»   » 'ದಸರಾ ಚಿತ್ರೋತ್ಸವ'ದಲ್ಲಿ ಯಾವ 'ಸ್ಟಾರ್'ಗಳ ಸಿನಿಮಾ ಪ್ರದರ್ಶನವಾಗ್ತಿದೆ

'ದಸರಾ ಚಿತ್ರೋತ್ಸವ'ದಲ್ಲಿ ಯಾವ 'ಸ್ಟಾರ್'ಗಳ ಸಿನಿಮಾ ಪ್ರದರ್ಶನವಾಗ್ತಿದೆ

Posted By:
Subscribe to Filmibeat Kannada

ಮೈಸೂರು ದಸರಾ ಪ್ರಯುಕ್ತ ಚಲನಚಿತ್ರೋತ್ಸವ ನಡೆಯುತ್ತಿದ್ದು, ಈ ಸಿನಿಹಬ್ಬದಲ್ಲಿ ಕನ್ನಡ ಸೇರಿದಂತೆ ದೇಶ-ವಿದೇಶಗಳ ಹಲವು ಚಿತ್ರಗಳು ಪ್ರದರ್ಶನವಾಗ್ತಿದೆ. 5೦ಕ್ಕೂ ಅಧಿಕ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದು, ಕನ್ನಡದ 25 ಸಿನಿಮಾಗಳು ಆಯ್ಕೆಯಾಗಿವೆ.

2017ನೇ ಸಾಲಿನಲ್ಲಿ ಜನಮನ್ನಣೆಗಳಿಸಿದ, ರಾಜ್ಯ ಪ್ರಶಸ್ತಿ ಪಡೆದ ಹಾಗೂ ವಿವಿಧ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು ಪ್ರದರ್ಶನವಾಗುತ್ತಿವೆ.

ಹಾಗಿದ್ರೆ, ಯಾವೆಲ್ಲ ಕನ್ನಡ ಸಿನಿಮಾಗಳು ಮೈಸೂರು ದಸರಾ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

'ಬಿಗ್' ನಟರ ಸಿನಿಮಾಗಳು

ದರ್ಶನ್ ಅಭಿನಯದ 'ಚಕ್ರವರ್ತಿ', ಸುದೀಪ್ ಅಭಿನಯದ 'ಹೆಬ್ಬುಲಿ', ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ', ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ 'ಸಂತು ಸ್ಟ್ರೈಟ್ ಫಾರ್ವಾಡ್' ಚಿತ್ರಗಳು ಪ್ರದರ್ಶನವಾಗಲಿದೆ.

ಸೆಪ್ಟಂಬರ್ 22 ರಿಂದ 'ಮೈಸೂರು ದಸರಾ ಚಲನಚಿತ್ರೋತ್ಸವ' ಆರಂಭ

ವರ್ಷದ ವಿಶೇಷ ಸಿನಿಮಾಗಳು

ದುನಿಯಾ ವಿಜಯ್ ಅಭಿನಯದ 'ದನಕಾಯೋನು', ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ 'ಚೌಕ', ಉಪೇಂದ್ರ ಮತ್ತು ಸುದೀಪ್ ಕಾಣಿಸಿಕೊಂಡಿದ್ದ 'ಮುಕುಂದ ಮುರಾರಿ', 2017ನೇ ಸಾಲಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡ 'ಬ್ಯೂಟಿಫುಲ್ ಮನಸುಗಳು' ಮತ್ತು ಧನಂಜಯ್ ಅಭಿನಯಿಸಿದ್ದ 'ಎರಡನೇ ಸಲ' ಸಿನಿಮಾ ಪ್ರದರ್ಶನವಾಗುತ್ತಿದೆ.

ವರ್ಷದ ಹಿಟ್ ಸಿನಿಮಾಗಳು

ರಕ್ಷಿತ್ ಶೆಟ್ಟಿ ಸಾರಥ್ಯದ 'ಕಿರಿಕ್ ಪಾರ್ಟಿ', ಹೊಸಬರ 'ಒಂದು ಮೊಟ್ಟೆಯ ಕಥೆ', ಸಿಂಪಲ್ ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ', ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ', ಮತ್ತು ಜಗ್ಗೇಶ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ನೀರ್ ದೋಸೆ' ಆಯ್ಕೆಯಾಗಿದೆ.

ಮೋಡಿ ಮಾಡಿದ ಚಿತ್ರಗಳು

ಹೊಸಬರ 'ರಾಮಾ ರಾಮಾ ರೇ' ಸುಂದರ್ ರಾಜ್ ಅಭಿನಯದ 'ಲಿಫ್ಟ್ ಮ್ಯಾನ್', ರಾಜ್ಯ ಪ್ರಶಸ್ತಿ ಪಡೆದ 'ಅಮರಾವತಿ', ಥ್ರಿಲ್ಲಿಂಗ್ ಸಿನಿಮಾ 'ಶುದ್ಧಿ' ಮತ್ತು 'ಗೋಲಿ ಸೋಡಾ' ಚಿತ್ರಗಳು ದಸರಾ ಚಿತ್ರೋತ್ಸವದಲ್ಲಿ ಆಯ್ಕೆಯಾಗಿವೆ.

ಭರವಸೆಯ ಸಿನಿಮಾಗಳು

ಪ್ರಕಾಶ್ ರೈ ಅಭಿನಯದ 'ಇದೊಳ್ಳೆ ರಾಮಾಯಣ', ಚಿರು ಸರ್ಜಾ ಅಭಿನಯದ 'ಆಕೆ', ಶ್ರೀನಗರ ಕಿಟ್ಟಿ ಅಭಿನಯದ 'ಸಿಲಿಕಾನ್ ಸಿಟಿ' ಟಿ.ಎಸ್.ನಾಗಭರಣ ನಿರ್ದೇಶನದ 'ಅಲ್ಲಮ' ಮತ್ತು ಹೊಸಬರ 'ಕಹಿ' ಸಿನಿಮಾ ಕೂಡ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶನ ಕಾಣಲಿದೆ.

English summary
List of films to be screened at the Mysuru Dasara Film Festival. Mysuru Dasara Film Festival will be held for a week starting from September 22. It will go on till 28.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada