ರಿಲೀಸ್ ಡೇ ಹೆಚ್ಚು ಗಳಿಸಿದ 5 ಕನ್ನಡ ಚಿತ್ರಗಳಾವುವು? ಕ್ರಾಂತಿ ನಂ.1 ಆಗಲು ಎಷ್ಟು ಗಳಿಸಬೇಕು?

List of highest grossing kannada films on day 1: Kranti needs to earn 36 crores to become number 1

ದಾಖಲೆಗಳು ಇರುವುದೇ ಮುರಿಯಲು. ಚಿತ್ರವೊಂದು ನಿರ್ಮಿಸಿದ ದಾಖಲೆಯನ್ನು ನಂತರದ ದಿನಗಳಲ್ಲಿ ಬಿಡುಗಡೆಯಾಗುವ ಚಿತ್ರಗಳು ಮುರಿದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದನ್ನು ನೀವೆಲ್ಲಾ ನೋಡಿಯೇ ಇರುತ್ತೀರ. ಅದರಲ್ಲಿಯೂ ಕಲೆಕ್ಷನ್ ವಿಚಾರವಾಗಿ ಚಿತ್ರಗಳ ನಡುವೆ ಹೋಲಿಕೆ ಮಾಡಿ ಚಿತ್ರದ ಗೆಲುವನ್ನು ಅಳೆಯುವ ಅಭ್ಯಾಸ ಈ ಹಿಂದಿನಿಂದಲೂ ಇದೆ.

ಚಿತ್ರವೊಂದು ಬಿಡುಗಡೆಯಾಗಿ ಒಟ್ಟಾರೆ ಹಳೆಯ ಬಾಕ್ಸ್ ಆಫೀಸ್ ಕಲೆಕ್ಷನ್‌ನ ದಾಖಲೆಗಳನ್ನು ಮುರಿದರೆ ಆ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎಂದೇ ಪರಿಗಣಿಸಲಾಗುತ್ತದೆ. ಇನ್ನು ಚಿತ್ರಗಳು ಬಿಡುಗಡೆಯಾದಾಗ ಆ ಚಿತ್ರದ ಓಪನಿಂಗ್ ಬಗ್ಗೆ ಹೆಚ್ಚು ಚರ್ಚೆಗಳು ಜರುಗುತ್ತವೆ. ಅದರಲ್ಲಿಯೂ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗ ಚಿತ್ರ ಮೊದಲ ದಿನ ಎಷ್ಟು ಗಳಿಸಿತು, ಬೇರೊಬ್ಬ ಸ್ಟಾರ್ ನಟನ ಚಿತ್ರ ನಿರ್ಮಿಸಿದ್ದ ದಾಖಲೆಗಳನ್ನು ಮುರಿಯುವಲ್ಲಿ ಚಿತ್ರ ಯಶಸ್ವಿಯಾಯ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ.

ಇನ್ನು ಕನ್ನಡ ಚಿತ್ರರಂಗದಲ್ಲೂ ಸಹ ಈ ಪೈಪೋಟಿ ಇದೆ. ಸ್ಟಾರ್ ನಟರ ನಡುವೆ ಈ ಪೈಪೋಟಿ ಇರದೇ ಇದ್ದರೂ ಅವರ ಅಭಿಮಾನಿಗಳಲ್ಲಂತೂ ಇದರ ಕುರಿತಾಗಿ ಚರ್ಚೆ ಹಾಗೂ ಫ್ಯಾನ್‌ವಾರ್ ಸಹ ಇದೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರ ಮೊದಲಿನ ದಿನ ಎಷ್ಟು ಗಳಿಸಬಹುದು ಎಂಬ ಚರ್ಚೆ ಶುರುವಾಗಿವೆ. ಕ್ರಾಂತಿ ಈ ಹಿಂದಿನ ಕನ್ನಡ ಚಿತ್ರಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಓಪನಿಂಗ್ ಪಡೆದುಕೊಂಡು ಕರ್ನಾಟಕದಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆಯಾ ಎಂಬ ಕುತೂಹಲ ಮೂಡಿದೆ. ಹಾಗಿದ್ದರೆ ಬಿಡುಗಡೆ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರಗಳ ಟಾಪ್ 5 ಪಟ್ಟಿ ಹೇಗಿದೆ ಹಾಗೂ ಈ ಪಟ್ಟಿಯಲ್ಲಿ ಕ್ರಾಂತಿ ಚಿತ್ರ ನಂಬರ್ 1 ಎನಿಸಿಕೊಳ್ಳಲು ಮೊದಲ ದಿನ ಎಷ್ಟು ಗಳಿಕೆ ಮಾಡಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಬಿಡುಗಡೆ ದಿನ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಳ್ಳಲು ಕ್ರಾಂತಿ ಎಷ್ಟು ಗಳಿಸಬೇಕು?

ಬಿಡುಗಡೆ ದಿನ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಳ್ಳಲು ಕ್ರಾಂತಿ ಎಷ್ಟು ಗಳಿಸಬೇಕು?

ಇಂದು ( ಜನವರಿ 26 ) ಭರ್ಜರಿಯಾಗಿ ಬಿಡುಗಡೆಗೊಂಡಿರುವ ಕ್ರಾಂತಿ ಚಿತ್ರ ಬಿಡುಗಡೆ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಳ್ಳಬೇಕಾದರೆ 36 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಬೇಕಿದೆ. ಹೌದು, ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ದಿನ 35 ಕೋಟಿ ಗಳಿಕೆ ಮಾಡುವ ಮೂಲಕ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರ ಎಂಬ ದಾಖಲೆಯನ್ನು ಹೊಂದಿದ್ದು, ಈ ದಾಖಲೆಯನ್ನು ಮುರಿಯಲು ಕ್ರಾಂತಿ 36 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಲೇಬೇಕಿದೆ.

ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಚಿತ್ರಗಳಿವು

ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಚಿತ್ರಗಳಿವು

ಈ ಪಟ್ಟಿಯಲ್ಲಿ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ಅಗ್ರಸ್ಥಾನದಲ್ಲಿ ಇದ್ದರೆ, ಉಳಿದ ಸ್ಥಾನಗಳನ್ನು ಯಾವ ಚಿತ್ರಗಳು ಪಡೆದುಕೊಂಡಿವೆ ಹಾಗೂ ಟಾಪ್ 5 ಪಟ್ಟಿ ಎಂಬ ಮಾಹಿತಿ ಇಲ್ಲಿದೆ.

1. ಕೆಜಿಎಫ್ ಚಾಪ್ಟರ್ 2 - 35 ಕೋಟಿ ರೂಪಾಯಿ
2. ಜೇಮ್ಸ್ - 28 ಕೋಟಿ ರೂಪಾಯಿ
3. ವಿಕ್ರಾಂತ್ ರೋಣ - 18 ಕೋಟಿ ರೂಪಾಯಿ
4. ಕೆಜಿಎಫ್ ಚಾಪ್ಟರ್ 1 - 17 ಕೋಟಿ ರೂಪಾಯಿ
5. ರಾಬರ್ಟ್ - 16 ಕೋಟಿ ರೂಪಾಯಿ

ಕ್ರಾಂತಿಗೆ ಭರ್ಜರಿ ಓಪನಿಂಗ್

ಕ್ರಾಂತಿಗೆ ಭರ್ಜರಿ ಓಪನಿಂಗ್

ಇನ್ನು ಕ್ರಾಂತಿ ಚಿತ್ರ ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅದರಲ್ಲಿಯೂ ಬಿಡುಗಡೆಗೂ ಮುನ್ನ ಅಡ್ವಾನ್ಸ್ ಬುಕಿಂಗ್ ಮೂಲಕವೇ ಚಿತ್ರ ಭರ್ಜರಿ 5.41 ಕೋಟಿ ರೂಪಾಯಿ ಗಳಿಸಿದ್ದು, ಮೊದಲ ದಿನ 15 ಕೋಟಿಗೂ ಅಧಿಕ ಗಳಿಸಬಹುದು ಎಂದು ಸಿನಿ ಪಂಡಿತರು ಊಹಿಸಿದ್ದಾರೆ. ಇನ್ನು ಅಧಿಕೃತವಾಗಿ ಮೊದಲ ದಿನ ಚಿತ್ರ ಎಷ್ಟು ಗಳಿಸಲಿದೆ ಎಂಬ ಮಾಹಿತಿ ನಾಳೆ ಹೊರಬೀಳಲಿದೆ.

More from Filmibeat

English summary
List of highest grossing kannada films on day 1: Kranti needs to earn 36 crores to become number 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X