»   » ಸುದೀಪ್ ಗೆ ಆಕ್ಷ ಕಟ್ ಹೇಳಲಿದ್ದಾರೆ ಲಿಂಗಾ ಡೈರೆಕ್ಟರ್

ಸುದೀಪ್ ಗೆ ಆಕ್ಷ ಕಟ್ ಹೇಳಲಿದ್ದಾರೆ ಲಿಂಗಾ ಡೈರೆಕ್ಟರ್

By: ಉದಯರವಿ
Subscribe to Filmibeat Kannada

ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಿರ್ದೇಶಕ ಕೆ.ಎಸ್.ರವಿಕುಮಾರ್. ತಮ್ಮ ಇಪ್ಪತ್ತೈದು ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಕಾಮಿಡಿ, ಡ್ರಾಮಾ, ಆಕ್ಷನ್ ಚಿತ್ರಗಳಿಗೆ ಹೆಸರಾದವರು ರವಿ.

ಅವರ ನಿರ್ದೇಶನದಲ್ಲಿ ಮೂಡಿಬಂದ 'ದಶಾವತಾರಂ' (2008) ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿನ ಅವರ 'ಲಿಂಗಾ' ಚಿತ್ರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಅವರು ಕಿಚ್ಚ ಸುದೀಪ್ ಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. [ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್]

KS Ravikumar to direct Sudeep

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಸುದೀಪ್ ಜೊತೆಗಿನ ಚಿತ್ರಕ್ಕೆ ರವಿಕುಮಾರ್ ಆಕ್ಷನ್ ಕಟ್ ಹೇಳಬೇಕಾಗಿತ್ತು. ಆದರೆ 'ಲಿಂಗಾ' ಚಿತ್ರದ ಕಾರಣ ಮುಂದೂಡಲ್ಪಟ್ಟಿದೆ ಎನ್ನುತ್ತವೆ ಮೂಲಗಳು. ಇದೊಂದು ತ್ರಿಭಾಷಾ ಸಿನಿಮಾ ಆಗಿದ್ದು ಕನ್ನಡ, ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆಯಂತೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಸದ್ಯಕ್ಕೆ ಸುದೀಪ್ ಅವರು 'ರನ್ನ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಜೊತೆಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೇರಿದಂತೆ ಹಲವಾರು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ತಮಿಳು ನಟ ವಿಜಯ್ ಜೊತೆಗಿನ ಚಿತ್ರದಲ್ಲೂ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ರವಿಕುಮಾರ್ ನಿರ್ದೇಶನದ ಚಿತ್ರ ಎಂದರೆ ಸುದೀಪ್ ಅಭಿಮಾನಿಗಳಿಗೆ ಸಂಭ್ರಮದ ಸಂಗತಿ.

English summary
Veteran director KS Ravikumar who is well known for his collaboration with Rajinikanth will now direct Sandalwood actor Kiccha Sudeep. This is definitely a big news for Sudeep fans. A close source to the director said, the movie was suppose to go on floors earlier, but due to Lingaa it was postponed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada