»   » ಕನ್ನಡದ ಈ ಮಕ್ಕಳ ಚಿತ್ರಗಳನ್ನು ಮರೆತರೆ ಹೇಗೆ ಹೇಳಿ ?

ಕನ್ನಡದ ಈ ಮಕ್ಕಳ ಚಿತ್ರಗಳನ್ನು ಮರೆತರೆ ಹೇಗೆ ಹೇಳಿ ?

Posted By:
Subscribe to Filmibeat Kannada

''ಮಕ್ಕಳು ದೇವರು, ದೇವರು ಒಂದು ಮಗು'' ಇದು ಮಕ್ಕಳ ಬಗ್ಗೆ ಡಾ.ರಾಜ್ ಕುಮಾರ್ ಹೇಳಿದ ಮಾತು. ಇನ್ನು ಮಕ್ಕಳಿಗೂ ಸಿನಿಮಾಗೂ ಅದೆನೋ ನಂಟು ಇದೆ. ಕನ್ನಡದ ಮಕ್ಕಳ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ.

ಇಂದು ಕನ್ನಡದಲ್ಲಿ ಮಕ್ಕಳ ಸಿನಿಮಾಗಳು ಕಡಿಮೆ ಆಗಿದೆ ಎನ್ನುವ ಕೊರಗು ಒಂದು ಕಡೆ ಆದರೆ, ಈ ಹಿಂದೆ ಬಂದ ಮಕ್ಕಳ ಸಿನಿಮಾಗಳನ್ನು ಇವತ್ತಿಗೂ ಮರೆಯುವುದಕ್ಕೆ ಆಗುವುದಿಲ್ಲ. ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿವ ಶಕ್ತಿ ಅಂತಹ ಚಿತ್ರಗಳಲ್ಲಿ ಇದೆ.

ಅಂದಹಾಗೆ, ಮಕ್ಕಳ ದಿನಾಚರಣೆಯ ವಿಶೇಷವಾಗಿ ಕನ್ನಡದ ಕೆಲ ಮಕ್ಕಳ ಸಿನಿಮಾಗಳು ಮುಂದಿದೆ ಓದಿ...

'ಸಿಂಹದ ಮರಿ ಸೈನ್ಯ'

ಮಕ್ಕಳ ಸಿನಿಮಾ ಅಂತ್ತಿದ್ದ ಹಾಗೆ ಮೊದಲು ನೆನಪಾಗುವ ಸಿನಿಮಾಗಳಲ್ಲಿ 'ಸಿಂಹದ ಮರಿ ಸೈನ್ಯ' ಕೂಡ. 1981ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಅರ್ಜುನ್ ಸರ್ಜಾ ಬಾಲನಟನಾಗಿ ಆ ಸಮಯದಲ್ಲಿಯೇ ಸಿಕ್ಕಾಪಟ್ಟೆ ಆಕ್ಷನ್ ಮಾಡಿದ್ದರು.

'ಪುಟಾಣಿ ಏಜೆಂಟ್ 123'

'ಪುಟಾಣಿ ಏಜೆಂಟ್ 123' ಆ ಕಾಲದಲ್ಲಿ ಬಂದ ಮಕ್ಕಳ ಸಿನಿಮಾಗಳಲ್ಲಿ ಪ್ರಮುಖವಾದುದ್ದು. ಈ ಚಿತ್ರದಲ್ಲಿಯೂ ನಟ ಅರ್ಜುನ್ ಸರ್ಜಾ ನಟಿಸಿದ್ದರು. ಇವರ ಜೊತೆಗೆ ಬೇಬಿ ಇಂದಿರಾ, ಮಾಸ್ಟರ್ ರಾಮಕೃಷ್ಣ ಹೆಗ್ಡೆ ಸೇರಿದಂತೆ ಕೆಲ ಮಕ್ಕಳು ಬಣ್ಣ ಹಚ್ಚಿದ್ದರು.

'ಮಕ್ಕಳ ಸೈನ್ಯ'

'ಮಕ್ಕಳ ಸೈನ್ಯ' ವಿ‍ಷ್ಣುವರ್ಧನ್ ನಟನೆಯ ಚಿತ್ರವಾಗಿತ್ತು. ಮನೆ ತುಂಬ ಮಕ್ಕಳು ಹೊಂದಿದ್ದ ವಿ‍ಷ್ಣುವರ್ಧನ್ ಮತ್ತು ಸುಮಿತ್ರಾ ಜೋಡಿಯ ಪರದಾಟವನ್ನು ಹಾಸ್ಯಮಯವಾಗಿ ಚಿತ್ರದಲ್ಲಿ ತೋರಿಸಲಾಗಿತ್ತು.

'ಮಕ್ಕಳ ರಾಜ್ಯ'

'ಮಕ್ಕಳ ರಾಜ್ಯ' ಸಿನಿಮಾ 1960ರಲ್ಲಿ ತೆರೆಗೆ ಬಂದಿತ್ತು. ಖ್ಯಾತ ನಿರ್ದೇಶಕ ಪಂತಲು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇಂದಿನ ಜನಪ್ರಿಯ ಪೋಷಕ ನಟ ಉಮೇಶ್ ಅವರು ಆಗ ಬಾಲನಟನಾಗಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

'ಕೊಟ್ರೇಶಿ ಕನಸು'

ನಾಗತಿಹಳ್ಳಿ ಚಂದ್ರಶೇಖರ್ ಅವರ ಅತ್ಯುತ್ತಮ ಸಿನಿಮಾಗಳಲ್ಲಿ 'ಕೊಟ್ರೇಶಿ ಕನಸು' ಕೂಡ ಒಂದು. ವಿಜಯ್ ರಾಘವೇಂದ್ರ ನಟನೆಯ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಮತ್ತೊಂದು ಹೆಮ್ಮೆ.

'ಚಿನ್ನಾರಿ ಮುತ್ತ'

'ಚಿನ್ನಾರಿ ಮುತ್ತ' ಚಿತ್ರದಿಂದ ನಟ ವಿಜಯ ರಾಘವೇಂದ್ರ ಅವರಿಗೆ ಇಂದಿಗೂ 'ಚಿನ್ನಾರಿ ಮುತ್ತ' ಎಂಬ ಹೆಸರು ಉಳಿದುಕೊಂಡಿದೆ. ಇನ್ನು ಟಿ.ಎಸ್ ನಾಗಾಭರಣ ನಿರ್ದೇಶನದ ಮಾಡಿದ್ದ ಈ ಚಿತ್ರಕ್ಕೆ 1993-94ನೇ ಸಾಲಿನ 'ರಾಜ್ಯ ಪ್ರಶಸ್ತಿ' ಬಂದಿದೆ.

'ಪ್ರಚಂಡ ಪುಟಾಣಿಗಳು'

'ಪುಟಾಣಿ ಏಜೆಂಟ್ 123' ಚಿತ್ರದ ಯಶಸ್ಸಿನ ಬಳಿಕ ಮತ್ತೆ ಬೇಬಿ ಇಂದಿರಾ, ಮಾಸ್ಟರ್ ರಾಮಕೃಷ್ಣ ಹೆಗ್ಡೆ, ಮಾಸ್ಟರ್ ಬಾನು ಪ್ರಕಾಶ್ 'ಪ್ರಚಂಡ ಪುಟಾಣಿಗಳು' ಸಿನಿಮಾದಲ್ಲಿ ನಟಿಸಿದ್ದರು. ಚಿತ್ರ 'ಪುಟಾಣಿ ಏಜೆಂಟ್ 123' ಚಿತ್ರದ 2 ವರ್ಷಗಳ ನಂತರ 1981ರಲ್ಲಿ ಬಿಡುಗಡೆಯಾಗಿತ್ತು.

'ಬೆಟ್ಟದ ಹೂ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ನಟಿಸಿದ್ದ ಚಿತ್ರಗಳಲ್ಲಿ 'ಬೆಟ್ಟದ ಹೂ' ತುಂಬ ಫೇಮಸ್ ಆಗಿತ್ತು. ಜೊತೆಗೆ ಪವರ್ ಸ್ಟಾರ್ ಈ ಚಿತ್ರದಿಂದ ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

'ಕೇರ್ ಆಫ್ ಪುಟ್ ಬಾತ್'

ಈ ಚಿತ್ರಗಳ ನಂತರ ತುಂಬ ಗ್ಯಾಪ್ ಆದ ಮೇಲೆ ಮತ್ತೆ ಕನ್ನಡಕ್ಕೆ ಮಕ್ಕಳ ಚಿತ್ರ ಅಂತ ಬಂದಿದ್ದು 'ಕೇರ್ ಆಫ್ ಪುಟ್ ಪಾತ್'. ಈ ಚಿತ್ರದ ಮೂಲಕ ಮಾಸ್ಟರ್ ಕಿಶನ್ ಅತಿ ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನಿರ್ದೇಶನ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದರು.

'ಬಾನಾಡಿ'

ಇತ್ತೀಚಿಗೆ ಬಂದ ಮಕ್ಕಳ ಸಿನಿಮಾಗಳಲ್ಲಿ 'ಬಾನಾಡಿ' ಕೂಡ ಒಂದು. ನಾಗರಾಜ್ ಕೊಟ್ಟೆ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣದಿದ್ದರು, ಒಳ್ಳೆಯ ಸಿನಿಮಾ ಅಂತ ಕರೆಸಿಕೊಂಡಿತ್ತು.

'ಎಳೆಯರು ನಾವು ಗೆಳೆಯರು'

'ಎಳೆಯರು ನಾವು ಗೆಳೆಯರು' ಸಿನಿಮಾ ಕೆಲ ತಿಂಗಳ ಹಿಂದೆ ತೆರೆಗೆ ಬಂದಿತ್ತು. 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದ 'ಡ್ರಾಮಾ' ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದರು.

English summary
List of Children oriented movies in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada