ಚಿತ್ರಸಂತೆ ಅವಾರ್ಡ್: ಬೆಸ್ಟ್ ನಟ ಅಪ್ಪು; ಬೆಸ್ಟ್ ನಟಿ, ಬೆಸ್ಟ್ ಚಿತ್ರ, ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಗೆದ್ದವರಾರು?
ಕನ್ನಡದ ಜನಪ್ರಿಯ ನಿಯತಕಾಲಿಕೆಗಳಲ್ಲಿ ಒಂದಾದ ಚಿತ್ರಸಂತೆ ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾವಿದರು ಹಾಗೂ ಚಿತ್ರಗಳನ್ನು ಗುರುತಿಸಿ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಿ ಪ್ರತಿಭೆಗಳನ್ನು ಬೆಂಬಲಿಸುತ್ತಾ ಬಂದಿದೆ. ಸದ್ಯ ಪುನೀತ್ ರಾಜ್‌ಕುಮಾರ್ ಭಾವಚಿತ್ರವಿರುವ ಪ್ರಶಸ್ತಿಯನ್ನು ವರ್ಷವೊಂದರಲ್ಲಿ ಬಿಡುಗಡೆಗೊಂಡ ಉತ್ತಮ ಚಿತ್ರಗಳಿಗೆ ಹಾಗೂ ಅವುಗಳ ಕಲಾವಿದರಿಗೆ ವಿವಿಧ ಕೆಟಗರಿ ಅಡಿಯಲ್ಲಿ ನೀಡಲಾಗುತ್ತಿದೆ.
ಅದರಂತೆ ಈ ವರ್ಷವೂ ಸಹ ಕಳೆದ ವರ್ಷ ಬಿಡುಗಡೆಗೊಂಡ ಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಕಾರ್ಯಕ್ರಮವು ಮಾರ್ಚ್ 24ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದಿದೆ. 2022ರಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ, ಕೆಜಿಎಫ್ 2, ಗಂಧದ ಗುಡಿ, ಜೇಮ್ಸ್, ಲವ್ 360, ವೇದ ಸೇರಿದಂತೆ ಹಲವಾರು ಚಿತ್ರಗಳನ್ನು ಪರಿಗಣಿಸಿ ಈ ಬಾರಿ ಪ್ರಶಸ್ತಿ ನೀಡಲಾಗಿದೆ.

ಇನ್ನು ಜೇಮ್ಸ್ ಚಿತ್ರದ ನಟನೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರಸಂತೆ 2023 ಬೆಸ್ಟ್ ಆಕ್ಟರ್ ಅವಾರ್ಡ್ ಅನ್ನು ಪಡೆದುಕೊಂಡಿದ್ದರೆ, ಧೀರೆನ್ ರಾಮ್‌ಕುಮಾರ್ ಶಿವ 143 ಚಿತ್ರದ ನಟನೆಗಾಗಿ ಭರವಸೆಯ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಗಿದ್ದರೆ ಈ ಬಾರಿಯ ಚಿತ್ರಸಂತೆ ಅವಾರ್ಡ್ಸ್‌ನಲ್ಲಿ ಯಾರೆಲ್ಲಾ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂಬ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ..
ಅತ್ಯುತ್ತಮ ನಟ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ( ಜೇಮ್ಸ್ )
ಅತ್ಯುತ್ತಮ ನಟ ( ಫೇವರಿಟ್ ಕೆಟಗರಿ ): ನಿಹಾಲ್ ( ವಿಜಯಾನಂದ )
ಅತ್ಯುತ್ತಮ ನಟಿ ( ಫೇವರಿಟ್ ಕೆಟಗರಿ ) : ರಚನಾ ಇಂದರ್ ( ಲವ್ 360 )
ಭರವಸೆಯ ನಟ : ಧೀರೆನ್ ರಾಮ್‌ಕುಮಾರ್ ( ಶಿವ 143 )
ಭರವಸೆಯ ನಟ : ಪೃಥ್ವಿ ಅಂಬಾರ್ ( ಶುಗರ್ ಲೆಸ್ )
ಭರವಸೆಯ ನಟಿ : ಹರ್ಷಿಕಾ ಪೂಣಚ್ಚ
ಅತ್ಯುತ್ತಮ ಕ್ರೀಡಾ ಚಿತ್ರ ನಿರ್ದೇಶಕ: ಜಡೇಶ್ ಕೆ ಹಂಪಿ ( ಗುರು ಶಿಷ್ಯರು )
ಮೋಸ್ಟ್ ಸ್ಟೈಲಿಶ್ ಸ್ಟಾರ್ ( ನಟಿ ): ನಿಮಿಕಾ ರತ್ನಾಕರ್ ( ಅಬ್ಬರ )
ಅತ್ಯುತ್ತಮ ಉದಯೋನ್ಮುಖ ನಟಿ : ಯಶ ಶಿವಕುಮಾರ್ ( ಮಾನ್ಸೂನ್ ರಾಗ )
ಸ್ಟೈಲ್ ಐಕಾನ್ ಆಫ್ ಸ್ಯಾಂಡಲ್‌ವುಡ್: ಇಶಾನ್ ( ರೇಮೊ )
ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್ ( ಪೆಟ್ರೊಮ್ಯಾಕ್ಸ್ )
ಸ್ಪೆಷಲ್ ಡೈರೆಕ್ಟರ್ ಆಫ್ ದ ಇಯರ್ : ಅಮೋಘವರ್ಷ ( ಗಂಧದ ಗುಡಿ )
ಚಿತ್ರಸಂತೆ ವಿಶೇಷ ಪ್ರಶಸ್ತಿ : ಅಶ್ವಿನ್ (ಥಗ್ಸ್ ಆರ್ಪ ರಾಮಘಡ )
ಚಿತ್ರಸಂತೆ ವಿಶೇಷ ಪ್ರಶಸ್ತಿ : ಜಿಮ್ ರವಿ ( ಪುರುಷೋತ್ತಮ )
ಅತ್ಯುತ್ತಮ ಪೋಷಕ ನಟ ( ಫೇವರಿಟ್ ಕೆಟಗರಿ ) : ಪ್ರಮೋದ್ ಶೆಟ್ಟಿ ( ಕಾಂತಾರ )
ಅತ್ಯುತ್ತಮ ಗಾಯಕ: ಸಂಜಿತ್ ಹೆಗ್ಡೆ ( ಸಲಾಮ್ ಸೋಲ್ಜರ್ - ಜೇಮ್ಸ್ )
ಅತ್ತುತ್ತಮ ನಿರ್ದೇಶಕ: ರವೀಂದ್ರನಾಥ್ ( ಮಾನ್ಸೂನ್ ರಾಗ )
ಅತ್ಯುತ್ತಮ ಚಿತ್ರ ( ಬಯೋಪಿಕ್ ) : ವಿಜಯಾನಂದ
ಅತ್ಯುತ್ತಮ ಸಂಗೀತ ನಿರ್ದೇಶಕ : ಅನೂಪ್ ಸೀಳಿನ್ ( ಮಾನ್ಸೂನ್ ರಾಗ )
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ : ಶೂನ್ಯ ( ಹೆಡ್ ಬುಷ್ )
ಭರವಸೆಯ ಉದಯೋನ್ಮುಖ ನಿರ್ದೇಶಕ: ಕೆಎಂ ಶಶಿಧರ್ ( ಶುಗರ್ ಲೆಸ್ )
ಅತ್ಯುತ್ತಮ ವಸ್ತ್ರ ವಿನ್ಯಾಸ : ಲಕ್ಷ್ಮಿ ಕೃಷ್ಣ ( ವಿಜಯಾನಂದ )
ಹೊಸ ಪ್ರತಿಭೆಗಳಿಗೆ ವಿಶೇಷ ಪ್ರಶಸ್ತಿ: ಗುರು ಶಿಷ್ಯರು ತಂಡದ ಬಾಲ ನಟರು
ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಶೃತಿ ಅವರಿಗೆ ವಿಶೇಷ ಪ್ರಶಸ್ತಿ
ಬೆಸ್ಟ್ ಪಿಆರ್ಓ: ಹರೀಶ್ ಅರಸು
ಅತ್ಯುತ್ತಮ ಛಾಯಾಗ್ರಾಹಕ: ಸ್ವಾಮಿ ಜೆ ಗೌಡ ( ಜೇಮ್ಸ್ )
ಅತ್ಯುತ್ತಮ ಸಂಗೀತ ನಿರ್ದೇಶನ : ಚರಣ್ ರಾಜ್ ( ಜೇಮ್ಸ್ )
ಅತ್ಯುತ್ತಮ ಸಾಹಿತ್ಯ: ಚೇತನ್ ಕುಮಾರ್ ( ಧಿಕ್ಕಾರ ನಿನಗೆ ದೇವರೇ - ಜೇಮ್ಸ್ )
ಅತ್ಯುತ್ತಮ ಸಾಹಸ : ರಾಮ್ ಲಕ್ಷ್ಮಣ್ ( ಜೇಮ್ಸ್ )
ಅತ್ಯುತ್ತಮ ನಿರ್ದೇಶಕ ( ಫೇವರಿಟ್ ಕೆಟಗರಿ ): ಚೇತನ್ ಕುಮಾರ್ ( ಜೇಮ್ಸ್ )


Click it and Unblock the Notifications











