For Quick Alerts
  ALLOW NOTIFICATIONS  
  For Daily Alerts

  'ಅವತಾರ್ 2' ಎದುರು ತೆರೆ ಕಾಣುವ ಚಿತ್ರಗಳಿವು; ದೊಡ್ಡ ಅಲೆಯ ಹೊಡೆತ ತಡೆದುಕೊಳ್ಳುತ್ತವೆಯೇ?

  |

  ವಿಶ್ವ ಚಿತ್ರರಂಗವನ್ನು ತನ್ನ ಕಲೆಕ್ಷನ್ ಮೂಲಕ ಅಲುಗಾಡಿಸಿದ್ದ ಅವತಾರ್ ಚಿತ್ರದ ಸೀಕ್ವೆಲ್ ಅವತಾರ್ ದ ವೇ ಆಫ್ ವಾಟರ್/ ಅವತಾರ್ 2 ನಾಳೆ ( ಡಿಸೆಂಬರ್ 16 ) ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ಸುಮಾರು ಎರಡು ಸಾವಿರ ಕೋಟಿ ವೆಚ್ಚದಲ್ಲಿ ಈ ಚಿತ್ರ ತಯಾರಾಗಿದ್ದು, ಬಾಕ್ಸ್ ಆಫೀಸ್ ಬೇಟೆಗೆ ತಯಾರಾಗಿದೆ. ಇನ್ನು 2009ರಲ್ಲಿ ಬಿಡುಗಡೆಗೊಂಡು ಅವತಾರ್ ಮಾಡಿದ್ದ ಗಳಿಕೆಯನ್ನು ಇದುವರೆಗೂ ಯಾವ ಚಿತ್ರಕ್ಕೂ ಮುರಿಯಲಾಗಿಲ್ಲ.

  ಅಂತಹ ದೊಡ್ಡ ಕಲೆಕ್ಷನ್ ಮಾಡಿ ವಿಶ್ವ ಚಿತ್ರರಂಗದ ಬಾಸ್ ಎನಿಸಿಕೊಂಡಿರುವ ಅವತಾರ್ ಚಿತ್ರತಂಡದ ಮತ್ತೊಂದು ಸಿನಿಮಾ ಈಗಿನ ಟಿಕೆಟ್ ದರದಲ್ಲಿ ಮತ್ತೆಷ್ಟು ಗಳಿಸಬಹುದು ಎಂಬ ಕುತೂಹಲ ಹೆಚ್ಚಾಗಿದ್ದು, ಮೊದಲಿನ ಭಾಗದ ಹಾಗೆ ಈ ಚಿತ್ರವೂ ಅಬ್ಬರಿಸುವುದು ಖಚಿತ ಎನ್ನಲಾಗುತ್ತಿದೆ. ಇನ್ನು ತಿಂಗಳಿಗೂ ಮೊದಲೇ ಚಿತ್ರದ ಮುಂಗಡ ಬುಕಿಂಗ್ ಅನ್ನು ತೆರೆಯಲಾಗಿದ್ದು, ಸಿನಿ ರಸಿಕರು ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿಸಿದ್ದರು.

  ಇನ್ನು ಅವತಾರ್ 2 ರೀತಿಯ ದೊಡ್ಡ ಚಿತ್ರ ಬಿಡುಗಡೆಯಾಗುವ ದಿನ ತೆರೆಗೆ ಬರಲು ಯಾವ ಚಿತ್ರವೂ ಇಚ್ಛಿಸುವುದಿಲ್ಲ ಎಂದೇ ಊಹಿಸಲಾಗಿತ್ತು. ಆದರೂ ಸಹ ದೇಶದ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ಈ ದಿನದಂದು ಬಿಡುಗಡೆಯಾಗಲು ತಯಾರಿವೆ. ಈ ವಿಷಯವನ್ನು ಕಂಡ ಸಿನಿ ರಸಿಕರು ಅವತಾರ್ ದ ವೇ ಆಫ್ ವಾಟರ್ ಅತಿಹೆಚ್ಚು ಕ್ರೇಜ್ ಹೊಂದಿದ್ದು, ಇಂತಹ ದಿನ ಬಿಡುಗಡೆಯಾಗುವ ಚಿತ್ರಗಳನ್ನು ಜನರು ವೀಕ್ಷಿಸಲು ಇಚ್ಛಿಸುವುದಿಲ್ಲ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಅವತಾರ್ ಎಂಬ ದೊಡ್ಡ ಅಲೆಯ ಹೊಡೆತವನ್ನು ಅಂದು ಬಿಡುಗಡೆಯಾಗುವ ಇತರೆ ಚಿತ್ರಗಳು ತಡೆದುಕೊಳ್ಳಲಿವೆಯಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

  ಅವತಾರ್ ಜತೆ ಬಿಡುಗಡೆಯಾಗಲಿರುವ ಕನ್ನಡ ಚಿತ್ರಗಳು

  ಅವತಾರ್ ಜತೆ ಬಿಡುಗಡೆಯಾಗಲಿರುವ ಕನ್ನಡ ಚಿತ್ರಗಳು

  ಬೆಂಗಳೂರಿನಲ್ಲಿ ಅವತಾರ್ ದ ವೇ ಆಫ್ ವಾಟರ್ ಆರ್ಭಟ ಜೋರಾಗಿದೆ. ಮೊದಲ ದಿನವೇ ಸುಮಾರು 850ಕ್ಕೂ ಹೆಚ್ಚು ಪ್ರದರ್ಶನಗಳನ್ನು ಬೆಂಗಳೂರಿ ನಗರವೊಂದರಲ್ಲಿಯೇ ಅವತಾರ್ ದ ವೇ ಆಫ್ ವಾಟರ್ ಕಾಣಲಿದ್ದು, ಇದರ ಜತೆ ಯಾವ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ಮಾಹಿತಿಯೇ ಹಲವು ಸಿನಿ ರಸಿಕರಿಗೆ ಇಲ್ಲ. ಅವತಾರ್ 2 ಜತೆ ಬಿಡುಗಡೆಯಾಗಲಿರುವ ಇತರೆ ಕನ್ನಡ ಚಿತ್ರಗಳು ಯಾವುವು ಎಂದರೆ: ಸಾಯಿಕುಮಾರ್ ನಟನೆಯ ರಾಕ್ಷಸರು, ಯುವ ಕಲಾವಿದರ ಟೆಂಪರ್, ಮೊದಲ ಮಿಡಿತ, ಯು ಟರ್ನ್ 2, ಶಂಭೋ ಶಿವ ಶಂಕರ ಹಾಗೂ ವಿನಯ್ ರಾಜ್‌ಕುಮಾರ್ ಅಭಿನಯದ ಟೆನ್.

  ತೆಲುಗು ಚಿತ್ರಗಳು

  ತೆಲುಗು ಚಿತ್ರಗಳು

  ಅವತಾರ್ 2 ಎದುರಿಗೆ ಬಿಡುಗಡೆಯಾಗಲಿರುವ ತೆಲುಗು ಚಿತ್ರಗಳು ಯಾವುವೆಂದರೆ: ಪಸಿವಾಡಿ ಪ್ರಾಣಂ, ಕನ್ನಡದ ಕಿಸ್ ಚಿತ್ರದ ತೆಲುಗು ಡಬಿಂಗ್ 'ಐ ಲವ್ ಯು ಈಡಿಯಟ್' ( ಡಿಸೆಂಬರ್ 17 ), ಆಕ್ರೋಶಂ ಹಾಗೂ ಶಾಸನಸಭಾ.

  ತಮಿಳು ಹಾಗೂ ಮಲಯಾಳಂ

  ತಮಿಳು ಹಾಗೂ ಮಲಯಾಳಂ

  ತಮಿಳು: 181, ಮಗಲಿರ್ ಮಾನ್ಬು, ಕ್ಯಾಮೆರಾ ಎರರ್ ಮತ್ತು ಕಟ್ಚಿಕಾರನ್.

  ಮಲಯಾಳಂ: ಚೋರನ್ ಹಾಗೂ ವಾಮನನ್ .

  ಬಾಲಿವುಡ್

  ಬಾಲಿವುಡ್

  ಡಿಸೆಂಬರ್ 16ರಂದು ತೆರೆ ಕಾಣಲಿರುವ ಹಿಂದಿ ಚಿತ್ರಗಳ ಪಟ್ಟಿ: ಅಜಯ್ ವರ್ಧನ್, ತ್ರಹಿಮಮ್ ಹಾಗೂ ಸ್ಟ್ರಗಲ್: ಎ ಜರ್ನಿ ಆಫ್ ಲೈಫ್.

  English summary
  List of films releasing on December 16th against Avatar the way of water. Take a look
  Thursday, December 15, 2022, 20:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X