'ಬುಲ್ ಬುಲ್' ಚಿತ್ರಕ್ಕೂ 'Rambo-2' ಚಿತ್ರಕ್ಕೂ ಇರೋ 5 ಸಂಬಂಧ.!

By Bharath Kumar

Recommended Video

ಬುಲ್ ಬುಲ್ ಸಿನೆಮಾಗೂ ರಾಂಬೊ ೨ ಗೂ ಇದೆ ಸಂಬಂಧ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ಬುಲ್ ಬುಲ್' ಸಿನಿಮಾ ಬಿಡುಗಡೆಯಾಗಿ ಮೇ 10ಕ್ಕೆ ಐದು ವರ್ಷ ಕಳೆದಿದೆ. ಈ ಚಿತ್ರದ ಮೂಲಕವೇ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಕಾಲಿಟ್ಟಿದ್ದು.

ಈಗ ಐದು ವರ್ಷದ ನಂತರ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ 'Rambo-2' ಸಿನಿಮಾ ತೆರೆಗೆ ಬರ್ತಿದೆ. ಮೇಲ್ನೊಟಕ್ಕೆ ಶರಣ್ 'Rambo-2' ಚಿತ್ರಕ್ಕೂ ಮತ್ತು ದರ್ಶನ್ 'ಬುಲ್ ಬುಲ್' ಸಿನಿಮಾಗೂ ಯಾವುದೇ ಸಂಬಂಧವಿಲ್ಲ.

ಆದ್ರೆ, ಸ್ವಲ್ಪ ಆಳವಾಗಿ ನೋಡಿದರೇ, ಇವರೆಡು ಚಿತ್ರಗಳಿಗೂ ಹತ್ತಿರದ ಸಂಬಂಧವಿದೆ. ಇದು ಕಾಕತಾಳೀಯವೋ ಅಥವಾ ಪೂರ್ವನಿಯೋಜಿತವೋ ಎಂಬ ಕುತೂಹಲದ ನಡುವೆ ಈ ಅಂಶಗಳು ಈಗ ಚರ್ಚೆಯಾಗುತ್ತಿದೆ. ಅಷ್ಟಕ್ಕೂ, ಐದು ವರ್ಷ ಹಿಂದಿನ ದರ್ಶನ್ ಸಿನಿಮಾಗೂ ಈಗ ಬಿಡುಗಡೆಯಾಗ್ತಿರೋ ಶರಣ್ ಸಿನಿಮಾಗೂ ಏನ್ ಸಂಬಂಧ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ....ಮುಂದೆ ಓದಿ....

2 ಚಿತ್ರಗಳು ಚುನಾವಣೆ ಆದ್ಮೇಲೆ ಬಿಡುಗಡೆಯಾಗಿದೆ

2 ಚಿತ್ರಗಳು ಚುನಾವಣೆ ಆದ್ಮೇಲೆ ಬಿಡುಗಡೆಯಾಗಿದೆ

ಮೇ 5, 2013ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿತ್ತು. ಮೇ 8 ರಂದು ಫಲಿತಾಂಶ ಹೊರಬಿದ್ದಿತ್ತು. ಫಲಿತಾಂಶ ಪ್ರಕಟವಾದ ವಾರವೇ 'ಬುಲ್ ಬುಲ್' ಸಿನಿಮಾ ತೆರೆಗೆ (ಮೇ 10) ಬಂದಿತ್ತು. ಈಗಲೂ ಅಷ್ಟೇ 2018 ಚುನಾವಣೆಯ ಫಲಿತಾಂಶ ನಂತರ 'Rambo-2' ಬಿಡುಗಡೆಯಾಗುತ್ತಿದೆ. ಅಂದ್ರೆ, ಫಲಿತಾಂಶ ಮೇ 15 ರಂದು ಹೊರಬಿತ್ತು. ಸಿನಿಮಾ ಮೇ 18 ರಂದು ಬರ್ತಿದೆ. ಇದು ಮೊದಲನೇಯ ಅಂಶ.

ತಂತ್ರಜ್ಞರಿಗಾಗಿ ಮಾಡಿದ ಚಿತ್ರಗಳು

ತಂತ್ರಜ್ಞರಿಗಾಗಿ ಮಾಡಿದ ಚಿತ್ರಗಳು

ಅಂದ್ಹಾಗೆ, ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರವನ್ನ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರಿಗಾಗಿ. ಈ ಚಿತ್ರದಿಂದ ಬಂದ ಆದಾಯವನ್ನ ಅವರ ಕುಟುಂಬಗಳಿಗೆ ನೀಡಲಾಗಿತ್ತು. ಈಗ 'Rambo-2' ಚಿತ್ರವೂ ಅದೇ ಹಾದಿಯಲ್ಲಿ ಸಾಗಿದೆ. ಈ ಚಿತ್ರದಲ್ಲಿ ಬಂದ ಹಣವನ್ನ ತಂತ್ರಜ್ಞರ ಕುಟುಂಬಗಳಿಗೆ ನೀಡಲಾಗುವುದು. ಇದು ಎರಡನೇಯ ಹೋಲಿಕೆ.

ಎರಡೂ ಚಿತ್ರಕ್ಕೂ ಒಂದೇ ಚಿತ್ರಮಂದಿರ

ಎರಡೂ ಚಿತ್ರಕ್ಕೂ ಒಂದೇ ಚಿತ್ರಮಂದಿರ

ಅಂದು ದರ್ಶನ್ ಅವರ 'ಬುಲ್ ಬುಲ್' ಸಿನಿಮಾ ಬಿಡುಗಡೆಯಾಗಿದ್ದು ಗಾಂಧಿನಗರದ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ. ಇಂದು ಶರಣ್ ಅವರ 'Rambo-2' ಚಿತ್ರವೂ ಬಿಡುಗಡೆಯಾಗುತ್ತಿರುವುದು ಅದೇ ನರ್ತಕಿ ಚಿತ್ರಮಂದಿರದಲ್ಲಿ. ಇದು ಇವರೆಡು ಚಿತ್ರಗಳಲ್ಲಿ ಗಮನ ಸೆಳೆದಿರುವ ಮೂರನೇ ಅಂಶ.

ಎರಡು ಚಿತ್ರಗಳಲ್ಲೂ ನಾಯಕರೇ ನಿರ್ಮಾಪಕರು

ಎರಡು ಚಿತ್ರಗಳಲ್ಲೂ ನಾಯಕರೇ ನಿರ್ಮಾಪಕರು

'ಬುಲ್ ಬುಲ್' ಸಿನಿಮಾವನ್ನ ನಿರ್ಮಾಣ ಮಾಡಿದ್ದು ತೂಗುದೀಪ ಪ್ರೊಡಕ್ಷನ್. ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ವಂತ ನಿರ್ಮಾಣ ಸಂಸ್ಥೆ. ಈಗ 'Rambo-2' ಚಿತ್ರವನ್ನ ನಿರ್ಮಾಣ ಮಾಡಿರುವುದು ನಾಯಕ ನಟ ಶರಣ್ ಅಂಡ್ ಟೀಂ. ಇಲ್ಲಿಗೆ ಎರಡು ಚಿತ್ರಗಳಲ್ಲಿ ನಾಲ್ಕನೇಯ ಅಂಶವೂ ಬಹುತೇಕ ಒಂದೇ ಆಗಿದೆ.

ಹಾಡುಗಳು ಸೂಪರ್ ಹಿಟ್

ಹಾಡುಗಳು ಸೂಪರ್ ಹಿಟ್

ಬುಲ್ ಬುಲ್ ಸಿನಿಮಾದಲ್ಲಿ ಹಾಡುಗಳು ಸೂಪರ್ ಹಿಟ್ ಆಗಿತ್ತು. ಸಿನಿಮಾ ಬರುವುದಕ್ಕೂ ಮೊದಲೇ ಹರಿಕೃಷ್ಣ ಸಂಗೀತ ಹಾಡುಗಳು ಮೆಚ್ಚುಗೆ ಗಳಿಸಿಕೊಂಡಿದ್ದವು. ಈಗ ನಾಲ್ಕನೇಯ 'Rambo-2' ಚಿತ್ರದಲ್ಲೂ ಅಷ್ಟೇ. ಹಾಡುಗಳು ಸೂಪರ್ ಹಿಟ್ ಆಗಿವೆ. ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ. ಈ ಎಲ್ಲ ಅಂಶಗಳು ಈ ಎರಡು ಚಿತ್ರಗಳಲ್ಲೂ ಒಂದೇ ಆಗಿದೆ. ಇದನ್ನ ಸ್ವತಃ 'Rambo-2' ಚಿತ್ರದ ನಿರ್ದೇಶಕರೇ ಹಂಚಿಕೊಂಡಿದ್ದಾರೆ.

More from Filmibeat

English summary
Relationship between Challenging star darshan starrer bul bul movie sharan starrer and sharan rambo-2 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X