ಫೆಬ್ರವರಿ ಮೊದಲ ಶುಕ್ರವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪಟ್ಟಿ

ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದಿದ್ದ ಸಿನಿಮಾ ಕ್ಷೇತ್ರ ಈ ವರ್ಷವೂ ಸಹ ಮೊದಲ ತಿಂಗಳಿನಲ್ಲಿಯೇ ಸೂಪರ್ ಹಿಟ್, ಬ್ಲಾಕ್‌ಬಸ್ಟರ್‌ಗಳ ಮೂಲಕ ಇನ್ನಿಂಗ್ಸ್ ಅನ್ನು ಆರಂಭಿಸಿವೆ. ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ತುನಿವು ಚಿತ್ರಗಳು ಬಿಡುಗಡೆಗೊಂಡರೆ, ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆಗೊಂಡವು.

ಈ ನಾಲ್ಕೂ ಚಿತ್ರಗಳೂ ಸಹ ನೂರು ಕೋಟಿಗೂ ಹೆಚ್ಚು ಗಳಿಸುವ ಮೂಲಕ ತಮ್ಮ ಇಂಡಸ್ಟ್ರಿಗಳಿಗೆ ಶುಭಾರಂಭ ಸಿಗುವಂತೆ ಮಾಡಿದವು. ಅತ್ತ ಕಳೆದ ವರ್ಷ ಸಾಲು ಸಾಲು ಸೋಲುಗಳಿಂದ ಮಂಕಾಗಿದ್ದ ಬಾಲಿವುಡ್ ಚಿತ್ರರಂಗಕ್ಕೆ ಇದೀಗ ಪಠಾಣ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುವುದರ ಮೂಲಕ ಈ ವರ್ಷ ಉತ್ತಮ ಆರಂಭ ನೀಡುವುದರ ಜತೆಗೆ ಹಿಂದಿ ಚಿತ್ರರಂಗಕ್ಕೆ ಮರುಜೀವ ನೀಡಿದ್ದಾರೆ. ಇನ್ನು ಕಳೆದ ವಾರ ಪಠಾಣ್ ಬಿಡುಗಡೆಯಾದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಬಿಡುಗಡೆಗೊಂಡು ಕನ್ನಡ ಚಿತ್ರರಂಗದ ಪರ ಈ ವರ್ಷ ಬಿಡುಗಡೆಗೊಂಡ ಮೊದಲ ಸ್ಟಾರ್ ನಟನ ಚಿತ್ರ ಎನಿಸಿಕೊಂಡಿತು.

ಹೀಗೆ ಈ ಚಿತ್ರಗಳ ಮೂಲಕ ವರ್ಷದ ಮೊದಲ ತಿಂಗಳನ್ನು ಪೂರೈಸಿರುವ ಭಾರತದ ವಿವಿಧ ಚಿತ್ರರಂಗಗಳ ಯಾವ ಚಿತ್ರಗಳು ವರ್ಷದ ಎರಡನೇ ತಿಂಗಳಿನ ಮೊದಲ ಶುಕ್ರವಾರ, ಇಂದು ( ಫೆಬ್ರವರಿ 3 ) ಬಿಡುಗಡೆಯಾಗಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

List of Indian films releasing on February 3rd

ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಹುಡುಗ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ಸಪ್ತಾ ಪಾವೂರ್ ನಟನೆಯ ತನುಜಾ ಚಿತ್ರಗಳು ತೆರೆಗೆ ಬರುತ್ತಿದ್ದು, ತೆಲುಗಿನಲ್ಲಿ ರೈಟರ್ ಪದ್ಮಭೂಷಣ್, ಮೈಕೆಲ್, ಪ್ರೇಮದೇಶಂ, ರೆಬೆಲ್ಸ್ ಆಫ್ ತುಪಾಕುಲ ಗುಡೆಮ್, ಸುವರ್ಣ ಸುಂದರಿ ಹಾಗೂ ಬುಟ್ಟಬೊಮ್ಮ ( ಫೆಬ್ರವರಿ 4 ) ತೆರೆಕಂಡಿವೆ. ತಮಿಳಿನ ರನ್ ಬೇಬಿ ರನ್, ಬೊಮ್ಮೈ ನಾಯಗಿ, ದ ಗ್ರೇಟ್ ಇಂಡಿಯನ್ ಕಿಚನ್, ತಲೈಕೂದಲ್, ನಾನ್ ಕಡವುಲ್ ಇಲ್ಲೈ ಹಾಗೂ ವೇಡಿಕೆಟ್ಟು ಬಿಡುಗಡೆಯಾಗಲಿವೆ. ಮಲಯಾಳಂನ ರೋಮಾಂಚಮ್, ಇರಟ್ಟ, ಮೊಮೊ ಇನ್ ದುಬೈ ಚಿತ್ರಗಳು ತೆರೆಗೆ ಬರುತ್ತಿವೆ.

More from Filmibeat

English summary
List of Indian films releasing on February 3rd. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X