ಕನ್ನಡದ ಈ ಡೈರೆಕ್ಟರ್ ಗಳು ರಿಯಲ್ ಕೋಟ್ಯಾಧಿಪತಿಗಳು

By Naveen

Recommended Video

ಈ ನಿರ್ದೇಶಕರ ಸಿನಿಮಾ ಕೋಟಿ ಕೋಟಿ ಗಳಿಸಿದೆ..! | Filmibeat Kannada

ಒಂದು ಸಿನಿಮಾದ ಹಿಂದಿನ ಹೀರೊ ಒಬ್ಬ ಡೈರೆಕ್ಟರ್. ಒಂದು ಸಿನಿಮಾದ ಅಳ ಆಗಲ ಗೊತ್ತಿರುವುದು ಒಬ್ಬ ನಿರ್ದೇಶಕನಿಗೆ. ಒಂದು ಸಿನಿಮಾ ಹುಟ್ಟುವುದು ಕೂಡ ಒಬ್ಬ ಮೇಕರ್ ನಿಂದ. ಬಾಕ್ಸ್ ಆಫೀಸ್ ಕೆಲೆಕ್ಷನ್ ಅಂತ ಬಂದರೆ ಅಲ್ಲಿಯೂ ಒಬ್ಬ ನಿರ್ದೇಶಕನ ಶ್ರಮ ದೊಡ್ಡದಿರುತ್ತದೆ.

ಸ್ಯಾಂಡಲ್ ವುಡ್ ನಿರ್ದೇಶಕರ ಪೈಕಿ ಕೆಲವು ನಿರ್ದೇಶಕರು ಮಾತ್ರ ಸ್ಟಾರ್ ಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ಕೆಲವು ನಿರ್ದೇಶನಕರ ಹೆಸರು ಕೇಳಿದರೆನೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಕೆಲವೇ ನಿರ್ದೇಶಕರು ಗಳು ಕೋಟಿ ಕೋಟಿ ಕಲೆ ಹಾಕುವ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದರೆ, ಈ ಎಲ್ಲ ನಿರ್ದೇಶಕರ‌ ಚಿತ್ರಗಳು ಸ್ವಮೇಕ್ ಸಿನಿಮಾಗಳಾಗಿವೆ.

ಅಂದಹಾಗೆ, ಕನ್ನಡದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿ ನೋಡಿದರೆ ಅಲ್ಲಿ ಈ ನಿರ್ದೇಶಕರ ಹೆಸರುಗಳು ಕಾಣಿಸುತ್ತದೆ. ಮುಂದೆ ಓದಿ...

ಬಾಕ್ಸ್ ಆಫೀಸ್ ಕಿಂಗ್ ಸಂತೋಷ್ ಆನಂದ್ ರಾಮ್

ಬಾಕ್ಸ್ ಆಫೀಸ್ ಕಿಂಗ್ ಸಂತೋಷ್ ಆನಂದ್ ರಾಮ್

ಕನ್ನಡ ನಿರ್ದೇಶಕರ ಪೈಕಿ ಸಂತೋಷ್ ಆನಂದ್ ರಾಮ್ ಬಾಕ್ಸ್ ಆಫೀಸ್ ಕಿಂಗ್ ಆಗಿದ್ದಾರೆ. ಎರಡೇ ಸಿನಿಮಾ ನಿರ್ದೇಶನ ಮಾಡಿದ್ದರು ಸಂತೋಷ್ ಕೋಟಿ ಲೂಟಿ ಮಾಡಿ ದಾಖಲೆ ಮಾಡಿದ್ದಾರೆ. ಅವರ ಚೊಚ್ಚಲ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ 50 ಕೋಟಿ ಗಳಿಕೆ ಮಾಡಿದೆ.

ಅತಿ ಹೆಚ್ಚು ಹಣ ಮಾಡಿದ ಚಿತ್ರ'ರಾಜಕುಮಾರ'

ಅತಿ ಹೆಚ್ಚು ಹಣ ಮಾಡಿದ ಚಿತ್ರ'ರಾಜಕುಮಾರ'

ಮೊದಲ ಸಿನಿಮಾದಲ್ಲಿ 50‌ ಕೋಟಿ ಗಳಿಸಿದ ಸಂತೋಷ್ ತಮ್ಮ ಗೆಲುವನ್ನು ಎರಡನೇ ಸಿನಿಮಾದಲ್ಲಿಯೂ ಮುಂದುವರೆಸಿದರು. ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಜೋಡಿಯ 'ರಾಜಕುಮಾರ' ಚಿತ್ರ 75 ಕೋಟಿ ಗಳಿಸಿದೆ. ಇದು ಕನ್ನಡ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಸಿನಿಮಾವಾಗಿದೆ.

ಭಟ್ಟರ ಮಳೆಗೆ 50 ಕೋಟಿ

ಭಟ್ಟರ ಮಳೆಗೆ 50 ಕೋಟಿ

ಸ್ಯಾಂಡಲ್ ವುಡ್ ‍‌‌ನಲ್ಲಿ ಸುರಿದ 'ಮುಂಗಾರು ಮಳೆ'ಯ ತಂಪು ಇಂದಿಗೂ ಕಡಿಮೆ ಆಗಿಲ್ಲ. ಈ ಸಿನಿಮಾ ಅನೇಕ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. ಈ ಚಿತ್ರ 50 ಕೋಟಿ ಕಲೆಕ್ಟ್ ಮಾಡಿದ್ದು, ಭಟ್ಟರ ಬಲವನ್ನು ಇನ್ನಷ್ಟು ಹೆಚ್ಚು ಮಾಡಿತ್ತು. ಈ ಚಿತ್ರ ಯೋಗರಾಜ್ ಭಟ್ ಕೆರಿಯರ್ ನ ಗೋಲ್ಡನ್ ಚಿತ್ರವಾಗಿದೆ.

ರಿಷಬ್ ಶೆಟ್ಟಿ ಮಾಡಿದ್ದ ದೊಡ್ಡ ಪಾರ್ಟಿ

ರಿಷಬ್ ಶೆಟ್ಟಿ ಮಾಡಿದ್ದ ದೊಡ್ಡ ಪಾರ್ಟಿ

ಕನ್ನಡದಲ್ಲಿ ಬಂದ ಇತ್ತೀಚಿಗಿನ ಸೂಪರ್ ಹಿಟ್ ಸಿನಿಮಾ'ಕಿರಿಕ್ ಪಾರ್ಟಿ'. ಈ ಸಿನಿಮಾ ಗಳಿಸಿರುವುದು ಬರೋಬ್ಬರಿ 50 ಕೋಟಿ. ಕಾಲೇಜು ಕಥೆ ಹೇಳಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಯುವ ಮನಸ್ಸುಗಳ ಮನ ಗೆದ್ದಿದ್ದರು. ಈ ಚಿತ್ರದ ಮೂಲಕ ರಿಷಬ್ ಮಾತ್ರವಲ್ಲ ಅನೇಕರ ಹಣೆಬರಹ ಬದಲಾಯಿತು.

40 ಕೋಟಿ ಸಂಪಾದಿಸಿದ್ದ ಸೂರಿ

40 ಕೋಟಿ ಸಂಪಾದಿಸಿದ್ದ ಸೂರಿ

ಮೇಕಿಂಗ್ ಮಾಂತ್ರಿಕ, ವಿಭಿನ್ನ ಸ್ಕ್ರೀನ್ ಪ್ಲೇ ಸರದಾರ ಸೂರಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಗೂ ಸೂರಿ ಕಾಂಬಿನೇಷನ್ ನಲ್ಲಿ ಬಂದ ಹ್ಯಾಟ್ರಿಕ್ ಚಿತ್ರ 'ದೊಡ್ಮನೆ ಹುಡ್ಗ' ದೊಡ್ಡ ಜಾದು ಮಾಡಿದೆ. ಈ ಚಿತ್ರ 40 ಕೋಟಿ ಕಲೆಕ್ಷನ್ ಮಾಡಿದ್ದು, ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 5ನೇ ಸಿನಿಮಾವಾಗಿದೆ.

ಉಪ್ಪಿ ಡೈರೆಕ್ಟ್ ಮಾಡಿದ್ರೆ ಸಿನಿಮಾ ಪಕ್ಕಾ ಹಿಟ್ಟು

ಉಪ್ಪಿ ಡೈರೆಕ್ಟ್ ಮಾಡಿದ್ರೆ ಸಿನಿಮಾ ಪಕ್ಕಾ ಹಿಟ್ಟು

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ದೊಡ್ಡ ಕ್ರೇಜ್ ಇದ್ದೇ ಇರುತ್ತದೆ. ಉಪ್ಪಿ ಕೊನೆಯದಾಗಿ ಡೈರೆಕ್ಟ್ ಮಾಡಿದ್ದ ಚಿತ್ರ 'ಉಪ್ಪಿ 2'. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಿರುವುದು 40 ಕೋಟಿ. ಈ ಸಿನಿಮಾವನ್ನು ಸ್ವತಃ ಉಪೇಂದ್ರ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಅವರ ಕೋಟಿ ಕೋಟಿ ಖಾತೆಗೆ ಜಮ ಆಗಿದೆ.

More from Filmibeat

English summary
List of Highest Box office collection of kannnada Directors movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X