Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರ ಅಂತಿಮ ಶುಕ್ರವಾರ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ
2022 ಸಿನಿಮಾ ಕ್ಷೇತ್ರದ ಪಾಲಿಗೆ ಕಮ್‌ಬ್ಯಾಕ್ ಎಂದೇ ಹೇಳಬಹುದು. ಈ ವರ್ಷ ಭಾರತದ ಬಹುತೇಕ ಎಲ್ಲಾ ಪ್ರಮುಖ ಇಂಡಸ್ಟ್ರಿಯ ಚಿತ್ರಗಳು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು, ವಿಜಯ ಪತಾಕೆ ಹಾರಿಸಿವೆ. ಈ ಮೂಲಕ ಕಳೆದ ಎರಡು ವರ್ಷಗಳಲ್ಲಿ ಲಾಕ್ ಡೌನ್ ಕಾರಣದಿಂದ ಹಿನ್ನಡೆ ಅನುಭವಿಸಿದ್ದ ಚಿತ್ರರಂಗಗಳು ಮರು ಜೀವ ಪಡೆದುಕೊಂಡಿವೆ.
ಇನ್ನು ಈ ವರ್ಷ ಬಾಲಿವುಡ್ ಚಿತ್ರರಂಗಕ್ಕಿಂತ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳೇ ಅಬ್ಬರಿಸಿದ್ದು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿವೆ. ಸ್ಯಾಂಡಲ್‌ವುಡ್‌ನ ಕೆಜಿಎಫ್ ಚಾಪ್ಟರ್ 2 ಹಾಗೂ ತೆಲುಗು ಚಿತ್ರರಂಗದ ಆರ್ ಆರ್ ಆರ್ ಈ ವರ್ಷ ಸಾವಿರ ಕೋಟಿ ಭಾರತದ ಎರಡು ಚಿತ್ರಗಳು ಎಂಬ ಖ್ಯಾತಿಯನ್ನು ಪಡೆದರೆ ತಮಿಳಿನ ಪೊನ್ನಿಯಿನ್ ಸೆಲ್ವನ್ ಹಾಗೂ ವಿಕ್ರಮ್ 500 ಕೋಟಿ ಗಳಿಸಿದ ಚಿತ್ರಗಳು ಎನಿಸಿಕೊಂಡವು. ಈ ಚಿತ್ರಗಳ ಜತೆ ಕಾಂತಾರ ಕೇವಲ 16 ಕೋಟಿ ವೆಚ್ಚದಲ್ಲಿ ತಯಾರಾಗಿ 400 ಕೋಟಿ ಗಳಿಸಿ ಸಿನಿ ಮಂದಿಯ ಹುಬ್ಬೇರುವಂತೆ ಮಾಡಿತ್ತು ಹಾಗೂ ಬಾಲಿವುಡ್‌ನ ಕಾಶ್ಮೀರ್ ಫೈಲ್ಸ್, ಸೌತ್‌ನ ಸೀತಾ ರಾಮಮ್, ತಿರುಚಿತ್ರಾಂಬಲಂ, ಕಾರ್ತಿಕೇಯ 2, ಲವ್ ಟುಡೇ ಮುಂತಾದ ಚಿತ್ರಗಳು ಜನರ ಮನಸ್ಸನ್ನು ಗೆದ್ದು ಸದ್ದು ಮಾಡಿದ್ದವು.
ಸ್ಯಾಂಡಲ್‌ವುಡ್‌ನ
ಫೇಮಸ್
ಜೋಡಿ
ರಾಮ್
ಕುಮಾರ್,
ಶ್ರುತಿ
ಕಿರುತೆರೆಯಲ್ಲಿ
ಮಿಂಚಲು
ರೆಡಿ:
ಧಾರಾವಾಹಿ
ಯಾವುದು?
ಹೀಗೆ ಹಲವಾರು ಸೂಪರ್ ಬ್ಲಾಕ್ ಬಸ್ಟರ್ ಚಿತ್ರಗಳು ತೆರೆಕಂಡಿರುವ ಈ ಗೋಲ್ಡನ್ ಇಯರ್‌ಗೆ ಡಿಸೆಂಬರ್ 30ರ ಕೊನೆಯ ಶುಕ್ರವಾರ ಬಿಡುಗಡೆಯಾಗುವ ಚಿತ್ರಗಳ ಮೂಲಕ ತೆರೆ ಬೀಳಲಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂತಸದಲ್ಲಿರುವ ದೇಶದ ಜನತೆಗೆ ವರ್ಷಾಂತ್ಯದಲ್ಲಿ ವೀಕ್ಷಿಸಲು ಹಲವಾರು ಚಿತ್ರಗಳು ಲಭ್ಯವಿರಲಿವೆ. ಅಂದಹಾಗೆ ವರ್ಷದ ಕೊನೆಯ ಶುಕ್ರವಾರ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿರುವ ವಿವಿಧ ಇಂಡಸ್ಟ್ರಿಯ ಚಿತ್ರಗಳು ಯಾವುವು ಎಂಬುದರ ಮಾಹಿತಿ ಈ ಕೆಳಕಂಡಂತಿದೆ..

ಸ್ಯಾಂಡಲ್‌ವುಡ್
ಡಿಸೆಂಬರ್ 30ರ ಶುಕ್ರವಾರದಂದು ಬಿಡುಗಡೆಯಾಗಲಿರುವ ಕನ್ನಡ ಚಿತ್ರಗಳ ಪಟ್ಟಿ ಕೆಳಕಂಡಂತಿದೆ..
* ಲೂಸ್ ಮಾದ ಯೋಗೇಶ್ ನಟನೆಯ 'ನಾನು ಅದು ಮತ್ತು ಸರೋಜ'
* ಯುವ ಕಲಾವಿದರ 'ಮೇಡ್ ಇನ್ ಬೆಂಗಳೂರು'
* ಯೋಗರಾಜ್ ಭಟ್ ನಿರ್ದೇಶನದ 'ಪದವಿ ಪೂರ್ವ'
* ಮಕ್ಕಳ ಚಿತ್ರ 'ಜೋರ್ಡನ್'
* ದ್ವಿಪಾತ್ರ
* ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'

ಟಾಲಿವುಡ್
* ಆದಿ ಸಾಯಿಕುಮಾರ್ ನಟನೆಯ 'ಟಾಪ್ ಗೇರ್'
* ಲಕ್ಕಿ ಲಕ್ಷ್ಮಣ್
* ಪ್ರೇಮದೇಶಂ
* ಡಾಲಿ ಧನಂಜಯ್ ನಟನೆಯ ಕನ್ನಡ ಚಿತ್ರ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'ದ ತೆಲುಗು ಅವತರಣಿಕೆ 'ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ'
* ರಾಜಯೋಗಂ
* ವ್ರೈಟರ್ ಪದ್ಮಭೂಷಣ್
* ಕೋರಮೀನು ( ಡಿಸೆಂಬರ್ 31ರ ಶನಿವಾರ ಬಿಡುಗಡೆ )

ತಮಿಳು ಹಾಗೂ ಮಲಯಾಳಂ ಚಿತ್ರಗಳು
* ಐಶ್ವರ್ಯ ರಾಜೇಶ್ ನಟನೆಯ ದ ಗ್ರೇಟ್ ಇಂಡಿಯನ್ ಕಿಚನ್ ( ತಮಿಳು ) ಡಿಸೆಂಬರ್ 29ರ ಗುರುವಾರ ಬಿಡುಗಡೆಯಾಗಲಿದೆ.
* ಐಶ್ವರ್ಯ ರಾಜೇಶ್ ನಟನೆಯ ಡ್ರೈವರ್ ಜಮುನಾ ( ತಮಿಳು ) ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ.
* ಸೆಂಬಿ ( ತಮಿಳು ) ಚಿತ್ರ ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ.
* ಓಹ್ ಮೈ ಘೋಷ್ಟ್ ( ತಮಿಳು ) ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ.
* ತ್ರಿಶಾ ನಟನೆಯ ರಾಂಗಿ ತಮಿಳು ಚಿತ್ರ ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ.
* ಮಲಯಾಳಂನ ಮಲಿಕಾಪ್ಪುರಂ ಹಾಗೂ ಡ್ಜಿನ್ ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ.

ಬಾಲಿವುಡ್
ಡಿಸೆಂಬರ್ 30ರ ಶುಕ್ರವಾರ ಹಿಂದಿಯ ವೇದ್, ಹಿಟ್ ದ ಸೆಕೆಂಡ್ ಕೇಸ್ ಹಾಗೂ ಆತ್ಮರಕ್ಷ ಚಿತ್ರಗಳು ತೆರೆಗೆ ಬರಲಿವೆ.