2023ರ ಮೊದಲ 3 ತಿಂಗಳುಗಳಲ್ಲಿ 100 ಕೋಟಿ ಕ್ಲಬ್ ಸೇರಿದ್ದು ಈ 8 ಚಿತ್ರಗಳು ಮಾತ್ರ!

By ಫಿಲ್ಮಿಬೀಟ್ ಡೆಸ್ಕ್
List of films entered 100 crore club in the first 3 months of 2023

ಕಳೆದ ವರ್ಷ ಬರೋಬ್ಬರಿ 30 ನೂರ ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದ ಭಾರತ ಸಿನಿಮಾರಂಗ ಈ ವರ್ಷದ ಮೊದಲ ಮೂರು ತಿಂಗಳನ್ನು ಪೂರೈಸಿದೆ. ಇನ್ನು ಕಳೆದ ವರ್ಷದ ಬಾಕ್ಸ್ ಆಫೀಸ್ ಸಕ್ಸಸ್ ಓಟವನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಂಡ ಚಿತ್ರಗಳು ಮುಂದುವರಿಸಿದವು.

ಹೌದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಕಾಲಿಟ್ಟ ತೆಲುಗು ಹಾಗೂ ತಮಿಳಿನ ನಾಲ್ಕು ಸ್ಟಾರ್ ನಟರ ಚಿತ್ರಗಳೂ ಸಹ ನೂರು ಕೋಟಿಗೂ ಅಧಿಕ ಗಳಿಸಿದವು. ಈ ನಾಲ್ಕೂ ಚಿತ್ರಗಳೂ ಸಹ ಸಿನಿ ರಸಿಕರಿಂದ ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ ಎಂಬ ಪ್ರತಿಕ್ರಿಯೆಗಳನ್ನು ಪಡೆದುಕೊಂಡರೂ ಸಹ ಈ ಮೈಲಿಗಲ್ಲನ್ನು ತಲುಪಿದವು.

ಈ ನಾಲ್ಕು ಸಿನಿಮಾಗಳ ಬಳಿಕ ತೆರೆಕಂಡ ಚಿತ್ರಗಳ ಪೈಕಿ ಇನ್ನೂ ನಾಲ್ಕು ಸಿನಿಮಾಗಳು ನೂರು ಕೋಟಿಯ ಮೈಲಿಗಲ್ಲನ್ನು ಮುಟ್ಟುವಲ್ಲಿ ಯಶಸ್ವಿಯಾಗಿವೆ. ಹಾಗಿದ್ದರೆ ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ ನೂರು ಕೋಟಿ ಕ್ಲಬ್ ಸೇರಿರುವ ಚಿತ್ರಗಳು ಯಾವುವು ಎಂಬ ಪಟ್ಟಿ ಹೆಚ್ಚು ಕಲೆಕ್ಷನ್ ಮಾಡಿದ ಕ್ರಮಾಂಕದಲ್ಲಿ ಈ‌ ಕೆಳಕಂಡಂತಿದೆ.

1. ಪಠಾಣ್: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪಠಾಣ್ ಚಿತ್ರ ಸಹ ಜನವರಿಯಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿದೆ. ಈ ಚಿತ್ರ 65 ದಿನಗಳಲ್ಲಿ 1050 ಕೋಟಿ ಗಳಿಸಿದೆ. ಈ ಮೂಲಕ ಈ ವರ್ಷ 500 ಹಾಗೂ 1000 ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಹಾಗೂ ಏಕೈಕ ಚಿತ್ರ ಎನಿಸಿಕೊಂಡಿದೆ.

2. ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಕೀರ್ತಿ ದಳಪತಿ ವಿಜಯ್ ಹಾಗೂ ವಂಶಿ ಪೈಡಿಪಲ್ಲಿ ಕಾಂಬೊದ ವಾರಿಸು ಚಿತ್ರಕ್ಕೆ ಸೇರುತ್ತದೆ. ಸಂಕ್ರಾಂತಿ ಪ್ರಯುಕ್ತ ಜನವರಿ 11ರಂದು ತೆರೆಗೆ ಬಂದಿದ್ದ ಈ ಚಿತ್ರ 310 ಕೋಟಿ ಗಳಿಸಿದೆ.

3. ವಾರಿಸು ಚಿತ್ರ ಬಿಡುಗಡೆಯಾದ ದಿನವೇ ತಮಿಳಿನ‌ ಮತ್ತೋರ್ವ ಸ್ಟಾರ್ ನಟ ಅಜಿತ್ ಕುಮಾರ್ ನಟನೆಯ ತುನಿವು ಸಹ ತೆರೆಗೆ ಬಂದಿತ್ತು.‌ ಈ ಚಿತ್ರ ಸಹ ಒಳ್ಳೆಯ ಕಲೆಕ್ಷನ್ ‌ಮಾಡಿದ್ದು ಒಟ್ಟಾರೆ 250 ಕೋಟಿ ಬಾಚಿದೆ.

4. ಚಿರಂಜೀವಿ ಹಾಗೂ ರವಿತೇಜಾ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾದಾಗ ಬೃಹತ್ ಓಪನಿಂಗ್ ಪಡೆದುಕೊಂಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಕೋಟಿ ಕೋಟಿ ಬಾಚಿದ ಈ ಚಿತ್ರ ಒಟ್ಟಾರೆ 232 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

5. ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಹಾಗೂ ಡಿಂಪಲ್ ಕಪಾಡಿಯಾ ನಟನೆಯ ತೂ ಜೂತಿ ಮೇನ್ ಮಕ್ಕರ್ ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ ಈಗಾಗಲೇ 201 ಕೋಟಿ ಗಳಿಸಿದೆ.

6. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾದ ಮತ್ತೊಂದು ತೆಲುಗು ಚಿತ್ರ ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ನಟನೆಯ ವೀರ ಸಿಂಹ ರೆಡ್ಡಿ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ 134 ಕೋಟಿ ಕಲೆಕ್ಷನ್ ಮಾಡಿದೆ‌.

7. ಧನುಷ್ ಹಾಗೂ ಸಂಯುಕ್ತ ಮೆನನ್ ನಟನೆಯ, ವೆಂಕಿ ಅಟ್ಲುರಿ ನಿರ್ದೇಶನದ ವಾತಿ ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ತೆಲುಗಿನಲ್ಲಿ ಸಾರ್ ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಎರಡೂ ಭಾಷೆಗಳೂ ಸೇರಿ 100 ಕೋಟಿ ಕ್ಲಬ್ ಸೇರಿದೆ.

8. ಇನ್ನು ಕನ್ನಡದ ಕಬ್ಜ ಚಿತ್ರತಂಡ ಸಹ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನೂರು ಕೋಟಿಯಾಗಿದೆ ಎಂಬುದನ್ನು ಹೇಳಿಕೊಂಡಿತ್ತು.

More from Filmibeat

English summary
List of films entered 100 crore club in the first 3 months of 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X