮ ನಾಗರಭಾವಿ ಸರ್ಕಲ್ ಬಳಿ ಈಗಷ್ಟೇ ಈ ಪಬ್ ಆರಂಭವಾದ ಹಿನ್ನೆಲೆ ಕ್ರೌಡ್ ತುಸು ಹೆಚ್ಚಿತ್ತು. ಹೀಗಾಗಿ ನಮಗೆ ಟೇಬಲ್ ಸಿಗುವುದು ಸ್ವಲ್ಪ ತಡವಾಯ್ತು ಎಂದು ಹೇಳಿದ್ದಾರೆ.

''ಲೆವಲ್ಸ್‌'' ಪಬ್‌ಗೆ ಬಂದಿದ್ದ ಮತ್ತೊಬ್ಬ ಪಾರ್ಟಿ ಫ್ರೀಕ್ ವ್ಯಕ್ತಿ ಸಾಗರ್ ಕೂಡ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿದ್ದು, ಎಲ್ಲ ಪಬ್‌ಗಳಂತೆ ಇಲ್ಲಿಯೂ ಕೂಡ ಡ್ರಿಂಕ್ಸ್‌ ಬೆಲೆ ಹೆಚ್ಚಿದೆ. ಆದರೆ ಫುಡ್ ಟೆಸ್ಟಿಯಾಗಿದೆ ಎಂದು ಹೇಳಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ ಸರಿ ಇಲ್ಲ ಹೀಗಾಗಿ ಕಾರಿನಲ್ಲಿ ಈ ಪಬ್‌ಗೆ ಬರುವವರು ಬೇರೆ ಎಲ್ಲಾದರೂ ಕಾರು ಪಾರ್ಕ್‌ ಮಾಡಿ ಬರುವುದು ಒಳ್ಳೆಯದು ಎಂದು ಹೇಳಿದ್ದಾರೆ. ವಾಲೆಟ್ ಪಾರ್ಕಿಂಗ್ ಆಯ್ಕೆ ಇದೆಯಾದರೂ ಕೂಡ ಸರ್ಕಲ್‌ನಲ್ಲಿ ಪಬ್ ಇರುವ ಕಾರಣಕ್ಕೆ ಯಾವುದಾದರೂ ಕಾರು ನಿಂತರೆ ಹಿಂದೆ ಬರುವ ವಾಹನ ಸವಾರರಿಗೆ ಕಿರಿಕಿರಿಯಾಗುತ್ತೆ. ಟ್ರಾಫಿಕ್ ಜಾಮ್ ಆಗುತ್ತೆ ಎಂದು ಹೇಳಿದ್ದಾರೆ.

More from Filmibeat

English summary
Kannada star Raanna (Rakshita Prem’s brother) is the owner of Levels Pub. We reveal the menu rates! Are they celebrity-priced or surprisingly affordable?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X