For Quick Alerts
  ALLOW NOTIFICATIONS  
  For Daily Alerts

  ವಿವಿಧ ಭಾಷೆಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಮೊದಲು ಬಂಡವಾಳ ಹಾಕಿದ್ದು ಈ ನಟ - ನಟಿಯರ ಮೇಲೆ

  |

  ಹೊಂಬಾಳೆ ಫಿಲ್ಮ್ಸ್ ಸದ್ಯ ದೇಶವ್ಯಾಪಿ ಹೆಸರನ್ನು ಮಾಡಿರುವ ಈ ಚಿತ್ರ ನಿರ್ಮಾಣ ಸಂಸ್ಥೆಯೆಂದರೆ ಸಿನಿ ರಸಿಕರಲ್ಲಿ ಒಂದೊಳ್ಳೆ ಅಭಿಪ್ರಾಯವಿದೆ. 'ಓಹ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾನಾ, ಹಾಗಾದ್ರೆ ಚಿತ್ರ ಚೆನ್ನಾಗಿರುತ್ತೆ, ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ಸಿನಿಮಾ ನೋಡಬಹುದು' ಎಂಬ ನಂಬಿಕೆಗೆ ಅರ್ಹವಾಗಿದೆ ಹೊಂಬಾಳೆ ಫಿಲ್ಮ್ಸ್ ಹಾಗೂ ಆ ನಂಬಿಕೆಯನ್ನು ಸೃಷ್ಟಿಸಿದೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯವೈಖರಿ.

  ಹೌದು, ಕನ್ನಡದ ಸಾಮಾನ್ಯ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸುವ ಮೂಲಕ ತನ್ನ ಸಿನಿ ಪಯಣವನ್ನು ಆರಂಭಿಸಿದ ಹೊಂಬಾಳೆ ಫಿಲ್ಮ್ಸ್ ಈಗ ಪ್ಯಾನ್ ಇಂಡಿಯಾ ಮಟ್ಟಿಗೆ ಬೆಳೆದು ನಿಂತಿದೆ. ಕನ್ನಡದ ಕೆಜಿಎಫ್ ಚಿತ್ರ ಸರಣಿಯ ಮೂಲಕ ದೇಶವ್ಯಾಪಿ ಹೆಸರು ಮಾಡಿದ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಬಳಿಕ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಿಗೂ ಕಾಲಿಟ್ಟಿದೆ.

  ವಿಶೇಷವೆಂದರೆ ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಸಹ ಹೊಂಬಾಳೆ ಫಿಲ್ಮ್ಸ್ ದೊಡ್ಡ ಮಟ್ಟದಲ್ಲಿಯೇ ಚಿತ್ರಗಳನ್ನು ನಿರ್ಮಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಿದೆ. ಹೀಗೆ ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಣ ಸಂಸ್ಥೆಯೊಂದು ತನ್ನ ಮಾರುಕಟ್ಟೆಯನ್ನು ವಿಸ್ತಾರಗೊಳಿಸುತ್ತಿದ್ದು, ಬಾಲಿವುಡ್‌ಗೂ ಸಹ ಕಾಲಿಡಲಿದೆ ಎಂಬ ಸುದ್ದಿಯೂ ಇದೆ. ಇನ್ನು ಇಲ್ಲಿಯರೆಗೂ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಳ ಚಿತ್ರಗಳಿಗೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದು, ಈ ಚಿತ್ರರಂಗಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಮೊದಲು ಬಂಡವಾಳ ಹೂಡಿದ್ದು ಯಾವ ನಟ ಹಾಗೂ ನಟಿಯರ ಚಿತ್ರಗಳಿಗೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

  ಸ್ಯಾಂಡಲ್‌ವುಡ್‌ನ ಹೊಂಬಾಳೆಯ ಮೊದಲ ನಾಯಕ

  ಸ್ಯಾಂಡಲ್‌ವುಡ್‌ನ ಹೊಂಬಾಳೆಯ ಮೊದಲ ನಾಯಕ

  ಸ್ಯಾಂಡಲ್‌ವುಡ್: ಕನ್ನಡದಲ್ಲಿ 2014ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ಅಭಿನಯದ ನಿನ್ನಿಂದಲೇ ಎಂಬ ಚಿತ್ರಕ್ಕೆ ಬಂಡವಾಳವನ್ನು ಹೂಡಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಹೀಗೆ ತನ್ನ ಮೊದಲ ನಾಯಕ ಪುನೀತ್ ರಾಜ್‌ಕುಮಾರ್ ನಟನೆಯ ರಾಜಕುಮಾರ ಹಾಗೂ ಯುವರತ್ನ ಚಿತ್ರಗಳಿಗೂ ನಂತರದ ದಿನಗಳಲ್ಲಿ ಬಂಡವಾಳ ಹಾಕಿದ್ದ ಹೊಂಬಾಳೆ ಫಿಲ್ಮ್ಸ್ ಪುನೀತ್ ನಿಧನ ಹೊಂದುವುದಕ್ಕೂ ಮುನ್ನ ಅಪ್ಪು ಹಾಗೂ ಪವನ್ ಕುಮಾರ್ ಕಾಂಬಿನೇಶನ್‌ನ ದ್ವಿತ್ವ ಮತ್ತು ಅಪ್ಪು ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಲು ಸಿದ್ದವಿತ್ತು.

  ಇತರೆ ಚಿತ್ರರಂಗಗಳ ಮೊದಲ ನಾಯಕ ಅಥವಾ ನಾಯಕಿ

  ಇತರೆ ಚಿತ್ರರಂಗಗಳ ಮೊದಲ ನಾಯಕ ಅಥವಾ ನಾಯಕಿ

  ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ ಮೊದಲ ನಟನಾದರೆ ಬೇರೆ ಚಿತ್ರರಂಗಗಳಲ್ಲಿ ಯಾವ ನಟ ಅಥವಾ ನಟಿಗೆ ಬಂಡವಾಳ ಹೂಡಿತ್ತು ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಟಾಲಿವುಡ್: ಪ್ರಭಾಸ್ ಅಭಿನಯದ ಸಲಾರ್ ಎಂಬ ತೆಲುಗು ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಟಾಲಿವುಡ್ ಅನ್ನು ಪ್ರವೇಶಿಸಿದೆ ಹೊಂಬಾಳೆ ಫಿಲ್ಮ್ಸ್.

  ಮಾಲಿವುಡ್: ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಟೈಸನ್ ಎಂಬ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಮೊದಲು ಘೋಷಿಸಿದರೂ ಸಹ ಮೊದಲು ಚಿತ್ರೀಕರಣ ಆರಂಭಿಸಿರುವುದು ಪವನ್ ಕುಮಾರ್ ಹಾಗೂ ಫಹಾದ್ ಫಾಸಿಲ್ ಕಾಂಬಿನೇಶನ್‌ನ ಧೂಮನ್ ಚಿತ್ರಕ್ಕೆ.

  ಕಾಲಿವುಡ್: ತಮಿಳಿನಲ್ಲಿ ಇತ್ತೀಚೆಗಷ್ಟೆ ತನ್ನ ನಿರ್ಮಾಣದ ಮೊದಲ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ನಟಿ ಕೀರ್ತಿ ಸುರೇಶ್ ಅಭಿನಯದ ರಘು ತಾತ ಎಂಬ ಚಿತ್ರಕ್ಕೆ ಹೊಂಬಾಳೆ ಬಂಡವಾಳ ಹೂಡಲಿದೆ.

  ಬಾಲಿವುಡ್‌ಗೂ ಹೊಂಬಾಳೆ

  ಬಾಲಿವುಡ್‌ಗೂ ಹೊಂಬಾಳೆ

  ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿರುವ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳ ಚಿತ್ರಗಳನ್ನು ನಿರ್ಮಿಸಿದ್ದು ಹಿಂದಿ ಭಾಷೆಯ ಚಿತ್ರಕ್ಕೂ ಬಂಡವಾಳ ಹೂಡಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಬಾಲಿವುಡ್‌ನ ಶಾರುಖ್ ಖಾನ್ ಅಭಿನಯದ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದು ಈ ಕುರಿತಾಗಿ ಇನ್ನೂ ಸಹ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  English summary
  List of Hombale films first movie and heroes in all south Industries. Take a look
  Tuesday, December 6, 2022, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X