ಮೊದಲ ಚಿತ್ರದಲ್ಲಿಯೇ ಬ್ಲಾಕ್‌ಬಸ್ಟರ್ ನೀಡಿದ ಕನ್ನಡದ 10 ನಿರ್ದೇಶಕರಿವರು!

ಕನ್ನಡ ಚಿತ್ರರಂಗ ಹಲವಾರು ಪ್ರತಿಭಾವಂತ ನಿರ್ದೇಶಕರನ್ನು ಕಂಡಿದೆ. ಈ ಪೈಕಿ ಹಲವರು ಮೊದಲ ಚಿತ್ರದಲ್ಲಿಯೇ ಸಕ್ಸಸ್ ಕಂಡರೆ, ಇನ್ನೂ ಕೆಲವರು ಮೊದಲ ಚಿತ್ರದಲ್ಲಿ ಎಡವಿ ಬಳಿಕ ಹಿಟ್ ಮೇಲೆ ಹಿಟ್ ನೀಡಿ ಸ್ಟಾರ್ ನಿರ್ದೇಶಕರು ಎನಿಸಿಕೊಂಡಿದ್ದಾರೆ. ಆದರೆ ಮೊದಲ ಚಿತ್ರದಲ್ಲಿ ಎಡವಿದ ಬಳಿಕ ನಿರ್ದೇಶಕರಿಗೆ ಮತ್ತೊಂದು ಅವಕಾಶ ಲಭಿಸುವುದು ಅತೀ ವಿರಳ.

ನಿರ್ದೇಶಕರು ಮೊದಲ ಪ್ರಯತ್ನದಲ್ಲಿಯೇ ಜನರು ಮೆಚ್ಚುವಂತ ಸಿನಿಮಾ ಮಾಡಿದರೆ ಆ ಚಿತ್ರ ಗೆಲ್ಲಲಿದೆ ಹಾಗೂ ನಿರ್ದೇಶಕರಿಗೆ ಬ್ರೇಕ್ ಸಿಕ್ಕಿ ನಿರ್ಮಾಪಕರು ಬಂಡವಾಳ ಹೂಡಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಪ್ರಥಮ ಚಿತ್ರವನ್ನು ಪ್ರತಿಯೊಬ್ಬ ನಿರ್ದೇಶಕನೂ ಸಹ ಅಚ್ಚುಕಟ್ಟಾಗಿ ನಿರ್ದೇಶಿಸಿ ಎಲ್ಲರನ್ನೂ ಆಕರ್ಷಿಸುವ ಗುರಿ ಹೊಂದಿರುತ್ತಾರೆ. ಹೀಗೆ ಇತ್ತೀಚಿನ ದಿನಗಳಲ್ಲಿ ನಿರ್ದೇಶಿಸಿದ ಮೊದಲ ಚಿತ್ರದಲ್ಲಿಯೇ ಗೆದ್ದ ಕನ್ನಡದ 10 ನಿರ್ದೇಶಕರ ಪಟ್ಟಿ ಈ ಕೆಳಕಂಡಂತಿದೆ..

List of 10 kannada directors who have gave blockbuster on debut film

1. ಸಂತೋಷ್ ಆನಂದ್‌ರಾಮ್: 2014ರಲ್ಲಿ ಬಿಡುಗಡೆಗೊಂಡ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಚಿತ್ರವನ್ನು ನಿರ್ದೇಶಿಸಿದ ಸಂತೋಷ್ ಆನಂದ್‌ರಾಮ್ ಫಸ್ಟ್ ಬಾಲ್ ಸಿಕ್ಸರ್ ಬಾರಿಸಿದ್ದರು. ಕನ್ನಡ ಚಿತ್ರರಂಗದ ಎಲ್ಲಾ ಕಲೆಕ್ಷನ್ ದಾಖಲೆಯನ್ನು ಅಳಿಸಿಹಾಕಿದ್ದ ಈ ಚಿತ್ರ ಇಂಡಸ್ಟ್ರಿ ಹಿಟ್ ಆಗಿತ್ತು.

2. ಪ್ರಶಾಂತ್ ನೀಲ್ : 2014ರಲ್ಲಿ ಸಂತೋಷ್ ಆನಂದ್ ಮಾತ್ರವಲ್ಲದೇ ಮತ್ತೊಬ್ಬ ನಿರ್ದೇಶಕ ಮೊದಲ ಚಿತ್ರದಲ್ಲಿಯೇ ದೊಡ್ಡ ಗೆಲುವನ್ನು ಕಂಡಿದ್ದರು. ಹೌದು, ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ದೊಡ್ಡ ಗೆಲುವು ಕಂಡಿರುವ ಪ್ರಶಾಂತ್ ನೀಲ್ ಉಗ್ರಂ ಎಂಬ ಸಿನಿಮಾ ಮಾಡಿ ಭರ್ಜರಿಯಾಗಿ ಸದ್ದು ಮಾಡಿದ್ದರು.

3. ದುನಿಯಾ ಸೂರಿ: 2007ರಲ್ಲಿ ತೆರೆಗೆ ಬಂದಿದ್ದ ದುನಿಯಾ ಚಿತ್ರ ಚಂದನವನದ ಅಲ್‌ ಟೈಮ್ ಯಶಸ್ವಿ ಚಿತ್ರಗಳಲ್ಲಿ ಒಂದು. ಇದು ಸೂರಿ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಒಂದು ವರ್ಷ ದೀರ್ಘ ಪ್ರದರ್ಶನ ಕಂಡಿದ್ದ ಈ ಚಿತ್ರದ ಮೂಲಕ ಸೂರಿ ಮೊದಲ ನಿರ್ದೇಶನದಲ್ಲಿಯೇ ಗೆದ್ದಿದ್ದರು.

List of 10 kannada directors who have gave blockbuster on debut film

4. ಪ್ರೇಮ್: 2003ರಲ್ಲಿ ತೆರೆಗೆ ಬಂದಿದ್ದ ಕರಿಯ ಚಿತ್ರ ಸಹ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿ ಜೀವನದ ದೊಡ್ಡ ಹಿಟ್ ಎನಿಸಿಕೊಂಡಿರುವ ಈ ಚಿತ್ರಕ್ಕೆ ಹ್ಯಾಟ್ರಿಕ್ ನಿರ್ದೇಶಕ ಎನಿಸಿಕೊಂಡಿರುವ ಜೋಗಿ ಪ್ರೇಮ್ ನಿರ್ದೇಶನವಿತ್ತು. ಇದು ಪ್ರೇಮ್ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಪ್ರೇಮ್ ಸಹ ಮೊದಲ ಸಿನಿಮಾದಲ್ಲಿಯೇ ಗೆದ್ದ ನಿರ್ದೇಶಕನಾಗಿದ್ದಾರೆ.

5. ಅನುಪ್ ಭಂಡಾರಿ: 2015ರಲ್ಲಿ ಬಿಡುಗಡೆಗೊಂಡಿದ್ದ ರಂಗಿತರಂಗ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬಾಹುಬಲಿಯನ್ನೇ ಎದುರಿಸಿ ಗೆದ್ದಿತ್ತು. ಹೊಸ ನಿರ್ದೇಶಕ ಅನುಪ್ ಭಂಡಾರಿ ನಿರ್ದೇಶಿಸಿದ್ದ ಈ ಚಿತ್ರ ಬೃಹತ್ ಹಿಟ್ ಆಗಿತ್ತು. ಈ ಮೂಲಕ ಅನುಪ್ ಭಂಡಾರಿ ಸಹ ಮೊದಲ ಚಿತ್ರದಲ್ಲಿಯೇ ಗೆಲುವನ್ನು ಕಂಡಿದ್ರು.

6. ಡಾರ್ಲಿಂಗ್ ಕೃಷ್ಣ: ಹಲವಾರು ಚಿತ್ರಗಳಲ್ಲಿ ಸಹನಟನಾಗಿ ನಟಿಸಿ, ನಾಯಕನಾಗಿ ನಟಿಸಿದರೂ ಸಿಗದಂತಹ ಯಶಸ್ಸನ್ನು ಡಾರ್ಲಿಂಗ್ ಕೃಷ್ಣಗೆ ತಂದುಕೊಟ್ಟದ್ದು ತಾನೇ ಸ್ವತಃ ನಿರ್ದೇಶಿಸಿದ ಲವ್ ಮಾಕ್ಟೇಲ್ ಚಿತ್ರದ ಮೂಲಕ. ಹೌದು, ಕೃಷ್ಣ ಲವ್ ಮಾಕ್ಟೇಲ್ ಮೂಲಕ ನಿರ್ದೇಶನ ಮಾಡಿ ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಗೆಲುವನ್ನು ಕಂಡಿದ್ದರು.

7. ಎಪಿ ಅರ್ಜುನ್: ನಿರ್ದೇಶಕ ಎಪಿ ಅರ್ಜುನ್ ಸಹ ಮೊದಲ ನಿರ್ದೇಶನದಲ್ಲಿಯೇ ಬ್ಲಾಕ್‌ಬಸ್ಟರ್ ಬಾರಿಸಿದ ನಿರ್ದೇಶನ. ಲೂಸ್ ಮಾದ ಯೋಗೇಶ್ ನಟಿಸಿದ್ದ ಅಂಬಾರಿ ಚಿತ್ರ ಭರ್ಜರಿ ಯಶಸ್ಸನ್ನು ಸಾಧಿಸಿತ್ತು.

8. ಕಿರಣ್ ರಾಜ್: ಕಳೆದ ವರ್ಷ ಬಿಡುಗಡೆಗೊಂಡ ಚಾರ್ಲಿ 777 ಚಿತ್ರದ ಮೂಲಕ ಕಿರಣ್ ರಾಜ್ ಬ್ಲಾಕ್‌ಬಸ್ಟರ್ ನೀಡಿದ್ದರು. ಮೊದಲ ಚಿತ್ರದಲ್ಲಿಯೇ ನೂರು ಕೋಟಿ ಕ್ಲಬ್ ಸೇರಿದ ಕಿರಣ್ ರಾಜ್ ಕನ್ನಡ ಸಿನಿ ರಸಿಕರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ.

9. ಸಿಂಪಲ್ ಸುನಿ: ನಿರ್ದೇಶಕ ಸಿಂಪಲ್ ಸುನಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಎಂಬ ಸಿನಿಮಾ ಮಾಡಿ ಸಂಚಲನ ಮೂಡಿಸಿದ್ದರು. ಹೊಸ ಶೈಲಿಯಲ್ಲಿ ಕಥೆ ಹೇಳಿದ್ದ ಸುನಿ ಜಯಭೇರಿ ಬಾರಿಸಿದ್ದರು. ಇದು ಸಿಂಪಲ್ ಸುನಿ ನಿರ್ದೇಶಿಸಿದ್ದ ಮೊದಲ ಸಿನಿಮಾ ಕೂಡ ಹೌದು.

10. ನರ್ತನ್: ಉಗ್ರಂ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಜತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನರ್ತನ್ ಮಫ್ತಿ ಎಂಬ ಸಿನಿಮಾ ನಿರ್ದೇಶಿಸಿ ಮೊದಲ ಪ್ರಯತ್ನದಲ್ಲಿಯೇ ಗೆಲುವು ಕಂಡಿದ್ದರು. ಈ ಚಿತ್ರದ ನಂತರ ನರ್ತನ್‌ಗೆ ಪರಭಾಷೆಯ ನಿರ್ಮಾಪಕರಿಂದಲೂ ಸಾಕಷ್ಟು ಆಫರ್‌ಗಳು ಹರಿದುಬಂದಿದ್ದವು.

More from Filmibeat

English summary
List of 10 kannada directors who have gave blockbuster on debut film. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X