ರಜನಿ 12, ಮಮ್ಮೂಟ್ಟಿ 14; ಹೆಚ್ಚು ಇಂಡಸ್ಟ್ರಿ ಹಿಟ್ ಕೊಟ್ಟ ಭಾರತದ ನಟರಲ್ಲಿ ಕನ್ನಡದ ಈ ನಟ ನಂ.1!

ಸಿನಿಮಾವೊಂದು ಗಳಿಕೆ ವಿಚಾರದಲ್ಲಿ ತಲುಪಬಹುದಾದ ಅತ್ಯುನ್ನತ ಹಂತವೇ ಇಂಡಸ್ಟ್ರಿ ಹಿಟ್. ಹೌದು, ಚಿತ್ರರಂಗದ ಚಿತ್ರವೊಂದು ಈ ಹಿಂದೆ ಅತಿಹೆಚ್ಚು ಗಳಿಸಿದ್ದ ಸಿನಿಮಾಗಿಂತ ಅತಿಹೆಚ್ಚು ಕಲೆಕ್ಷನ್ ಮಾಡಿದರೆ ಆ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎನ್ನುತ್ತಾರೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಬಾಲಿವುಡ್ ಚಿತ್ರರಂಗದ ಪಠಾಣ್. ಕಳೆದ ಜನವರಿ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಹಿಂದಿ ವರ್ಷನ್ ಕಲೆಕ್ಷನ್ 510 ಕೋಟಿಯನ್ನೂ ದಾಟಿದೆ. ಈ ಮೂಲಕ 510 ಕೋಟಿ ಕಲೆಕ್ಷನ್ ಮಾಡಿ ಬಾಲಿವುಡ್ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದ್ದ ಬಾಹುಬಲಿ 2 ಹಿಂದಿ ವರ್ಷನ್ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ಹಿಂದಿ ಚಿತ್ರರಂಗದ ನೂತನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ.

List of Indian actors with highest number of industry hits; Rajkumar tops the list

ಹೀಗೆ ಹಲವು ವರ್ಷಗಳ ಬಳಿಕ ಬಾಲಿವುಡ್ ಹೊಸ ಇಂಡಸ್ಟ್ರಿ ಹಿಟ್ ಕಂಡಿದೆ ಹಾಗೂ ಶಾರುಖ್ ಖಾನ್ ಹಲವು ವರ್ಷಗಳ‌‌ ಬಳಿಕ ಇಂಡಸ್ಟ್ರಿ ಹಿಟ್ ಬಾರಿಸಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2, ತಮಿಳು ಚಿತ್ರರಂಗದಲ್ಲಿ ಪೊನ್ನಿಯಿನ್ ಸೆಲ್ವನ್ ಭಾಗ 1 ಹಾಗೂ ತೆಲುಗು ಚಿತ್ರರಂಗದಲ್ಲಿ ಆರ್ ಆರ್ ಆರ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿ ತಮ್ಮ ಇಂಡಸ್ಟ್ರಿಯ ಎಲ್ಲಾ ಚಿತ್ರಗಳ‌ನ್ನು ಹಿಂದಿಕ್ಕಿ ಇಂಡಸ್ಟ್ರಿ ಹಿಟ್ ಆಗಿ ನಿಂತಿವೆ.

ಹೀಗೆ ಹೊಸ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ವೇಳೆ ವಿವಿಧ ಇಂಡಸ್ಟ್ರಿ ಗಳು ಪಡೆದುಕೊಂಡ ಬಳಿಕ ಯಾವ ನಟ ಎಷ್ಟು ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿದ್ದಾರೆ ಎಂಬ ಚರ್ಚೆ ಸಹ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಹಾಗಾದರೆ ಭಾರತ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ‌ನೀಡಿರುವ ನಟ ಯಾರು ಎಂಬ ‌ಮಾಹಿತಿ ಈ ಕೆಳಕಂಡಂತಿದೆ..

List of Indian actors with highest number of industry hits; Rajkumar tops the list

ಅತಿಹೆಚ್ಚು ಇಂಡಸ್ಟ್ರಿ ಹಿಟ್ ಹೊಂದಿರುವ ಭಾರತದ ನಟರ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ‌ಪಡೆದುಕೊಂಡಿರುವ ನಟ ಎಂಬ ಖ್ಯಾತಿಗೆ ಕನ್ನಡ ಚಲನಚಿತ್ರರಂಗದ ವರನಟ ರಾಜಕುಮಾರ್ ಪಾತ್ರರಾಗಿದ್ದಾರೆ. ತಮ್ಮ ಸಿನಿ ವೃತ್ತಿ ಜೀವನದಲ್ಲಿ ಬರೋಬ್ಬರಿ 15 ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ರಾಜ್ ಕುಮಾರ್ ನೀಡಿದ್ದಾರೆ.

ಅತಿಹೆಚ್ಚು ಇಂಡಸ್ಟ್ರಿ ಹಿಟ್ ಬಾರಿಸಿದ ನಟರ ಪಟ್ಟಿ

ರಾಜ್ ಕುಮಾರ್ - 15 ಚಿತ್ರಗಳು
ಮಮ್ಮೂಟ್ಟಿ - 14 ಚಿತ್ರಗಳು
ರಜನಿಕಾಂತ್ - 12 ಚಿತ್ರಗಳು
ಚಿರಂಜೀವಿ - 8 ಚಿತ್ರಗಳು
ಮೋಹನ್‌ ಲಾಲ್ - 8 ಚಿತ್ರಗಳು
ಕಮಲ್ ಹಾಸನ್ - 7 ಚಿತ್ರಗಳು
ಆಮೀರ್ ಖಾನ್ - 6 ಚಿತ್ರಗಳು

ವಿವಿಧ ಇಂಡಸ್ಟ್ರಿಗಳ‌ ನೂತನ ಇಂಡಸ್ಟ್ರಿ ಹಿಟ್ ಚಿತ್ರಗಳು ಯಾವುವು ಎಂಬ ಮಾಹಿತಿ‌ ಇಲ್ಲಿದೆ

* ಮೇಲೆ ಹೇಳಿದಂತೆ ಸದ್ಯ ಕನ್ನಡ ಚಿತ್ರರಂಗದ ಇಂಡಸ್ಟ್ರಿ ಹಿಟ್ ಆಗಿ ಕೆಜಿಎಫ್ ಚಾಪ್ಟರ್ 2 ಕರೆಸಿಕೊಳ್ಳುತ್ತಿದೆ. ಕಾಂತಾರ ಚಿತ್ರ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದಿತ್ತಾದರೂ ಕೊನೆಯಲ್ಲಿ ಎಡವಿತು. ಆದರೆ ಕೆಲವರು ಕಾಂತಾರ ಇಂಡಸ್ಟ್ರಿ ಹಿಟ್ ಎಂದೂ ಸಹ ಸುದ್ದಿ ಹಬ್ಬಿಸಿದ್ದರು. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಇಂಡಸ್ಟ್ರಿ ಹಿಟ್ ಆಗಿದೆ. * ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಗೊಂಡು ಅಬ್ಬರಿಸಿದ ಆರ್ ಆರ್ ಆರ್ ಚಿತ್ರ ನೂತನ ಇಂಡಸ್ಟ್ರಿ ಹಿಟ್ ಅಗಿದೆ.

* ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಗೊಂಡು ಅಬ್ಬರಿಸಿದ ಆರ್ ಆರ್ ಆರ್ ಚಿತ್ರ ನೂತನ ಇಂಡಸ್ಟ್ರಿ ಹಿಟ್ ಅಗಿದೆ.

* ಇನ್ನು ತಮಿಳಿನಲ್ಲಿಯೂ ಸಹ ಕಳೆದ ವರ್ಷ ಎರಡು ಇಂಡಸ್ಟ್ರಿ ಹಿಟ್‌ಗಳು ಬಂದಿವೆ. ಮೊದಲಿಗೆ ಕಮಲ್ ಹಾಸನ್ ನಟನೆಯ ವಿಕ್ರಮ್ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಬಳಿಕ ಈ ಚಿತ್ರದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ.

* ಅತ್ತ ಕೇರಳದಲ್ಲಿ ಇಂಡಸ್ಟ್ರಿ ಹಿಟ್ ದಾಖಲಾಗಿ ವರ್ಷಗಳೇ ಕಳೆದಿವೆ. 2016ರಲ್ಲಿ ತೆರೆಗೆ ಬಂದಿದ್ದ ಮೋಹನ್‌ಲಾಲ್ ನಟನೆಯ ಪುಲಿ ಮುರುಗನ್ ಬಳಿಕ ಯಾವ ಚಿತ್ರವೂ ದೊಡ್ಡ ದಾಖಲೆ ಬರೆದಿಲ್ಲ. ಹೀಗಾಗಿ ಏಳು ವರ್ಷಗಳಿಂದಲೂ ಪುಲಿ ಮುರುಗನ್ ಮಾಲಿವುಡ್‌ನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ.

More from Filmibeat

English summary
List of Indian actors with highest number of industry hits; Rajkumar tops the list. Take a look, ಅತಿಹೆಚ್ಚು ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿದ ಭಾರತದ ನಟರ ಪಟ್ಟಿಯಲ್ಲಿ ರಾಜ್‌ಕುಮಾರ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X