For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮಾಸ್ತ್ರ to ಪೊನ್ನಿಯಿನ್ ಸೆಲ್ವನ್; ನವೆಂಬರ್ ತಿಂಗಳಿನಲ್ಲಿ ಒಟಿಟಿಗೆ ಲಗ್ಗೆ ಇಡುವ ಚಿತ್ರಗಳ ಸಂಪೂರ್ಣ ವಿವರ

  |

  ಇತ್ತೀಚೆಗಿನ ಯಾವುದೇ ವರ್ಷ ಸಾಧಿಸದಷ್ಟು ಯಶಸ್ಸನ್ನು ದಕ್ಷಿಣ ಭಾರತದ ಚಿತ್ರರಂಗಗಳು ಈ ವರ್ಷ ಸಾಧಿಸಿವೆ ಎಂದರೆ ಬಹುಶಃ ತಪ್ಪಾಗಲಾರದು. ಆರಂಭದಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ರೀತಿಯ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಚಿತ್ರ ನೀಡಿದ ನಂತರ ಮಂಕಾಗಿದ್ದ ತೆಲುಗು ಚಿತ್ರರಂಗ ಕೂಡ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಂಡ ಚಿತ್ರಗಳು ಗೆದ್ದ ಕಾರಣ ಸುಧಾರಿಸಿಕೊಂಡಿತು.

  ಇನ್ನು ವಿಕ್ರಮ್ ರೀತಿಯ ಇಂಡಸ್ಟ್ರಿ ಹಿಟ್ ಪಡೆದಿದ್ದ ತಮಿಳು ಚಿತ್ರರಂಗ ಇತ್ತೀಚಿಗಷ್ಟೆ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಈ ವರ್ಷ ಮತ್ತೊಂದು ಇಂಡಸ್ಟ್ರಿ ಹಿಟ್ ಪಡೆಯಿತು. ಹೀಗೆ ಈ ವರ್ಷ ತೆಲುಗು ಹಾಗೂ ತಮಿಳು ಚಿತ್ರಗಳಿಗಳು ಹೆಚ್ಚು ಯಶಸ್ಸು ಕಂಡರೂ ಅವುಗಳಿಗಿಂತ ಹೆಚ್ಚು ಯಶಸ್ಸು ಕಂಡದ್ದು ಹಾಗೂ ಸದ್ದು ಮಾಡಿದ್ದು ಕನ್ನಡ ಚಿತ್ರರಂಗ ಎಂದರೆ ತಪ್ಪಾಗಲಾರದು. ಅದರಲ್ಲೂ ಕಳೆದೆರೆಡು ತಿಂಗಳುಗಳಲ್ಲಿ ತೆಲುಗು ಹಾಗೂ ತಮಿಳು ಪರ ಅತ್ಯುತ್ತಮ ಪ್ರದರ್ಶನ ಕಂಡ ಚಿತ್ರಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಕನ್ನಡ ಚಿತ್ರರಂಗದ ಕಾಂತಾರ.

  ಹೌದು, ತೆಲುಗಿನ ಚಿರಂಜೀವಿ ಅಭಿನಯದ ಗಾಡ್ ಫಾದರ್, ನಾಗಾರ್ಜುನ ಅಭಿನಯದ ಘೋಸ್ಟ್ ಹಾಗೂ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರಗಳು ಕಾಂತಾರ ಚಿತ್ರದಿಂದ ಹಿಂದಿ ಪ್ರಾಂತ್ಯದಲ್ಲಿ ಹೊಡೆತ ತಿಂದ ಚಿತ್ರಗಳೇ. ಹೀಗೆ ಕಾಂತಾರದಿಂದ ಪೆಟ್ಟು ತಿಂದು ಕಲೆಕ್ಷನ್ ವಿಚಾರದಲ್ಲಿ ತುಸು ಹಿನ್ನಡೆ ಅನುಭವಿಸಿದ ಈ ಎಲ್ಲಾ ಚಿತ್ರಗಳು ನವೆಂಬರ್ ತಿಂಗಳಿನಲ್ಲಿ ಒಟಿಟಿಗೆ ಲಗ್ಗೆ ಇಡುತ್ತಿವೆ. ಹೀಗೆ ಈ ಚಿತ್ರಗಳು ಸೇರಿದಂತೆ ನವೆಂಬರ್ ತಿಂಗಳು ಒಟಿಟಿ ವೇದಿಕೆಗೆ ಬರುತ್ತಿರುವ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

   ನವೆಂಬರ್ ತಿಂಗಳು ಒಟಿಟಿಯಲ್ಲಿ ಈ ತೆಲುಗು ಚಿತ್ರಗಳು

  ನವೆಂಬರ್ ತಿಂಗಳು ಒಟಿಟಿಯಲ್ಲಿ ಈ ತೆಲುಗು ಚಿತ್ರಗಳು

  ಅಕ್ಟೋಬರ್ ತಿಂಗಳ ದಸರಾ ರೇಸ್‌ನಲ್ಲಿ ಮುಖಾಮುಖಿಯಾಗಿದ್ದ ನಾಗಾರ್ಜುನ ಅಭಿನಯದ ಘೋಸ್ಟ್ ಹಾಗೂ ಚಿರಂಜೀವಿ ಅಭಿನಯದ ಗಾಡ್ ಫಾದರ್ ಚಿತ್ರಗಳು ನವೆಂಬರ್ ತಿಂಗಳಿನಲ್ಲಿ ಓಟಿಟಿ ವೇದಿಕೆಗೆ ಬರುತ್ತಿವೆ. ನಾಗಾರ್ಜುನ ಅಭಿನಯದ ಘೋಸ್ಟ್ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸಿರಲಿಲ್ಲ ಹಾಗೂ ಈ ಚಿತ್ರ ನವೆಂಬರ್ 2ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ. ಇನ್ನು ಚಿರಂಜೀವಿ ಅಭಿನಯದ ಗಾಡ್ ಫಾದರ್ ಚಿತ್ರ ನೂರು ಕೋಟಿ ಕ್ಲಬ್ ಸೇರಿದರೂ ಸಹ ದೊಡ್ಡ ಮಟ್ಟದ ಲಾಭ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಕಾಂತಾರ ಚಿತ್ರ ತೆಲುಗಿಗೆ ಡಬ್ ಆದ ನಂತರ ಗಾಡ್ ಫಾದರ್ ಚಿತ್ರ ತನ್ನದೇ ನೆಲದಲ್ಲಿ ಮಕಾಡೆ ಮಲಗಿತು. ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನವೆಂಬರ್ 19ರಿಂದ ವೀಕ್ಷಿಸಲು ಲಭ್ಯವಿರಲಿದೆ.

   ಬಹು ಕೋಟಿಯ ಬ್ರಹ್ಮಾಸ್ತ್ರ ಹಾಗೂ ಪೊನ್ನಿಯನ್ ಸೆಲ್ವನ್

  ಬಹು ಕೋಟಿಯ ಬ್ರಹ್ಮಾಸ್ತ್ರ ಹಾಗೂ ಪೊನ್ನಿಯನ್ ಸೆಲ್ವನ್

  ಇದೇ ಚೊಚ್ಚಲ ಬಾರಿಗೆ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೋಡಿಯಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಬ್ರಹ್ಮಾಸ್ತ್ರ ಪಾರ್ಟ್ 1 ಚಿತ್ರ ನವೆಂಬರ್ 4ರಿಂದ ಡಿಸ್ನೆ ಪ್ಲಸ್ ಹಾಟ್ ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪ್ರಸಾರಗೊಳ್ಳಲಿದೆ. ಮಣಿರತ್ನಂ ನಿರ್ದೇಶನದ ಹಾಗೂ ವಿಕ್ರಮ್, ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ಜಯಂ ರವಿ ಹಾಗೂ ಶೋಭಿತಾ ಧುಲಿಪಾಲ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪೊನ್ನಿಯನ್ ಸೆಲ್ವನ್ 1 ಚಿತ್ರ ಕೂಡ ನವೆಂಬರ್ 4ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ.

   ಉಳಿದ ಚಿತ್ರಗಳು

  ಉಳಿದ ಚಿತ್ರಗಳು

  • ಶಿವಕಾರ್ತಿಕೇಯನ್ ಅಭಿನಯದ ತಮಿಳು ಚಿತ್ರ ಪ್ರಿನ್ಸ್ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಚಿತ್ರ ನವೆಂಬರ್ 24ರಿಂದ ಡಿಸ್ನೆ ಪ್ಲಸ್ ಹಾಟ್ ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರಲಿದೆ.

  • ಆ್ಯಂಡ್ರಿಯ ಅಭಿನಯದ ಅನೆಲ್ ಮೇಲೆ ಪನಿತುಲಿ - ಸೋನಿ ಲಿವ್ - ನವೆಂಬರ್ 18

  • ಅಂಜಲಿ ಮೆನನ್ ಅವರ ವಂಡರ್ ವುಮೆನ್ - ಸೋನಿ ಲಿವ್ - ನವೆಂಬರ್ 18

  English summary
  List of Indian movies releasing on OTT in November 2022. Take a look
  Thursday, November 3, 2022, 15:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X