For Quick Alerts
  ALLOW NOTIFICATIONS  
  For Daily Alerts

  2017ರಲ್ಲಿ ಎಂಗೇಜ್ ಆದ ಸ್ಟಾರ್ ಜೋಡಿಗಳು

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಈ ವರ್ಷ ವಿಭಿನ್ನ ಚಿತ್ರಗಳು ಹಾಗೂ ಕಮರ್ಷಿಯಲ್ ಸಿನಿಮಾ ಎರಡು ಸಾಕಷ್ಟು ಸದ್ದು ಮಾಡಿದ್ವು. ಅದರಂತೆ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು ಹಾಗೂ ತಂತ್ರಜ್ಞರು ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ಕಲಾವಿರಂತೆಯೇ ಸಿನಿಮಾರಂಗದಲ್ಲಿ ಹಿಟ್ ಸಿನಿಮಾಗಳನ್ನ ನೀಡಿರೋ ನಿರ್ದೇಶಕರು ಕೂಡ ನಿಶ್ಚಿತಾರ್ಥ ಮಾಡಿಕೊಂಡರು.

  ಜನರ ಮನಗೆದ್ದ 2017 ರ ಕನ್ನಡದ ಅತ್ಯುತ್ತಮ ಚಿತ್ರಗಳುಜನರ ಮನಗೆದ್ದ 2017 ರ ಕನ್ನಡದ ಅತ್ಯುತ್ತಮ ಚಿತ್ರಗಳು

  ಇಷ್ಟು ದಿನಗಳ ಕಾಲ ಬರೀ ಗಾಸಿಪ್ ಗಳಿಗೆ ತುತ್ತಾಗಿದ್ದ ಸ್ಟಾರ್ ಜೋಡಿಗಳು ಅಧಿಕೃತವಾಗಿ ಎಂಗೇಜ್ ಆಗುವ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳಿದಿದ್ದಾರೆ. ಹಾಗಾದ್ರೆ ಕನ್ನಡ ಸಿನಿಮಾರಂಗದಲ್ಲಿ ಯಾವೆಲ್ಲಾ ಜೋಡಿಗಳು ಮುಂದಿನವರ್ಷ ದಂಪತಿಗಳಾಗಲಿದ್ದಾರೆ. ಈ ವರ್ಷ ಯಾರು -ಯಾರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡರು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ಕಿರಿಕ್ ಜೋಡಿಯ ನಿಶ್ಚಿತಾರ್ಥ

  ಕಿರಿಕ್ ಜೋಡಿಯ ನಿಶ್ಚಿತಾರ್ಥ

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಜುಲೈ 3 ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ನಾವಿಬ್ಬರು ಸ್ನೇಹಿತರು ಎಂದಿದ್ದ ಜೋಡಿ ಸದ್ದಿಲ್ಲದೆ ಡೇಟ್ ಫಿಕ್ಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. 'ಕಿರಿಕ್ ಪಾರ್ಟಿ' ಚಿತ್ರದ ಯಶಸ್ವಿ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಅವರೇ ಹೇಳಿರುವ ಪ್ರಕಾರ, ಎರಡು ವರ್ಷದ ನಂತರ ಮದುವೆ ಆಗಲು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

  ಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ಕಣ್ರಪ್ಪೋಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ಕಣ್ರಪ್ಪೋ

  ಚಿರು ಜೊತೆಯಲ್ಲಿ ಮೇಘನಾ ನಿಶ್ಚಿತಾರ್ಥ

  ಚಿರು ಜೊತೆಯಲ್ಲಿ ಮೇಘನಾ ನಿಶ್ಚಿತಾರ್ಥ

  ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಅಕ್ಟೋಬರ್ ತಿಂಗಳ 22ಕ್ಕೆ ನಡೆಯಿತು. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಚಿರು ಹಾಗೂ ಮೇಘನಾ ಕುಟುಂಬಸ್ಥರು ಭಾಗಿಯಾಗಿದ್ದರು. ನಟ ಅರ್ಜುನ್ ಸರ್ಜಾ ಅವರ ಪತ್ನಿ ಆಶಾ ರಾಣಿ ಹಾಗೂ ಪುತ್ರಿ ಐಶ್ವರ್ಯ ಅರ್ಜುನ್, ಜೊತೆಗೆ ಚಿರಂಜೀವಿ ಸರ್ಜಾ ಸಹೋದರ ಧ್ರುವ ಸರ್ಜಾ ಹಾಗೂ ಸುಂದರ್ ರಾಜ್ ದಂಪತಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ತೊಡಗಿದ್ದರು. ತಾಂಬೂಲ ಬದಲಾವಣೆ, ಸೀರೆ ನೀಡುವ ಶಾಸ್ತ್ರ ಸೇರಿದಂತೆ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ನಡೆಯಿತು.ಶಾಸ್ತ್ರೋಕ್ತವಾಗಿ ಉಂಗುರ ಬದಲಾಯಿಸಿಕೊಂಡ ಬಳಿಕ ಲೀಲಾ ಪ್ಯಾಲೇಸ್ ನಲ್ಲಿ ಚಿರಂಜೀವಿ ಸರ್ಜಾ-ಮೇಘನಾ ರಾಜ್ 'ರಾಯಲ್' ನಿಶ್ಚಿತಾರ್ಥ ನಡೆಯಿತು. ಅರ್ಥಾತ್ 'ರಾಯಲ್' ಥೀಮ್ ನಲ್ಲಿ ಈ ಸಮಾರಂಭ ನಡೆಯಿತು. ಮುಂದಿನ ವರ್ಷ ಈ ಜೋಡಿ ಹಸಮಣೆ ಏರಲಿದೆ.

  ಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಇಂದು ಸಡಗರ-ಸಂಭ್ರಮಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಇಂದು ಸಡಗರ-ಸಂಭ್ರಮ

  ಬಾಗಲ ಕೊಟೆ ಬೆಡಗಿಯನ್ನ ಮೆಚ್ಚಿದ ಪವನ್ ಒಡೆಯರ್

  ಬಾಗಲ ಕೊಟೆ ಬೆಡಗಿಯನ್ನ ಮೆಚ್ಚಿದ ಪವನ್ ಒಡೆಯರ್

  ಸ್ಟಾರ್ ನಟ ನಟಿಯರ ಜೊತೆಯಲ್ಲಿ ತಂತ್ರಜ್ಞರು ಕೂಡ ಮದುವೆಯಾಗಲು ಅಣಿಯಾಗಿದ್ದಾರೆ. ನಟ ಹಾಗೂ ನಿರ್ದೇಶಕ ಪವನ್ ಒಡೆಯರ್ ರ ನಿಶ್ಚಿತಾರ್ಥ ಡಿಸೆಂಬರ್ 7 ರಂದು ಬಾಗಲಕೋಟೆಯಲ್ಲಿ ನಡೆಯಿತು. ಪವನ್ ಒಡೆಯರ್ ಮನೆಯವರು ಹಾಗೂ ಅಪೇಕ್ಷಾ ಮನೆಯವರ ಸಮ್ಮುಖದಲ್ಲಿ ಸಿಂಪಲ್ ಆಗಿ ಶಾಸ್ತ್ರೋಕ್ತವಾಗಿ ಎಂಗೇಜ್ ಮೆಂಟ್ ಆಯ್ತು. ನಟಿ ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಹುಡುಗಿ. ಅನುಷಾ ಪುರೋಹಿತ್ ಹಾಗೂ ಆನಂದ್ ಪುರೋಹಿತ್ ರ ಮಗಳಾಗಿರುವ ಅಪೇಕ್ಷಾ ಬೆಂಗಳೂರಿನಲ್ಲಿ ವಾಸವಿದ್ದಾರೆ. 'ಕಾಫಿ ತೋಟ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅಪೇಕ್ಷಾ ಪುರೋಹಿತ್ ಅನೇಕ ಧಾರಾವಾಹಿಗಳಲ್ಲೂ ಆಕ್ಟ್ ಮಾಡಿದ್ದಾರೆ. ಈ ಜೋಡಿ ಆಗಸ್ಟ್ ನಲ್ಲಿ ದಂಪತಿಗಳಾಗಲು ನಿರ್ಧರಿಸಿದ್ದಾರೆ.

  ಎಂಗೇಜ್ ಆದ ಪವನ್: ಬಾಗಲಕೋಟೆ ಹುಡುಗಿಯನ್ನ ಮದುವೆ ಆಗುವ ಹಿಂದಿದೆ ಸೀಕ್ರೆಟ್.!ಎಂಗೇಜ್ ಆದ ಪವನ್: ಬಾಗಲಕೋಟೆ ಹುಡುಗಿಯನ್ನ ಮದುವೆ ಆಗುವ ಹಿಂದಿದೆ ಸೀಕ್ರೆಟ್.!

  ಬಳ್ಳಾರಿ ಹುಡುಗಿ ಜೊತೆ ಸಂತೋಷ್ ಆನಂದ್ ರಾಮ್ ನಿಶ್ಚಿತಾರ್ಥ

  ಬಳ್ಳಾರಿ ಹುಡುಗಿ ಜೊತೆ ಸಂತೋಷ್ ಆನಂದ್ ರಾಮ್ ನಿಶ್ಚಿತಾರ್ಥ

  ಸ್ಯಾಂಡಲ್ ವುಡ್ ನ ಯಂಗ್ ಟ್ಯಾಲೆಂಟೆಡ್ ನಿರ್ದೇಶಕರ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿರೋ ಡೈರೆಕ್ಟರ್ 'ಸಂತೋಷ್ ಆನಂದ್ ರಾಮ್' ನವೆಂಬರ್ 26 ರಂದು ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಸಂತೋಷ್ ಬಳ್ಳಾರಿ ಮೂಲದ ಇಂಜಿನಿಯರ್ ಓದಿಕೊಂಡಿರೋ 'ಸುರಭಿ'ಯವರನ್ನ ಮದುವೆಯಾಗಲಿದ್ದಾರೆ .ಬಳ್ಳಾರಿಯಲ್ಲಿ ನಡೆದ ಅದ್ದೂರಿ ಎಂಗೆಂಜ್ ಮೆಂಟ್ ನಲ್ಲಿ ಸಾಕಷ್ಟು ಸೆಲಬ್ರೆಟಿಗಳು ಭಾಗಿಯಾಗಿದ್ದರು. ಸುರಭಿಯವರ ಜೊತೆ ಎಂಗೆಂಜ್ ಮೆಂಟ್ ಮಾಡಿಕೊಂಡಿರೋ ಸಂತೋಷ್ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  'ರಾಜಕುಮಾರ' ನಿರ್ದೇಶಕ ಸಂತೋಷ್ ಗೆ ಒಲಿದು ಬಂತು ಕಂಕಣಭಾಗ್ಯ'ರಾಜಕುಮಾರ' ನಿರ್ದೇಶಕ ಸಂತೋಷ್ ಗೆ ಒಲಿದು ಬಂತು ಕಂಕಣಭಾಗ್ಯ

  ಕರ್ನಾಟಕದ ಸೊಸೆ ಆಗಲಿರೋ ಭಾವನಾ

  ಕರ್ನಾಟಕದ ಸೊಸೆ ಆಗಲಿರೋ ಭಾವನಾ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಜಾಕಿ', ಕಿಚ್ಚ ಸುದೀಪ್ ಜೊತೆ 'ವಿಷ್ಣುವರ್ಧನ', ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ರೋಮಿಯೋ' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ 'ನಾಯಕಿ' ಆಗಿ ಮಿಂಚಿದ್ದ ನಟಿ ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. 2017ರಲ್ಲಿ ಭಾವನಾರ ಅಭಿಮಾನಿಗಳಿಗೆ ಇದು ಶಾಕಿಂಗ್ ವಿಚಾರ ಆಗಿತ್ತು. . ನಟಿ ಭಾವನಾ ಹಾಗೂ ಕನ್ನಡ ಚಿತ್ರ ನಿರ್ಮಾಪಕ ನವೀನ್ ರವರ ನಿಶ್ಚಿತಾರ್ಥ ಸರಳವಾಗಿ ಕೇರಳದ ಕೊಚ್ಚಿಯಲ್ಲಿ ನೆರವೇರಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಜೊತೆಯಾಗಿ ನಟಿಸಿದ 'ರೋಮಿಯೋ' ಚಿತ್ರಕ್ಕೆ ಇದೇ ನವೀನ್ ಬಂಡವಾಳ ಹಾಕಿದ್ದರು. ಈ ಜೋಡಿ ಮುಂದಿನ ವರ್ಷದಲ್ಲಿ ಮದುವೆಯಾಗಲಿದ್ದಾರೆ.

  'ಜಾಕಿ' ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಹಿಂದಿನ ಗುಟ್ಟು ರಟ್ಟು!'ಜಾಕಿ' ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಹಿಂದಿನ ಗುಟ್ಟು ರಟ್ಟು!

  English summary
  Sandalwood Stars and Director of Kannada Cinema by Engagement in 2017

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X