ಜುಲೈ ತಿಂಗಳಲ್ಲಿ ಕನ್ನಡ ತಾರೆಯರ ಹುಟ್ಟುಹಬ್ಬ : ಯಾರ ಬರ್ತ್ ಡೇ ಯಾವಾಗ?

ಸಾಮಾನ್ಯವಾಗಿ ಪ್ರತಿ ತಿಂಗಳಲ್ಲಿ ಸಾಕಷ್ಟು ಸಿನಿಮಾ ತಾರೆಯರ ಹುಟ್ಟುಹಬ್ಬ ಇರುತ್ತದೆ. ಈ ತಿಂಗಳಿನಲ್ಲಿ ಯಾವ ಸ್ಟಾರ್ ಬರ್ತ್ ಡೇ ಯಾವಾಗ ಇದೆ ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ.

ಜುಲೈ ತಿಂಗಳಲ್ಲಿನಲ್ಲಿಯೂ ಕನ್ನಡ ಚಿತ್ರರಂಗದ ಹತ್ತಾರು ಗಣ್ಯರ ಬರ್ತ್ ಡೇ ಇದೆ. ಫಿಲ್ಮಿಬೀಟ್ ಕನ್ನಡದ ಈ ಲೇಖನ ಮೂಲಕ ಅವರ ಹುಟ್ಟುಹಬ್ಬದ ಪಟ್ಟಿ ಮಾಡಲಾಗಿದೆ.

ನಟ ಶಿವರಾಜ್ ಕುಮಾರ್, ಗಣೇಶ್, ಲೂಸ್ ಮಾದ ಯೋಗಿ, ಕೋಮಲ್, ಸಾಯಿ ಕುಮಾರ್, ಸಂಚಾರಿ ವಿಜಯ್ ಗಾಯಕಿ ಚಿತ್ರ, ಗಾಯಕ ಸೋನು ನಿಗಮ್ ಹೀಗೆ ಅನೇಕ ತಾರೆಯರು ಈ ತಿಂಗಳಿನಲ್ಲಿ ಜನಿಸಿದ್ದಾರೆ.

ಅಂದಹಾಗೆ, ಜುಲೈ ತಿಂಗಳಿನಲ್ಲಿ ಜನಿಸಿದ ತಾರೆಯರ ಹುಟ್ಟುಹಬ್ಬದ ಪಟ್ಟಿ ಹೀಗಿದೆ...

ಮೊದಲ ನಾಲ್ಕು ದಿನಕ್ಕೆ ನಾಲ್ಕು ಹುಟ್ಟುಹಬ್ಬ

ಮೊದಲ ನಾಲ್ಕು ದಿನಕ್ಕೆ ನಾಲ್ಕು ಹುಟ್ಟುಹಬ್ಬ

ಜುಲೈ ತಿಂಗಳು ಶುರು ಆಗುವುದೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದಿಂದ. ಗಣೇಶ್ ಜನ್ಮದಿನ ಜುಲೈ 2 ರಂದು. ಹಿರಿಯ ನಿರ್ದೇಶಕ ಭಗವಾನ್ ಹುಟ್ಟುಹಬ್ಬ 3ಕ್ಕೆ. ಪ್ರಜ್ವಲ್ ದೇವರಾಜ್ ಹಾಗೂ ಹಾಸ್ಯ ನಟ ಕೋಮಲ್ ಇಬ್ಬರ ಬರ್ತ್ ಡೇ ಕೂಡ ಜುಲೈ 4 ರಂದು ಇದೆ.

ಒಂದೇ ದಿನ ಯೋಗಿ, ನಿಖಿತಾ ಬರ್ತ್ ಡೇ

ಒಂದೇ ದಿನ ಯೋಗಿ, ನಿಖಿತಾ ಬರ್ತ್ ಡೇ

ನಟ ಲೂಸ್ ಮಾದ ಯೋಗಿ ಹಾಗೂ ನಟಿ ನಿಖಿತಾ ಇಬ್ಬರ ಬರ್ತ್ ಡೇ ಒಂದೇ ದಿನ ಇದೆ. ಜುಲೈ 6 ರಂದು ಇಬ್ಬರು ಹುಟ್ಟಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಜುಲೈ 7 ರಂದು ಹಾಗೂ ಶ್ರೀನಗರ ಕಿಟ್ಟಿ ಜುಲೈ 8 ರಂದು ತಮ್ಮ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದಾರೆ.

12ಕ್ಕೆ ಶಿವಣ್ಣ ಹಾಗೂ 14ಕ್ಕೆ ಗೀತಾ ಹುಟ್ಟುಹಬ್ಬ

12ಕ್ಕೆ ಶಿವಣ್ಣ ಹಾಗೂ 14ಕ್ಕೆ ಗೀತಾ ಹುಟ್ಟುಹಬ್ಬ

ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬ ಇದೆ. ಅದರ ಜೊತೆಗೆ 14ಕ್ಕೆ ಬಹುಭಾಷ ನಟಿ ಗೀತಾ ಕೂಡ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ ಕುಮಾರ್ ಜೋಡಿಯಾಗಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಸಂಚಾರಿ ವಿಜಯ್, ಸಾಯಿ ಕುಮಾರ್, ಚಿತ್ರ ಹುಟ್ಟುಹಬ್ಬ

ಸಂಚಾರಿ ವಿಜಯ್, ಸಾಯಿ ಕುಮಾರ್, ಚಿತ್ರ ಹುಟ್ಟುಹಬ್ಬ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ ಇದೇ ತಿಂಗಳು ಇದೆ. ಜುಲೈ 17 ಸಂಚಾರಿ ವಿಜಯ್ ಬರ್ತ್ ಡೇ. ಇದರ ಜೊತೆಗೆ ಭಾರತ ಚಿತ್ರರಂಗದ ಜನಪ್ರಿಯ ಗಾಯಕಿ ಚಿತ್ರ ಜುಲೈ 27 ರಂದು ಹಾಗೂ ನಟ ಸಾಯಿ ಕುಮಾರ್ ಕೂಡ ಅದೇ ದಿನದಂದು ಜನಿಸಿದ್ದಾರೆ.

ಸಪ್ಟೆಂಬರ್ 30ಕ್ಕೆ ಸೋನು ನಿಗಮ್, ಅಭಿಜಿತ್ ಜನ್ಮದಿನ

ಸಪ್ಟೆಂಬರ್ 30ಕ್ಕೆ ಸೋನು ನಿಗಮ್, ಅಭಿಜಿತ್ ಜನ್ಮದಿನ

ಗಾಯಕ ಸೋನು ನಿಗಮ್ ಹಾಗೂ ಕನ್ನಡ ನಟ ಅಭಿಜಿತ್ ಹುಟ್ಟಿದ್ದು ಒಂದೇ ದಿನ. ಇಬ್ಬರ ಬರ್ತ್ ಡೇ ಕೂಡ ಜುಲೈ 30ಕ್ಕೆ. ಸೋನು ನಿಗಮ್ ಹಾಡುಗಾರಿಕೆ ಯಲ್ಲಿ ಹೆಸರು ಮಾಡಿದದರೆ, ಅಭಿಜಿತ್ ಕನ್ನಡದ ಜನಪ್ರಿಯ ನಟ. ಇವರಿಬ್ಬರು ಹುಟ್ಟುಹಬ್ಬದ ಮೂಲಕ ಈ ತಿಂಗಳು ಕೊನೆಯಾಗುತ್ತಿದೆ.

More from Filmibeat

English summary
List of celebrities who kannada film industry celebrates birthday on july.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X