twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಸಿನಿಮಾಗಳು ಯಾವುದು?

    |

    ಕನ್ನಡ ಚಿತ್ರರಂಗದ ಮಾರುಕಟ್ಟೆ ಬಹಳ ಚಿಕ್ಕದು ಎನ್ನುವ ಕಾಲವೊಂದಿತ್ತು. ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಿಸುವುದು ಕಷ್ಟ. ನಿರ್ಮಾಪಕನಿಗೆ ಹಾಕಿದ ಬಂಡವಾಳ ವಾಪಸ್ ಬರಲ್ಲ ಎನ್ನುವ ಮಾತಿತ್ತು. ಕನ್ನಡ ಸಿನಿಮಾಗಳು ಸರಿಯಾದ ಗಳಿಕೆಯ ವಿವರ ಕೊಡುವುದಿಲ್ಲ ಎಂಬ ಆಪಾದನೆಯೂ ಇತ್ತು. ಈಗ ಸಮಯ ಬದಲಾಗಿದೆ.

    ಬೇರೆ ಇಂಡಸ್ಟ್ರಿಗಳಂತೆ ಕನ್ನಡದಲ್ಲಿ ದೊಡ್ಡ ಬಜೆಟ್ ಚಿತ್ರಗಳು ತಯಾರಾಗುತ್ತಿದೆ. 50 ಕೋಟಿ, 100 ಕೋಟಿ ಕ್ಲಬ್‌ನಲ್ಲಿ ಕನ್ನಡ ಸಿನಿಮಾಗಳು ಸ್ಥಾನ ಪಡೆಯುತ್ತಿದೆ. ಈಗ ರಿಲೀಸ್ ಆಗುತ್ತಿರುವ ಚಿತ್ರಗಳು ಅಧಿಕೃತವಾಗಿ ಕಲೆಕ್ಷನ್ ಎಷ್ಟಾಗಿದೆ ಎಂದು ಘೋಷಿಸಿಕೊಳ್ಳುತ್ತಿದೆ.

    100 ಕೋಟಿ ಕ್ಲಬ್ ಸೇರಿದ 'ಕುರುಕ್ಷೇತ್ರ': ಸಂಭ್ರಮಿಸಿದ ಸುಯೋಧನ100 ಕೋಟಿ ಕ್ಲಬ್ ಸೇರಿದ 'ಕುರುಕ್ಷೇತ್ರ': ಸಂಭ್ರಮಿಸಿದ ಸುಯೋಧನ

    ಅಂದ್ಹಾಗೆ, ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಯಾವುದು? ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಕೋಟಿ ಗಳಿಸಿರುವ ನಟ ಯಾರು? ಮುಂದೆ ಓದಿ...

    250 ಕೋಟಿ ಗಳಿಸಿದ ಕೆಜಿಎಫ್ ಚಾಪ್ಟರ್ 1

    250 ಕೋಟಿ ಗಳಿಸಿದ ಕೆಜಿಎಫ್ ಚಾಪ್ಟರ್ 1

    ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಿನಿಮಾ (2018) ಐದು ಭಾಷೆಯಲ್ಲಿ ತೆರೆಕಂಡಿತ್ತು. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಚಿತ್ರ ಒಟ್ಟು 250 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಕನ್ನಡ ವರ್ಷನ್ ಸಿನಿಮಾ 100 ಕೋಟಿ ಬಾಚಿಕೊಂಡಿದೆ. ಈ ಮೂಲಕ ಕನ್ನಡ ಸಿನಿಮಾಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್ ಮೊದಲ ಸ್ಥಾನದಲ್ಲಿದೆ.

    ಕುರುಕ್ಷೇತ್ರ 100 ಕೋಟಿ?

    ಕುರುಕ್ಷೇತ್ರ 100 ಕೋಟಿ?

    ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾ 100 ಕೋಟಿ ಗಳಿಸಿದೆ ಎಂದು ದಾಖಲಾಗಿದೆ. ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗಿದ್ದ ಪೌರಾಣಿಕ ಚಿತ್ರ 100 ಕೋಟಿ ಗಳಿಸಿದೆ ಎಂದು ಅಭಿಮಾನಿಗಳು ಸಂಭ್ರಮಿಸಿದ್ದರು. ಈ ಸಂಭ್ರಮದಲ್ಲಿ ನಟ ದರ್ಶನ್ ಸಹ ಭಾಗಿಯಾಗಿದ್ದರು. ಮೊದಲ ವಾರದಲ್ಲಿ 35-40 ಕೋಟಿ ಗಳಿಸಿದ್ದ ಕುರುಕ್ಷೇತ್ರ ಒಟ್ಟಾರೆ 100 ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿದೆ.

    ರಾಜಕುಮಾರ 75 ಕೋಟಿ

    ರಾಜಕುಮಾರ 75 ಕೋಟಿ

    ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಮೂಡಿ ಬಂದಿದ್ದ ರಾಜಕುಮಾರ ಸಿನಿಮಾದ ಒಟ್ಟು ಗಳಿಕೆ 70-75 ಕೋಟಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪೈಕಿ ರಾಜಕುಮಾರ ಮೂರನೇ ಸ್ಥಾನದಲ್ಲಿದೆ. ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸಿದ್ದ ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದರು.

    ದಿ ವಿಲನ್ 60 ಕೋಟಿ

    ದಿ ವಿಲನ್ 60 ಕೋಟಿ

    ಶಿವರಾಜ್ ಕುಮಾರ್ ಮತ್ತು ದರ್ಶನ್ ನಟಿಸಿದ್ದ 'ದಿ ವಿಲನ್' ಸಿನಿಮಾ ಒಟ್ಟು 60 ಕೋಟಿ ಗಳಿಸಿದೆ ಎಂದು ದಾಖಲಾಗಿದೆ. ಮೊದಲ ನಾಲ್ಕು ದಿನಕ್ಕೆ 30 ಕೋಟಿ ಕಲೆಕ್ಷನ್ ಮಾಡಿತ್ತು ಎಂದು ನಿರ್ಮಾಪಕ ಸಿಆರ್ ಮನೋಹರ್ ಹೇಳಿದ್ದರು. ನಂತರ ಅಧಿಕೃತವಾಗಿ ಒಟ್ಟು ಗಳಿಕೆ ಎಷ್ಟು ಎಂದು ಪ್ರಕಟಿಸಿಲ್ಲವಾದರೂ ಒಟ್ಟು ಗಳಿಕೆ 60 ಕೋಟಿ ಎಂದು ದಾಖಲಾಗಿದೆ. ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದರು.

    ರಾಬರ್ಟ್ 59.8 ಕೋಟಿ

    ರಾಬರ್ಟ್ 59.8 ಕೋಟಿ

    ಈಗಷ್ಟೇ ಬಿಡುಗಡೆಯಾಗಿರುವ ರಾಬರ್ಟ್ ಸಿನಿಮಾ 59.8 ಕೋಟಿ ಗಳಿಸಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮೊದಲ ನಾಲ್ಕು ದಿನಕ್ಕೆ 59.8 ಕೋಟಿ ಬಾಚಿಕೊಂಡಿದೆ. ಕನ್ನಡ ಮತ್ತು ತೆಲುಗು ವರ್ಷನ್‌ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಆಗಿತ್ತು. ತರುಣ್ ಸುಧೀರ್ ಈ ಚಿತ್ರ ನಿರ್ದೇಶಿಸಿದ್ದು, ಉಮಾಪತಿ ಗೌಡ ನಿರ್ಮಾಣ ಮಾಡಿದ್ದಾರೆ.

    4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ

    ಪೊಗರು ಗಳಿಸಿದ್ದೆಷ್ಟು?

    ಪೊಗರು ಗಳಿಸಿದ್ದೆಷ್ಟು?

    ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಆರು ದಿನಕ್ಕೆ 45 ಕೋಟಿ ಗಳಿಸಿದೆ ಎಂದು ನಿರ್ಮಾಪಕ ಗಂಗಾಧರ್ ಅಧಿಕೃತವಾಗಿ ಹೇಳಿದ್ದರು. ಈಗ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದಿದೆ. ಈಗಲೂ ಬಹುತೇಕ ಚಿತ್ರಮಂದಿರಗಳಲ್ಲಿ ಪೊಗರು ಸಿನಿಮಾ ಪ್ರದರ್ಶನ ಕಾಣ್ತಿದೆ. ಒಟ್ಟಾರೆ ಗಳಿಕೆ 50 ಕೋಟಿ ದಾಟಿ ಮುನ್ನುಗ್ಗುತ್ತಿದೆ.

    Recommended Video

    ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ | Filmibeat Kannada
    50 ಕೋಟಿ ಕ್ಲಬ್‌ನಲ್ಲಿ ಸ್ಟಾರ್ಸ್ ಸಿನಿಮಾ

    50 ಕೋಟಿ ಕ್ಲಬ್‌ನಲ್ಲಿ ಸ್ಟಾರ್ಸ್ ಸಿನಿಮಾ

    ದರ್ಶನ್ ಅಭಿನಯದ ಯಜಮಾನ (2019), ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ (2019), ಸುದೀಪ್ ಅಭಿನಯದ ಪೈಲ್ವಾನ್ (2019) ಚಿತ್ರಗಳು ಉತ್ತಮ ಗಳಿಕೆ ಕಂಡಿತ್ತು. ಈ ಚಿತ್ರಗಳ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ನಿರ್ಮಾಪಕರು ಘೋಷಿಸಿಲ್ಲ. ಆದರೂ ಸಿನಿಮಾಗಳು 50 ಕೋಟಿ ಕ್ಲಬ್ ಸೇರಿದೆ ಎಂದು ಇಂಡಸ್ಟ್ರಿಯಲ್ಲಿ ಟಾಕ್ ಇದೆ. ಇದಕ್ಕೂ ಮುಂಚೆ ತೆರೆಕಂಡಿದ್ದ ಕಿರಿಕ್ ಪಾರ್ಟಿ (2016), ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ (2014), ಮುಂಗಾರುಮಳೆ (2006) ಚಿತ್ರಗಳು ಸಹ 50 ಕೋಟಿ ಕ್ಲಬ್‌ನಲ್ಲಿದೆ.

    English summary
    Here is the list of highest grossing kannada movies of all time. Take a look.
    Monday, March 15, 2021, 14:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X