ಮತ್ತೆ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್ ಸದ್ದು; ಮಾರ್ಚ್ 10ರಂದು ಬಿಡುಗಡೆಯಾಗುತ್ತಿರುವ ಎಲ್ಲಾ ಚಿತ್ರಗಳ ಪಟ್ಟಿ
ಈ ವರ್ಷದ ಮೂರನೇ ತಿಂಗಳ ಎರಡನೇ ಶುಕ್ರವಾರ ಬಂದೇಬಿಟ್ಟಿದೆ. ಸಿನಿ ರಸಿಕರ ನೆಚ್ಚಿನ ಪ್ರತಿ ಶುಕ್ರವಾರದ ಹಾಗೆ ಈ ದಿನದಂದೂ ಸಹ ಹೊಸ ಚಿತ್ರಗಳು ಚಿತ್ರಮಂದಿರಗಳ ಅಂಗಳಕ್ಕೆ ಬಂದಿದ್ದು, ಪ್ರೇಕ್ಷಕರನ್ನು ಮೆಚ್ಚಿಸುವ ಕೆಲಸವನ್ನ ಮಾಡಿ ಯಶಸ್ಸು ಸಾಧಿಸುವತ್ತ ಚಿತ್ತ ನೆಟ್ಟಿವೆ.
ಇನ್ನು ಹೊಸ ಚಿತ್ರಗಳ ಜತೆಗೆ ಹಳೆ ಚಿತ್ರಗಳೂ ಸಹ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಮರು ಬಿಡುಗಡೆಯಾಗ್ತಿದ್ದು, ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳನ್ನೇ ಪಡೆದುಕೊಳ್ತಿವೆ. ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಈ ವಾರ ಮರುಬಿಡುಗಡೆಯಾಗ್ತಿದೆ.

ಹೊಸ ಸಿನಿಮಾಗಳು ಇಂದು ಶುಕ್ರವಾರ ( ಮಾರ್ಚ್ 10 ) ತೆರೆಗೆ ಬರುತ್ತಿದ್ದರೆ, ಆರ್ ಆರ್ ಆರ್ ಸಿನಿಮಾ ನಾಳೆ ( ಮಾರ್ಚ್ 11 ) ಮರು ಬಿಡುಗಡೆಯಾಗುತ್ತಿದೆ. ಹೀಗೆ 2023ರ ಮಾರ್ಚ್ ಎರಡನೇ ವಾರ ತೆರೆಗೆ ಬರುತ್ತಿರುವ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಮಾರ್ಚ್ 10 ಶುಕ್ರವಾರದಂದು ಒಂದು ರಾಬರಿ ಕಥೆ, ಭಿಕ್ಷುಕ, ಚೌಕಾಬಾರ, ಗಡಿ, ಮಂಡಲ ಹಾಗೂ ಮೇರಿ ಎಂಬ ಕನ್ನಡ ಸಿನಿಮಾಗಳು ಬೆಳ್ಳಿ ತೆರೆಗೆ ಬರಲಿವೆ. ಅತ್ತ ತೆಲುಗಿನಲ್ಲಿ ಸಿಬಿಐ ಸನಾತನ್, ಟ್ಯಾಕ್ಸಿ, ವಾಡೆವಡು, 65, ಪುಲಿ, ಮಿಸ್ಟರ್ ಕಲ್ಯಾಣ್, ನೇಡೆ ವಿಡುದಲ ಹಾಗೂ ದೋಚೆವರೆವರುರಾ ಚಿತ್ರಗಳು ಬಿಡುಗಡೆಯಾಗ್ತಿವೆ.
ತಮಿಳಿನಲ್ಲಿ ಜಯಮ್ ರವಿ ನಟನೆಯ ಅಖಿಲನ್, ಕನ್ನಡದ ಆ ಕರಾಳ ರಾತ್ರಿ ಚಿತ್ರದ ರಿಮೇಕ್ ಕೊಂಡ್ರಾಲ್ ಪಾವಮ್, ಇರುಂಬನ್, ಡ್ಯಾಡ, ಮೆಮೊರಿಸ್ ಹಾಗೂ ಬ್ಯೂಟಿ ಎಂಬ ಸಿನಿಮಾಗಳು ರಿಲೀಸ್ ಆಗ್ತಿವೆ.
ಬಾಲಿವುಡ್‌ನಲ್ಲಿ ಲೋಹರ್ದಗ, ಮಲಯಾಳಂನಲ್ಲಿ ದುರ್ಮುಗಂ, ಆಲಂಕಂ ಹಾಗೂ ಖಾಲಿಪರ್ಸ್ ಆಫ್ ಬಿಲಿಯನೈರ್ಸ್ ಚಿತ್ರಗಳು ಇಂದು ( ಮಾರ್ಚ್ 10 ) ತೆರೆಗೆ ಬಂದಿವೆ.


Click it and Unblock the Notifications