India
  For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುನ್ನ ಗರ್ಭ ಧರಿಸಿದ ತಾರೆಯರಿವರು!

  |

  ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೂನ್ 27 ಆಲಿಯಾ ಭಟ್ ಗರ್ಭಿಣಿ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆಸ್ಪತ್ರೆಯ ಬೆಡ್‌ನಲ್ಲಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ವಿವಾಹವಾದರು. ಕೆಲವೇ ಆತ್ಮೀಯರು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಿದೆ. ಆಲಿಯಾ ಭಟ್ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ ನಂತರ, ಮದುವೆಗೆ ಮೊದಲು ಗರ್ಭಧರಿಸಿದ ನಟಿಯರ ಬಗ್ಗೆ ಸುದ್ದಿ ಹಬ್ಬಿದೆ.

  ತಾಯಿಯಾಗುತ್ತಿರುವ ಆಲಿಯಾ ಭಟ್: ಆತಂಕದಲ್ಲಿ ಕೆಲ ನಿರ್ಮಾಪಕರು!ತಾಯಿಯಾಗುತ್ತಿರುವ ಆಲಿಯಾ ಭಟ್: ಆತಂಕದಲ್ಲಿ ಕೆಲ ನಿರ್ಮಾಪಕರು!

  ಬಾಲಿವುಡ್‌ನ ಹಲವು ನಟಿಮಣಿಯರು ಮದುವೆಗೂ ಮುನ್ನ ಗರ್ಭ ಧರಿಸಿದ್ದಾರೆ. ಬಳಿಕ ಮದುವೆ ಆಗಿದ್ದಾರೆ. ಈ ಸಾಲಿನಲ್ಲಿ ಸ್ಟಾರ್ ನಟಿಯರೂ ಕೂಡ ಇದ್ದಾರೆ. ನೇಹಾ ಧೂಪಿಯಾ, ಕೊಂಕಣ ಸೇನ್, ಶ್ರೀದೇವಿ ಕೂಡ ಇದ್ದಾರೆ. ಮುಂದೆ ಓದಿ...

  ಅಂಗದ್ ಬೇಡಿ-ನೇಹಾ ಧೂಪಿಯಾ ಮದುವೆ!

  ಅಂಗದ್ ಬೇಡಿ-ನೇಹಾ ಧೂಪಿಯಾ ಮದುವೆ!

  ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ 2018ರಲ್ಲಿ ಮದುವೆ ಆದರು. ಯಾವುದೇ ಸುದ್ದಿ ಇಲ್ಲದೇ ಈ ಜೋಡಿ ಗೌಪ್ಯವಾಗಿ ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ ವಿಚಾರವನ್ನು ಹಂಚಿಕೊಂಡರು. ಆದರೆ ಇವರ ಮದುವೆಗಿಂತ ಮಗುವಿನ ಬಗ್ಗೆ ಹೆಚ್ಚಿನ ಸುದ್ದಿ ಹಬ್ಬಿತ್ತು. ಇನ್ನು ಮದುವೆ ಆದ 3 ತಿಂಗಳಲ್ಲಿ ನೇಹಾ ಧೂಪಿಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಘೋಷಿಸುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದ್ದರು.

  'ವಿಕ್ರಾಂತ್ ರೋಣ' ಪ್ರಚಾರದ ನಡುವೆ ಇಡಿ ವಿಚಾರಣೆಗೆ ಹಾಜರಾದ 'ರಕ್ಕಮ್ಮ''ವಿಕ್ರಾಂತ್ ರೋಣ' ಪ್ರಚಾರದ ನಡುವೆ ಇಡಿ ವಿಚಾರಣೆಗೆ ಹಾಜರಾದ 'ರಕ್ಕಮ್ಮ'

  ಕೊಂಕಣ ಸೇನ್ ಶರ್ಮಾ!

  ಕೊಂಕಣ ಸೇನ್ ಶರ್ಮಾ!

  ನತಾಶಾ ಸ್ಟಾಂಕೋವಿಕ್ ಮೇ 31, 2020ರಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ವಿವಾಹವಾದರು. ನತಾಶಾ ಸ್ಟಾಂಕೋವಿಕ್ ಮದುವೆಯ ಸುದ್ದಿ ಪ್ರಕಟಿಸುವುದರ ಜೊತೆಗೆ, ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದನ್ನು ಕೂಡ ದೃಢಪಡಿಸಿದರು. ಇನ್ನು ಕೊಂಕಣ ಸೇನ್ ಶರ್ಮಾ ಮತ್ತು ರಣವೀರ್ ಶೋರೆ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೊತೆಗೆ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು.

  ಶ್ರೀದೇವಿ ಮದುವೆಗೂ ಮುನ್ನ ಗರ್ಭ ಧರಿಸಿದ್ದರು!

  ಶ್ರೀದೇವಿ ಮದುವೆಗೂ ಮುನ್ನ ಗರ್ಭ ಧರಿಸಿದ್ದರು!

  ದಿವಂಗತ ನಟಿ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ತಮ್ಮ ಮೊದಲ ಮಗು ಜಾಹ್ನವಿ ಹೊಟ್ಟೆಯಲ್ಲಿ ಇದ್ದಳು. ಇವರು ಮದುವೆ ಆಗುವ ಸಂದರ್ಭದಲ್ಲಿ ಶ್ರೀದೇವಿ 7 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ನಟಿ ಸಾರಿಕಾ ಜನಪ್ರಿಯ ನಟ ಕಮಲ್ ಹಾಸನ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಗರ್ಭಿಣಿಯಾದ ಬಳಿಕ ಇಬ್ಬರೂ ಮದುವೆ ಆದರು ಎನ್ನಲಾಗಿದೆ.

  ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಇರಲಿಲ್ಲ: ಕಾಂಡೋಮ್ ಕಂಪನಿ ಟ್ವೀಟ್‌ ಭೇಷ್ ಎಂದ ನೆಟ್ಟಿಗರು!ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಇರಲಿಲ್ಲ: ಕಾಂಡೋಮ್ ಕಂಪನಿ ಟ್ವೀಟ್‌ ಭೇಷ್ ಎಂದ ನೆಟ್ಟಿಗರು!

  ಅಮೃತಾ ಅರೋರಾ, ಸೆಲಿನಾ ಜೇಟ್ಲಿ!

  ಅಮೃತಾ ಅರೋರಾ, ಸೆಲಿನಾ ಜೇಟ್ಲಿ!

  ಸೆಲಿನಾ ಜೇಟ್ಲಿ 2011 ರಲ್ಲಿ ತನ್ನ ಆಸ್ಟ್ರೇಲಿಯಾದ ಗೆಳೆಯ ಪೀಟರ್ ಹಾಗ್ ಅವರೊಂದಿಗೆ ಮದುವೆ ಆದರೂ, ಬಳಿಕವೇ ಮಗುವಿನ ಸುದ್ದಿ ಹಂಚಿಕೊಂಡರು. ಇನ್ನು ಅಮೃತಾ ಅರೋರಾ, ಶಕೀಲ್ ಲಡಾಕ್ ಜೊತೆ 2009 ರಲ್ಲಿ ವಿವಾಹವಾದರು. ನಂತರ ಪ್ರೆಗ್ನಿನ್ಸಿ ಕುರಿತು ಅಂತರ್ಜಾಲದಲ್ಲಿ ಮಗುವಿನ ಬಗ್ಗೆ ಸುದ್ದಿ ಹಬ್ಬಿದ್ದವು.

  English summary
  List Film Actresses Who Were Pregnant Before Marriage, Sridevi, Neha Dhupia Is In The List, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X