ಶಿವರಾತ್ರಿ ಜಾಗರಣೆಗಾಗಿ ವಿಶೇಷ ಪ್ರದರ್ಶನ ಕಾಣಲಿರುವ ಚಿತ್ರಗಳ ಪಟ್ಟಿ

ನಾಳೆ ( ಫೆಬ್ರವರಿ 18 ) ಮಹಾ ಶಿವರಾತ್ರಿ ಹಬ್ಬ ಆಚರಿಸಲು ದೇಶದ ಜನತೆ ಸಜ್ಜಾಗಿದ್ದಾರೆ‌. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಯಲ್ಲಿ ಸಿಹಿ‌ ಸವಿಯುತ್ತಾರೆ. ಕೆಲವರು ಆ ದಿನ ರಾತ್ರಿ ಪೂರ್ತಿ ದೇವಸ್ಥಾನಗಳಲ್ಲಿ ನಡೆಯುವ ಭಜನೆಗಳನ್ನು ಆಲಿಸುತ್ತಾ ಜಾಗರಣೆ ಮಾಡುತ್ತಾರೆ.

ಇನ್ನೂ ಹಲವರು ಮನೆಯಲ್ಲೇ ಗುಂಪು ಗುಂಪಾಗಿ ಕುಳಿತು ಟಿವಿಯಲ್ಲಿ ನೆಚ್ಚಿನ ಚಿತ್ರಗಳನ್ನು ವೀಕ್ಷಿಸಿ ಜಾಗರಣೆ ಆಚರಿಸುತ್ತಾರೆ. ಸದ್ಯ ಇದೇ ಮಾದರಿಯಲ್ಲಿ ಚಿತ್ರಮಂದಿರಗಳಲ್ಲೇ ಶಿವರಾತ್ರಿ ಜಾಗರಣೆ ಪ್ರಯುಕ್ತ ಹಿಟ್ ಚಿತ್ರಗಳನ್ನು ಪ್ರದರ್ಶನವನ್ನು ಏರ್ಪಡಿಸುವ ಟ್ರೆಂಡ್ ಹುಟ್ಟುಕೊಂಡಿದೆ.

ಹೌದು, ಸ್ಟಾರ್ ನಟರ ಹಿಟ್ ಚಿತ್ರಗಳ ಪ್ರದರ್ಶನಗಳನ್ನು ಶಿವರಾತ್ರಿ ಹಬ್ಬದ ದಿನ ಮಧ್ಯರಾತ್ರಿಯಂದು ಆಯೋಜಿಸಲಾಗುತ್ತೆ‌. ಇನ್ನು ಜಾಗರಣೆಯನ್ನು ಚಿತ್ರಮಂದಿರಗಳಲ್ಲಿ ಸಿನಿಮಾ‌ ನೋಡುವ ಮೂಲಕ ಆಚರಿಸಲು ಇಚ್ಛಿಸುವವರು ಹಾಗೂ ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಇಷ್ಟಪಡುವವರು ಈ ವಿಶೇಷ ಪ್ರದರ್ಶನಗಳ ಟಿಕೆಟ್ ಖರೀದಿಸಿ ಚಿತ್ರ ನೋಡಿ ಸಂಭ್ರಮಿಸುತ್ತಾರೆ. ಇನ್ನು ತೆಲುಗಿನಲ್ಲಿ ಹೆಚ್ಚಾಗಿ ಆಯೋಜನೆಯಾಗ್ತಿದ್ದ ಈ ಪ್ರದರ್ಶನಗಳು ಇದೀಗ ಕನ್ನಡಕ್ಕೂ ಕಾಲಿಟ್ಟಿದೆ. ಈ ಬಾರಿಯ ಶಿವರಾತ್ರಿ ಪ್ರಯುಕ್ತ ವಿಶೇಷ ಪ್ರದರ್ಶನ ( ಫೆಬ್ರವರಿ 19 ) ಕಾಣಲಿರುವ ಕನ್ನಡ ಹಾಗೂ ತೆಲುಗು ಚಿತ್ರಗಳ‌ ಪಟ್ಟಿ ಈ ಕೆಳಕಂಡಂತಿದೆ.

List of films special show on Shivarathri festival day

ಬೆಂಗಳೂರು: ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬೊದ ರಾಜಕುಮಾರ - ಪೀಣ್ಯದ ಭಾರತಿ ಚಿತ್ರಮಂದಿರದಲ್ಲಿ - 12.30 AM

ಹೈದರಾಬಾದ್ : ಕಾಂತಾರ - ಸಪ್ತಗಿರಿ ಚಿತ್ರಮಂದಿರ - 12 AM & 3 AM

ಇನ್ನುಳಿದಂತೆ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ, ಬಾಲಕೃಷ್ಣ ನಟನೆಯ ಅಖಂಡ, ಜೂನಿಯರ್ ಎನ್ ಟಿ ಆರ್ ನಟನೆಯ ಟೆಂಪರ್, ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೈಸ್, ಮಹೇಶ ಬಾಬು ನಟನೆಯ ದೂಕುಡು, ಸರಿಲೇರು ನೀಕೆವ್ವರು, ಪ್ರಭಾಸ್ ನಟನೆಯ ರೆಬೆಲ್, ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಹಾಗೂ ರವಿತೇಜಾ ನಟನೆಯ ಧಮಾಕಾ ಚಿತ್ರಗಳೂ ಸಹ ವಿಶೇಷ ಪ್ರದರ್ಶನ ಕಾಣಲಿವೆ.

More from Filmibeat

English summary
List of films special show on Shivarathri festival day . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X