ಬೆಂಗಳೂರಿನಲ್ಲಿ ಶೂಟಿಂಗ್ ಆಗಿರುವ 8 ಫೇಮಸ್ ಪರಭಾಷೆ ಚಿತ್ರಗಳು

Recommended Video

ಬೆಂಗಳೂರಲ್ಲಿ ಚಿತ್ರೀಕರಣ ಆಗಿರುವ ಸಿನಿಮಾಗಳು ಸೂಪರ್ ಹಿಟ್..?

ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದು ಬೆಂಗಳೂರು. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಸಿನಿಮಾ ಚಿತ್ರೀಕರಣಕ್ಕೆ ಅಚ್ಚು ಮೆಚ್ಚು. ಫೈಟ್ ಇರಬಹುದು, ಡುಯೆಟ್ ಇರಬಹುದು, ರೋಮ್ಯಾನ್ಸ್ ಇರಬಹುದು ಅದ್ಯಾವುದೇ ದೃಶ್ಯ ಇರಲಿ, ಬೆಂಗಳೂರಿನಲ್ಲಿ ಒಂದು ಸೀನ್ ಮಾಡಬೇಕು ಎನ್ನುವ ಚಿತ್ರೋಧ್ಯಮಗಳು ಇದ್ದರು, ಈಗಲೂ ಇದ್ದಾರೆ ಬಹುಶಃ ಮುಂದೆಯೂ ನೋಡಬಹುದು.

ವಿಧಾನ ಸೌಧ ಮತ್ತು ಹೈಕೋರ್ಟ್ ಮತ್ತು ಇವೆರಡರ ನಡುವಿನ ರಸ್ತೆ ಅದೆಷ್ಟೋ ಚಿತ್ರಗಳಲ್ಲಿ ಕಂಡಿರಬಹುದು. ಕಬ್ಬನ್ ಪಾರ್ಕ್, ಲಾಲ್ ಬಾಗ್ ಅದೇಷ್ಟೋ ಲವ್ ಸ್ಟೋರಿ ಚಿತ್ರಗಳಿಗೆ ಮಾತೃಭೂಮಿ ಅಂದ್ರೆ ತಪ್ಪಾಗಲ್ಲ. ಐಟಿಪಿಲ್, ಯುಬಿಸಿಟಿ, ಯುನಿಟಿ ಬಿಲ್ಡಿಂಗ್ ಹೀಗೆ ಬೆಂಗಳೂರಿನ ಪ್ರತಿಷ್ಠತ ಕಟ್ಟಡ, ರಸ್ತೆಯಲ್ಲೆಲ್ಲ ಸಿನಿಮಾ ಮಾಡಿರುವ ಉದಾಹರಣೆಗಳಿವೆ.

ಹೀಗೆ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ಅತ್ಯುತ್ತಮ ಹತ್ತು ಪರಭಾಷೆ ಚಿತ್ರಗಳನ್ನ ಪಟ್ಟಿ ಮಾಡಿದಾಗ, 'ಶೋಲೆ' ಚಿತ್ರದಿಂದ '3ಈಡಿಯೆಟ್' ವರೆಗೂ ಕಣ್ಣಮುಂದೆ ಬರುತ್ತೆ. ಹಾಗಿದ್ರೆ, ಯಾವೆಲ್ಲ ಚಿತ್ರಗಳು ಸಿಲಿಕಾನ್ ಸಿಟಿಯಲ್ಲಿ ಶೂಟ್ ಮಾಡಿದೆ, ಎಲ್ಲೆಲ್ಲಾಗಿದೆ? ಮುಂದೆ ಓದಿ....

'3-ಈಡಿಯೆಟ್' ಸಿನಿಮಾ

'3-ಈಡಿಯೆಟ್' ಸಿನಿಮಾ

ಅಮೀರ್ ಖಾನ್, ಮಾಧವನ್, ಶರ್ಮಾನ್ ಜೋಶಿ ಅಭಿನಯಿಸಿದ್ದ 3ಈಡಿಯೆಟ್ಸ್ ಸಿನಿಮಾದ ಕಾಲೇಜ್ ದೃಶ್ಯಗಳನ್ನ ಐಐಎಂಬಿ ಕ್ಯಾಂಪಸ್ ನಲ್ಲಿ ಶೂಟ್ ಮಾಡಲಾಗಿದೆ. (Indian Institute of Management Bangalore) ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಆವರಣದಲ್ಲಿ ಬಹುತೇಕ ಚಿತ್ರಿಕರಣ ಆಗಿದೆ ಎಂಬುದು ವಿಶೇಷ.

ರೌಡಿ ರಾಥೋರ್

ರೌಡಿ ರಾಥೋರ್

ಅಕ್ಷಯ್ ಕುಮಾರ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ 'ರೌಡಿ ರಾಥೋರ್' ಸಿನಿಮಾ ಕೂಡ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಶೂಟ್ ಮಾಡಿರುವ ಈ ಸಿನಿಮಾದ ಒಂದು ಹಾಡಿನಲ್ಲಿ ಬೆಂಗಳೂರಿನ ಅರಮನೆ ಕಾಣುತ್ತೆ. ವಿಶ್ವಖ್ಯಾತ ಅರಮನೆ ಎದುರುಗಡೆ ಸಾಂಗ್ ಶೂಟ್ ಮಾಡಿದ್ದಾರೆ.

ಗಜಿನಿ ಅಟ್ ಬೆಂಗಳೂರು

ಗಜಿನಿ ಅಟ್ ಬೆಂಗಳೂರು

ಅಮೀರ್ ಖಾನ್ ಅಭಿನಯಿಸಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಗಜಿನಿ. ಈ ಚಿತ್ರದಲ್ಲಿ ಅಮೀರ್ ಖಾನ್ ದೊಡ್ಡ ಉದ್ಯಮಿ ಪಾತ್ರ ಮಾಡಿದ್ದಾರೆ. ಈ ದೃಶ್ಯಗಳನ್ನೆಲ್ಲಾ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯಿರುವ ಐಟಿಪಿಎಲ್ ನಲ್ಲಿ ಶೂಟ್ ಮಾಡಲಾಗಿದೆಯಂತೆ.

ಬೆಂಗಳೂರು ಡೇಸ್

ಬೆಂಗಳೂರು ಡೇಸ್

ಈ ಚಿತ್ರದ ಹೆಸರಲ್ಲೇ ಬೆಂಗಳೂರು ಇರೋದ್ರಿಂದ ಸಿನಿಮಾ ಶೂಟಿಂಗ್ ಇಲ್ಲಿ ಆಗಿರಲೇಬೇಕು. ದುಲ್ಕಾರ್ ಸಲ್ಮಾನ್, ನಿವೀನ್ ಪೌಲೆ,ಅಂಜಲಿ ಮೆನನ್ ನಟಿಸಿದ್ದ ಈ ಚಿತ್ರ ಎಂಜಿ ರಸ್ತೆ, ಸ್ಯಾಂಕಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವು ಈ ಸಿನಿಮಾದ ಚಿತ್ರೀಕರಣ ಆಗಿದೆ.

ಪುಷ್ಪಕ ವಿಮಾನ

ಪುಷ್ಪಕ ವಿಮಾನ

1987ರಲ್ಲಿ ಬಿಡುಗಡೆಯಾಗಿದ್ದ ಪುಷ್ಪಕ ವಿಮಾನ ಸಿನಿಮಾ 35 ವಾರ ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿದೆ. ಇದು ಮೂಕಿ ಚಿತ್ರ ಆಗಿದ್ದು ವಿಶೇಷವಾಗಿತ್ತು. ಕಮಲ್ ಹಾಸನ್, ಅಮಲಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬೆಂಗಳೂರಿನ ಐಟಿಸಿ ವಿಂಡ್ಸರ್ ಹೋಟೆಲ್ ನಲ್ಲಿ ಶೂಟಿಂಗ್ ಮಾಡಲಾಗಿತ್ತು.

ಸೂಪರ್ ಹಿಟ್ ಶೋಲೆ

ಸೂಪರ್ ಹಿಟ್ ಶೋಲೆ

ಬಾಲಿವುಡ್ ಇಂಡಸ್ಟ್ರಿಯ ಸೂಪರ್ ಹಿಟ್ ಸಿನಿಮಾ ಶೋಲೆ ರಾಮನಗರದಲ್ಲಿ ಚಿತ್ರೀಕರಣ ಮಾಡಿದೆ. ರಾಮದೇವರಬೆಟ್ಟದಲ್ಲಿ ಸಿನಿಮಾದ ಬಹುಮುಖ್ಯ ಭಾಗದ ದೃಶ್ಯಗಳನ್ನ ಶೂಟ್ ಮಾಡಲಾಗಿತ್ತು. ಈಗಲೂ ರಾಮದೇವರಬೆಟ್ಟವನ್ನ ಶೋಲೆಬೆಟ್ಟ ಎಂದು ಕೂಡ ಕರೆಯುತ್ತಾರೆ. ಅಮಿತಾಭ್-ಧರ್ಮೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಎ ಪ್ಯಾಸೆಜ್ ಟು ಇಂಡಿಯಾ

ಎ ಪ್ಯಾಸೆಜ್ ಟು ಇಂಡಿಯಾ

ಬ್ರಿಟಿಷ್ ಸಿನಿಮಾ 'ಎ ಪ್ಯಾಸೆಜ್ ಟು ಇಂಡಿಯಾ' ಬೆಂಗಳೂರಿಗೆ ಹತ್ತಿರವಾಗಿರುವ ಸಾವನದುರ್ಗ ಬೆಟ್ಟದಲ್ಲಿ ಚಿತ್ರೀಕರಣ ಆಗಿದೆ. ಜೊತೆಗೆ ರಾಮನಗರದಲ್ಲಿರುವ ರಾಮ ದೇವರಬೆಟ್ಟದಲ್ಲೂ ಶೂಟ್ ಆಗಿದೆ.

ಬೆಂಗಳೂರಲ್ಲಿ 'ಕೂಲಿ'

ಬೆಂಗಳೂರಲ್ಲಿ 'ಕೂಲಿ'

ಅಮಿತಾಭ್ ಬಚ್ಚನ್, ರಿಷಿ ಕಪೂರ್ ನಟನೆಯ ಕೂಲಿ ಸಿನಿಮಾದ ಹಾಡೊಂದು ಬೆಂಗಳೂರಿನಲ್ಲಿ ಚಿತ್ರೀಕರಣ ಆಗಿದೆ. ಕಬ್ಬನ್ ಪಾರ್ಕ್, ನಂದಿಬೆಟ್ಟ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಶೂಟ್ ಮಾಡಲಾಗಿದೆ.

More from Filmibeat

English summary
Here is the List of 8 famous films shooting in bangalore from hindi, malayalam, tamil industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X