ನವೆಂಬರ್ 11ರಂದು ತೆರೆಕಾಣಲಿರುವ ಚಿತ್ರಗಳ ಪಟ್ಟಿ; ಪ್ರಮುಖ ಚಿತ್ರಗಳು ಔಟ್!
ನಾಳೆ ( ನವೆಂಬರ್ 11 ) ತಿಂಗಳ ಎರಡನೇ ಶುಕ್ರವಾರದಂದು ಸ್ಯಾಂಡಲ್‌ವುಡ್ ಟು ಹಾಲಿವುಡ್‌ನ ಹಲವು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಚಂದನವನದಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್, ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರಗಳು ನಾಳೆ ತೆರೆಗೆ ಅಪ್ಪಳಿಸಲಿವೆ. ಅತ್ತ ಟಾಲಿವುಡ್‌ನಲ್ಲಿ ನಟಿ ಸಮಂತಾ ರುಥ್ ಪ್ರಭು ಅಭಿನಯದ ಯಶೋಧಾ, ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ಊಂಚೈ, ಹಾಲಿವುಡ್‌ನ ಬ್ಲಾಕ್ ಪ್ಯಾಂಥರ್: ವಖೆಂಡಾ ಫಾರ್‌ಎವರ್ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ.
ಇನ್ನು ಎಲ್ಲಾ ಭಾಷೆಯ ಚಿತ್ರಗಳ ವೀಕ್ಷಕರೂ ಇರುವ ನಮ್ಮ ಬೆಂಗಳೂರಿನಲ್ಲಿ ಈ ಚಿತ್ರಗಳ ಬಿಡುಗಡೆಯಾಗುತ್ತಿರುವುದರಿಂದ ನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಭಾರೀ ಬದಲಾವಣೆಗಳಾಗಲಿವೆ. ಅಕ್ಟೋಬರ್ 28ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದ ಗುಡಿ ಚಿತ್ರ ಮುಖ್ಯ ಚಿತ್ರಮಂದಿರ ನರ್ತಕಿಯಿಂದ ಹೊರಬಿದ್ದಿದ್ದು ಶ್ರೇಯಸ್ ಮಂಜು ಅಭಿನಯದ ರಾಣಾ ಹಾಗೂ ಬ್ಲಾಕ್ ಪ್ಯಾಂಥರ್: ವಖೆಂಡಾ ಫಾರ್‌ಎವರ್ ಇದೇ ಚಿತ್ರಮಂದಿರದಲ್ಲಿ ನಾಳೆ ಬಿಡುಗಡೆಗೊಳ್ಳುತ್ತಿವೆ. ಇನ್ನು ಹೆಡ್ ಬುಷ್ ಪ್ರದರ್ಶನಗೊಳ್ಳುತ್ತಿದ್ದ ಭೂಮಿಕಾ ಚಿತ್ರಮಂದಿರದಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ಗಂಧದ ಗುಡಿ ಹಾಗೂ ಹೆಡ್ ಬುಷ್ ಚಿತ್ರಗಳು ಮುಖ್ಯ ಚಿತ್ರಮಂದಿರಗಳನ್ನು ಕಳೆದುಕೊಂಡಿವೆ.

ನಾಳೆ ( ನವೆಂಬರ್ 11 ) ಬಿಡುಗಡೆಗೊಳ್ಳುವ ಚಿತ್ರಗಳ ಪಟ್ಟಿ
ಕನ್ನಡ: ದಿಲ್ ಪಸಂದ್, ರಾಣಾ, ಹುಬ್ಬಳ್ಳಿ ಡಾಬಾ, ಓ
ತೆಲುಗು: ಯಶೋಧಾ, ಮದಿ, ನಚ್ಚಿಂದಿ ಗರ್ಲ್ ಫ್ರೆಂಡು, ಇನ್ ಸೆಕ್ಯೂರ್, ಆಧಾರಂ, ಕ್ಲೂ, ಕಾದಲ್ ಕಹಾನಿ, ಲವ್ ಯು ಟೂ.
ತಮಿಳು: ಗಿಲಾ ಐಲ್ಯಾಂಡ್, ಯಶೋಧಾ, ಮಿರಲ್, ಪೆರೋಲ್, ನನ್ಬಾ, ತಿರುಮಯಿ.
ಹಿಂದಿ: ಕರ್ತೂತ್, ಜನ್ಮ್ ಜನ್ಮ್ ಕಾ ಪ್ಯಾರ್, ರೇಬರೇಲಿ, ಊಂಚೈ, ಮಿಸ್ಟರ್ ಮಮ್ಮಿ, ರಾಕೆಟ್ ಗ್ಯಾಂಗ್, ಅಂತ್ ದ ಎಂಡ್, ಥಾಯ್ ಮಸಾಜ್, ಬಡೇ ಹೋ ಬೇಟಿ ಹ್ಯೂ ಹೈ
ಮಲಯಾಳಂ: ಶೋಲೈ, ಬರ್ಮುಡಾ, ಮುಕುಂದನ್ ಉನ್ನಿ ಅಸೋಸಿಯೇಟ್ಸ್.
ಇತರೆ: ಬ್ಲಾಕ್ ಪ್ಯಾಂಥರ್: ವಖೆಂಡಾ ಫಾರ್‌ಎವರ್ ( ಇಂಗ್ಲಿಷ್ )


Click it and Unblock the Notifications











