2022ರಲ್ಲಿ 500 ಕೋಟಿ ಕ್ಲಬ್ ಸೇರಿದ ಚಿತ್ರಗಳು; ಇದು ಸೌತ್ ಮೇನಿಯಾ!

2022 ಸಿನಿಮಾ ಕ್ಷೇತ್ರಕ್ಕೆ ಚಿನ್ನದಂತ ವರ್ಷ ಎಂದೇ ಹೇಳಬಹುದು. ಏಕೆಂದರೆ ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಸಮಸ್ಯೆ ಎದುರಿಸಿ ನಷ್ಟ ಅನುಭವಿಸಿದ್ದ ಸಿನಿಮಾ ಕ್ಷೇತ್ರ ಪುಟಿದೆದ್ದು ಗೆದ್ದು ಬೀಗಿ ಚೇತರಿಸಿಕೊಂಡದ್ದು ಈ ವರ್ಷದಲ್ಲಿಯೇ. ವರ್ಷ ಯಾವುದೇ ತಿಂಗಳನ್ನು ತೆಗೆದುಕೊಂಡರೂ ಸಹ ಹಿಟ್ ಹಲವು ಹಿಟ್ ಚಿತ್ರಗಳ ಪಟ್ಟಿ ಸಿಗುವಷ್ಟು ಚಿತ್ರಗಳು ಗೆದ್ದಿವೆ.

ಇನ್ನು ಈ ವರ್ಷ ಬರೋಬ್ಬರಿ ಮೂವತ್ತು ಭಾರತದ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು ಈ ಪೈಕಿ ಸಿಂಹಪಾಲನ್ನು ದಕ್ಷಿಣ ಭಾರತದ ಚಿತ್ರರಂಗಗಳೇ ಹೊಂದಿವೆ. ಇನ್ನು ಕನ್ನಡದ ಚಿತ್ರಗಳೂ ಸಹ ಈ ವರ್ಷ ದೊಡ್ಡಮಟ್ಟದಲ್ಲಿಯೇ ಅಬ್ಬರಿಸಿದ್ದು, ಕನ್ನಡದ ಒಟ್ಟು ಐದು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಈ ಪೈಕಿ ಕೆಜಿಎಫ್ ಚಾಪ್ಟರ್ 2 ಚಿತ್ರ ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನೂ ಸಹ ಹೊಂದಿದೆ.

ಇನ್ನು ಕೆಜಿಎಫ್ ಚಾಪ್ಟರ್ 2 ಹೊರತುಪಡಿಸಿದರೆ ತೆಲುಗಿನ ಆರ್ ಆರ್ ಆರ್ ಚಿತ್ರ ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ ಹಾಗೂ ಈ ಚಿತ್ರವೂ ಸಹ ಸಾವಿರ ಕೋಟಿ ಕ್ಲಬ್ ಸೇರಿದೆ. ಹೀಗೆ ದೊಡ್ಡ ಮಟ್ಟದಲ್ಲಿ ಈ ವರ್ಷ ಸೌತ್ ಸಿನಿಮಾಗಳು ಅಬ್ಬರಿಸಿದ್ದು, ಬಾಲಿವುಡ್ ಅಕ್ಷರಶಃ ಮಂಕಾಗಿದೆ.

List of Indian movies which have entered 500 crore club in 2022

ಇನ್ನು ಈ ವರ್ಷ ಒಟ್ಟು 4 ಚಿತ್ರಗಳು 500 ಕೋಟಿ ಕ್ಲಬ್ ಸೇರಿದ್ದು, ಎಲ್ಲವೂ ಸಹ ದಕ್ಷಿಣ ಭಾರತದ ಚಿತ್ರಗಳೇ ಆಗಿವೆ. ಹಾಗಿದ್ದರೆ ಆ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಕೆಜಿಎಫ್ ಚಾಪ್ಟರ್ 2: 1250 ಕೋಟಿ ರೂಪಾಯಿ ಗ್ರಾಸ್

2. ಆರ್ ಆರ್ ಆರ್ : 1200 ಕೋಟಿ ರೂಪಾಯಿ ಗ್ರಾಸ್

3. ಪೊನ್ನಿಯಿನ್ ಸೆಲ್ವನ್ 1 : 505 ಕೋಟಿ ರೂಪಾಯಿ ಗ್ರಾಸ್

4. ವಿಕ್ರಮ್ : 500 ಕೋಟಿ ರೂಪಾಯಿ ಗ್ರಾಸ್

( ಐಎಂಡಿಬಿ ವೆಬ್ ತಾಣದ ಆಧರಿತ ಮಾಹಿತಿ )

More from Filmibeat

English summary
List of Indian movies which have entered 500 crore club in 2022. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X