2023ರ ಮೊದಲ 6 ತಿಂಗಳಲ್ಲಿ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರಗಳ ಪಟ್ಟಿ; ಯಾವ ಚಿತ್ರ ಟಾಪ್?

ನಿನ್ನೆಗೆ ( ಜೂನ್ 30 ) 2023ರ ಮೊದಲ ಆರು ತಿಂಗಳುಗಳು ಮುಕ್ತಾಯಗೊಂಡಿವೆ. ಈ ಆರು ತಿಂಗಳುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರಗಳನ್ನು ಹೊರತುಪಡಿಸಿ ಇನ್ಯಾವ ಕನ್ನಡದ ಸ್ಟಾರ್ ನಟರ ಚಿತ್ರಗಳೂ ಸಹ ಬಿಡುಗಡೆಗೊಂಡಿಲ್ಲ.

ಇನ್ನು ಈ ಎರಡೂ ಚಿತ್ರಗಳೂ ಸಹ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲವಾದವು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗೆ ಹೆಚ್ಚು ಸ್ಟಾರ್ ನಟರ ಚಿತ್ರಗಳು ವರ್ಷದ ಮೊದಲ ಆರು ತಿಂಗಳಲ್ಲಿ ಬಿಡುಗಡೆಯಾಗದ ಕಾರಣ ಹಾಗೂ ಬಿಡುಗಡೆಯಾದ ಸ್ಟಾರ್ ನಟರ ಚಿತ್ರಗಳೂ ಸಹ ಆ ನಟರ ಸ್ಟಾರ್‌ಡಂಗೆ ತಕ್ಕಂತಹ ಯಶಸ್ಸನ್ನು ಸಾಧಿಸದ ಕಾರಣ ಸ್ಯಾಂಡಲ್‌ವುಡ್ 2023ರ ಮೊದಲ ಆರು ತಿಂಗಳಿನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿಲ್ಲ ಎನ್ನಬಹುದು.

top-grossing-kannada-movie-2023

ಹಾಗಿದ್ದರೆ ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಬಿಡುಗಡೆಗೊಂಡ ಕನ್ನಡದ ಚಿತ್ರಗಳ ಪೈಕಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳು ಯಾವುವು ಹಾಗೂ ಅವುಗಳು ಎಷ್ಟು ಗಳಿಕೆ ಮಾಡಿವೆ ಎಂಬ ಮಾಹಿತಿ ಇ ಕೆಳಕಂಡಂತಿದೆ. ಈ ಕೆಳಗಿನ ಎಲ್ಲಾ ಕಲೆಕ್ಷನ್ ಮಾಹಿತಿಯನ್ನು ಐಎಂಡಿಬಿ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ..

1. ಕಬ್ಜ: ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ಬಹು ನಿರೀಕ್ಷಿತ ಚಿತ್ರ ಕಬ್ಜ ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ ಎನಿಸಿಕೊಂಡಿದೆ. ಐಎಂಡಿಬಿ ಪ್ರಕಾರ ಕಬ್ಜ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 34.5 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ.

2. ಕ್ರಾಂತಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹಾಗೂ ವಿ ಹರಿಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐಎಂಡಿಬಿ ಪ್ರಕಾರ ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 33 ಕೋಟಿ ಗಳಿಕೆಯನ್ನು ಮಾಡಿದೆ.

3. ಶಿವಾಜಿ ಸುರತ್ಕಲ್ : 2020ರಲ್ಲಿ ತೆರೆಗೆ ಬಂದಿದ್ದ ಶಿವಾಜಿ ಸುರತ್ಕಲ್ ಯಶಸ್ಸು ಸಾಧಿಸಿದ ಬಳಿಕ ಅದೇ ತಂಡ ಈ ವರ್ಷ ಅದರ ಸೀಕ್ವೆಲ್ ಶಿವಾಜಿ ಸುರತ್ಕಲ್ 2 ಚಿತ್ರವನ್ನು ತೆರೆಗೆ ತಂದಿತ್ತು. ಕ್ರೈಮ್ ಥ್ರಿಲ್ಲರ್ ಆಗಿದ್ದ ಈ ಚಿತ್ರ ಸಾಧಾರಣ ಯಶಸ್ಸನ್ನು ಕಂಡಿತು. ಈ ಚಿತ್ರ ಐಎಂಡಿಬಿ ವೆಬ್ ತಾಣದ ಪ್ರಕಾರ 5.4 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

4. ಗುರುದೇವ್ ಹೊಯ್ಸಳ: ಈ ವರ್ಷ ಕಥೆಯ ವಿಚಾರವಾಗಿ ಗೆದ್ದ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಗುರುದೇವ್ ಹೊಯ್ಸಳ ಸಹ ಒಂದು. ಹೊಸ ನಿರ್ದೇಶಕ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ್ ನಾಯಕನಾಗಿ ನಟಿಸಿದ್ದಾರೆ. ಐಎಂಡಿಬಿ ವೆಬ್‌ಸೈಟ್ ಪ್ರಕಾರ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 5.18 ಕೋಟಿ ಗಳಿಕೆಯನ್ನು ಮಾಡಿತ್ತು.

More from Filmibeat

English summary
List of highest grossing Kannada films in the first half of 2023. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X