Don't Miss!
- News
Assembly election 2023: ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಇಲ್ಲ: ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ 2ರಂದು ತೆರೆ ಕಾಣುತ್ತಿರುವ ಭಾರತದ ಚಿತ್ರಗಳ ಪಟ್ಟಿ ಇಲ್ಲಿದೆ
2022ರ ಅಂತಿಮ ತಿಂಗಳಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ. ಈ ವರ್ಷ ಭಾರತದ ವಿವಿಧ ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿರುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಕಳೆದ ವರ್ಷ ಕೊರೊನಾ ವೈರಸ್‌ನಿಂದಾಗಿ ತೀವ್ರ ಹಿನ್ನಡೆ ಅನುಭವಿಸಿದ್ದ ಚಿತ್ರರಂಗ ಈ ವರ್ಷ ದೊಡ್ಡ ಮಟ್ಟದಲ್ಲಿ ಸುಧಾರಿಸಿಕೊಂಡಿದೆ. ಅದರಲ್ಲಿಯೂ ಈ ಬಾರಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳು ಮತ್ತೊಂದು ಹಂತದಲ್ಲಿ ಅಬ್ಬರಿಸಿ ಬೊಬ್ಬಿರಿದಿವೆ.
ಹೀಗೆ ಚಿತ್ರರಂಗಕ್ಕೆ ಅಮೋಘ ವರ್ಷವಾಗಿ ಪರಿಣಮಿಸಿರುವ 2022ರ ಅಂತಿಮ ತಿಂಗಳಿನಲ್ಲೂ ಕೆಲ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ನಿರೀಕ್ಷೆಗಳಿದ್ದು, ತಿಂಗಳ ಮೊದಲ ಶುಕ್ರವಾರ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಕೆಲ ಚಿತ್ರಗಳು ದೊಡ್ಡ ಮಟ್ಟದ ಹಿಟ್ ಆಗುವ ನಿರೀಕ್ಷೆ ಇದೆ. ಇನ್ನು ಡಿಸೆಂಬರ್ 2ರ ಶುಕ್ರವಾರದಂದು ಯಾವ ಭಾಷೆಯ ಯಾವ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದರ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.
ಸ್ಯಾಂಡಲ್‌ವುಡ್: ಡಿಸೆಂಬರ್ ತಿಂಗಳ ಮೊದಲ ಶುಕ್ರವಾರದಂದು ದಿಗಂತ್ ಅಭಿನಯದ 'ತಿಮ್ಮಯ್ಯ ಅಂಡ್ ತಿಮ್ಮಯ್ಯ', ಗುಳ್ಟೂ ಖ್ಯಾತಿಯ ನವೀನ್ ಶಂಕರ್ ಅಭಿನಯದ 'ಧರಣಿ ಮಂಡಲ ಮಧ್ಯದೊಳಗೆ', 'ಸೆಕೆಂಡ್ ಲೈಫ್' ಹಾಗೂ 'ಫ್ಲಾಟ್ ನಂಬರ್ ನೈನ್' ಚಿತ್ರಗಳು ಬಿಡುಗಡೆಗೊಳ್ಳಲಿವೆ. ಇನ್ನು ಈ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರಗಳೂ ಸಹ ದೊಡ್ಡ ಪ್ರಚಾರ ಮಾಡದಿದ್ದು, ಚಿತ್ರಮಂದಿರಗಳಲ್ಲಿ ಯಾವ ರೀತಿ ಪ್ರದರ್ಶನವಾಗಲಿವೆಯೋ ಕಾದು ನೋಡಬೇಕಿದೆ.
ಕಾಲಿವುಡ್: ವಿಜಯ್ ಸೇತುಪತಿ ಅಭಿನಯದ ಡಿಎಸ್‌ಪಿ, ಗಟ್ಟ ಕುಸ್ತಿ, ದೇರ್ಕದಿ ವೀರನ್, ಮಂಜ ಕುರುವಿ, ರಿವೆಟ್
ಟಾಲಿವುಡ್: ಹಿಟ್ ದ ಸೆಕೆಂಡ್ ಕೇಸ್, ಮಟ್ಟಿ ಕುಸ್ತಿ, ನೇನೆವರು, ದೋಸ್ತಾನ.
ಮಾಲಿವುಡ್: ಪೃಥ್ವಿರಾಜ್ ಸುಕುಮಾರನ್ ಅಭಿನಯದ ಗೋಲ್ಡ್, ದುಬೈ ವೆಳ್ಳಾಕ, ದಿ ಟೀಚರ್, ಖೆಡ್ಡಾ, ಪ್ರದಿ ನಿರಪರಾಧಿಯಾನೋ?, ಒರು ಜಾತಿ ಮನುಷ್ಯನ್, ಮಾದನ್.
ಬಾಲಿವುಡ್: ಆನ್ ಆಕ್ಷನ್ ಹೀರೊ, 50 - 50.