ಕನ್ನಡದಲ್ಲಿಯೂ ಶುರುವಾಯ್ತು ಕಿಸ್ಸಿಂಗ್ ಪುರಾಣ
'ಅರ್ಜುನ್ ರೆಡ್ಡಿ', 'ಗೀತಾ ಗೋವಿಂದಂ', 'ಆರ್ ಎಸ್ 100' ಚಿತ್ರಗಳ ರೀತಿ ಕನ್ನಡದಲ್ಲಿಯೂ ಈಗ ಒಂದು ಬೋಲ್ಡ್ ಅಂಡ್ ಬ್ಯೂಟಿಫುಲ್ ಸಿನಿಮಾ ಬರುತ್ತಿದೆ ಅದೇ 'ಆದಿ ಪುರಾಣ'.
'ಆದಿ ಪುರಾಣ' ಸಿನಿಮಾ ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಪೋಸ್ಟರ್ ನಲ್ಲಿ ಇರುವ ಕಿಸ್ಸಿಂಗ್ ದೃಶ್ಯ ದೊಡ್ಡ ಸುದ್ದಿ ಮಾಡಿದೆ. ಜೊತೆಗೆ ಟ್ರೇಲರ್ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ.
ಶಶಾಂಕ್ ಈ ಸಿನಿಮಾದ ನಾಯಕನಾಗಿದ್ದಾರೆ. ಅಹಲ್ಯಾ ಹಾಗೂ ಮೋಕ್ಷಕುಲಾಲ್ ಎಂಬ ಇಬ್ಬರು ನಾಯಕಿಯರು ಆದಿಗೆ ಜೋಡಿಯಾಗಿದ್ದಾರೆ. ಮೇಹನ್ ಕಾಮಾಕ್ಷಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಶಮಂತ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ.

'ಆದಿ ಪುರಾಣ' ಪಕ್ಕಾ ಪೈಸಾ ವಸೂಲ್ ಸಿನಿಮಾವಾಗಿದೆಯಂತೆ. ಆದಿ ಎಂಬ ಹುಡುಗ ಪ್ರೇಮ ಹಾಗೂ ಸಂಸಾರದ ಕಥೆ ಚಿತ್ರದಲ್ಲಿದ್ದು, ನೋಡುಗರಿಗೆ ಒಳ್ಳೆಯ ಮಜಾ ನೀಡಲಿದೆಯತೆ. ಚಿತ್ರದಲ್ಲಿ ರಂಗಾಯಣ ರಘು, ಆದಿತ್ಯ ಭಾರಧ್ವಜ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ಅಂದಹಾಗೆ, ಕಿಸ್ಸಿಂಗ್ ಸೀನ್ ಚಿತ್ರದ ಒಂದು ಪ್ರಮುಖ ಘಟ್ಟದಲ್ಲಿ ಬರಲಿದೆ. ಯುವ ಮನಸ್ಸುಗಳ ಜೊತೆಗೆ ಫ್ಯಾಮಿಲಿಯವರಿಗೆ ಸಹ ಸಿನಿಮಾ ಇಷ್ಟ ಆಗಲಿದೆಯಂತೆ.


Click it and Unblock the Notifications











