twitter
    For Quick Alerts
    ALLOW NOTIFICATIONS  
    For Daily Alerts

    'ಪಾಪಿಗಳ ಲೋಕ'ದಿಂದ ಬಣ್ಣದ ಲೋಕಕ್ಕೆ ಬಂದ ಬೆಳಗೆರೆ ಥ್ರಿಲ್ಲಿಂಗ್ ಕಥೆ!

    By Naveen
    |

    ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಕಳೆದ ಶುಕ್ರವಾರ (ಡಿಸೆಂಬರ್ 8, 2017) ರಂದು ಬಂಧಿಸಿದ್ದರು. ತನ್ನ ಜೊತೆ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲ್ಲಲು ಸುಪಾರಿ ನೀಡಿದ ಆರೋಪದಲ್ಲಿ ಸಿಸಿಬಿ ಪೊಲೀಸರು ರವಿ ಬೆಳೆಗೆರೆಯನ್ನು ವಶಕ್ಕೆ ಪಡೆದಿದ್ದರು.

    ರವಿ ಬೆಳಗೆರೆ ಬರೀ ಒಬ್ಬ ಪತ್ರಕರ್ತ, ಬರಹಗಾರ ಮಾತ್ರವಲ್ಲ. ಅವರು ಒಬ್ಬ ನಟ ಕೂಡ ಹೌದು. ಕನ್ನಡ ಚಿತ್ರರಂಗಕ್ಕೆ ಮತ್ತು ರವಿ ಬೆಳಗೆರೆಗೆ ಇರುವ ನಂಟಿಗೆ ದೊಡ್ಡ ಇತಿಹಾಸವೇ ಇದೆ. ತಮ್ಮ ಪತ್ರಿಕೆಯಲ್ಲಿ ಸಿನಿಮಾದವರ ಬಗ್ಗೆ ಸುದ್ದಿ ಬರೆಯುತ್ತಿದ್ದ ಬೆಳಗೆರೆ ಬಳಿಕ ಸಿನಿಮಾದಲ್ಲಿ ನಟನೆ ಕೂಡ ಮಾಡಿದರು. ಪೆನ್ ಹಿಡಿದು ಅಕ್ಷರದ ಮೂಲಕ ಓದುಗರಿಗೆ ಥ್ರಿಲ್ ನೀಡುತ್ತಿದ್ದ ಬೆಳಗೆರೆ ಪರದೆ ಮೇಲೆ ತಮ್ಮ ನಟನೆ, ಖದರ್ ಧ್ವನಿ ಮೂಲಕ ನೋಡುಗರಿಗೆ ಅದೇ ಥ್ರಿಲ್ ಕೊಟ್ಟರು.

    ಅಂದಹಾಗೆ, 'ಪಾಪಿಗಳ ಲೋಕ'ದ ರವಿ ಬೆಳಗೆರೆ ಅವರ ಬಣ್ಣದ ಲೋಕದ ಕಥೆ ಮುಂದಿದೆ ಓದಿ...

    'ವಾರಸ್ಥಾರ' ಮೂಲಕ ಎಂಟ್ರಿ

    'ವಾರಸ್ಥಾರ' ಮೂಲಕ ಎಂಟ್ರಿ

    ರವಿ ಬೆಳಗೆರೆಗೆ ಚಿತ್ರರಂಗದ ನಂಟು ಬಹಳ ಹಿಂದೆಯೇ ಇದ್ದರೂ ಕೂಡ ಬೆಳಗೆರೆ ಮೊದಲು ಪರದೆ ಮೇಲೆ ಕಾಣಿಸಿಕೊಂಡಿದ್ದು 'ವಾರಸ್ಥಾರ' ಸಿನಿಮಾದ ಮೂಲಕ. 'ವಾರಸ್ಥಾರ' ಸಿನಿಮಾ 2008ರಲ್ಲಿ ಬಿಡುಗಡೆಯಾಗಿದ್ದು, ನಿರ್ದೇಶಕ ಗುರು ದೇಶಪಾಂಡೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ತಮ್ಮ ಮೊದಲ ಸಿನಿಮಾದಲ್ಲಿಯೇ ಬೆಳಗೆರೆ ಡಾನ್ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯ 'ಗಾಡ್ ಫಾದರ್' ಸಿನಿಮಾದ ಪ್ರೇರಣೆಯಿಂದ ಈ ಚಿತ್ರ ಮಾಡಿದ್ದು, ನಟಿ ಸಂಜನಾ ಮತ್ತು ಅಶ್ವಿನಿ ಸಿನಿಮಾದ ನಾಯಕಿ ಆಗಿದ್ದಾರೆ.

    'ಗಂಡ ಹೆಂಡತಿ' ಸಿನಿಮಾದಲ್ಲಿ ಅಭಿನಯ

    'ಗಂಡ ಹೆಂಡತಿ' ಸಿನಿಮಾದಲ್ಲಿ ಅಭಿನಯ

    'ವಾರಸ್ಥಾರ' ಮೂಲಕ ಶುರುವಾದ ರವಿ ಬೆಳಗೆರೆ ಸಿನಿ ಜರ್ನಿ 'ಗಂಡ ಹೆಂಡತಿ' ಚಿತ್ರದ ಮೂಲಕ ಮುಂದುವರೆಯಿತು. ಚಿತ್ರದಲ್ಲಿ

    ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಬೆಳಗೆರೆ ಖದರ್ ತೋರಿಸಿದ್ದರು. ಸಿನಿಮಾದಲ್ಲಿ ದಂಪತಿ ಇಬ್ಬರಿಗೆ ಬುದ್ದಿ ಹೇಳಿ ಒಂದು ಮಾಡುವ ಪಾತ್ರ ಅವರದ್ದಾಗಿತ್ತು. ಇಲ್ಲಿ ಸಂಜನಾ ಮತ್ತು ತಿಲಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

    'ಮಾದೇಶ' ಚಿತ್ರದಲ್ಲಿ ಶಿವಣ್ಣ ಜೊತೆ ನಟನೆ

    'ಮಾದೇಶ' ಚಿತ್ರದಲ್ಲಿ ಶಿವಣ್ಣ ಜೊತೆ ನಟನೆ

    ಬೆಂಗಳೂರಿನ ರಿಯಲ್ ರೌಡಿ ಆಯಿಲ್ ಕುಮಾರನ ಪಾತ್ರವನ್ನು 'ಮಾದೇಶ' ಸಿನಿಮಾದಲ್ಲಿ ರವಿ ಬೆಳಗೆರೆ ನಿರ್ವಹಿಸಿದ್ದರು. ಇಲ್ಲಿ ಶಿವರಾಜ್ ಕುಮಾರ್ ಜೊತೆ ಬೆಳಗೆರೆ ತೆರೆ ಹಂಚಿಕೊಂಡಿದ್ದು ಮತ್ತೊಂದು ವಿಶೇಷವಾಗಿತ್ತು. ರವಿ ಶ್ರೀವತ್ಸ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಿನಿಮಾಗೆ ತಮ್ಮ ನಟನೆ ಮೂಲಕ ಬೆಳಗೆರೆ ಹೊಸ ರೂಪ ಕೊಟ್ಟರು.

    'ಡೆಡ್ಲಿ ಸೋಮ' ಕಥೆ

    'ಡೆಡ್ಲಿ ಸೋಮ' ಕಥೆ

    ರವಿ ಬೆಳಗೆರೆ ಅವರ ಕಥೆಯನ್ನೇ 'ಡೆಡ್ಲಿ ಸೋಮ' ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಬೆಂಗಳೂರಿನ ಮತ್ತೊಬ್ಬ ರೌಡಿ 'ಡೆಡ್ಲಿ ಸೋಮ'ನ ಕಥೆ ಸಿನಿಮಾದಲ್ಲಿದೆ. ಈ ಚಿತ್ರವನ್ನು ಸಹ ರವಿ ಶ್ರೀವತ್ಸ ಅವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಬೆಳಗೆರೆ ಅವರ ಪವರ್ ಫುಲ್ ಧ್ವನಿ ಇತ್ತು.

    'ಎನ್ ಕೌಂಟರ್ ದಯಾನಾಯಕ್' ಚಿತ್ರಕ್ಕೆ ಡೈಲಾಗ್

    'ಎನ್ ಕೌಂಟರ್ ದಯಾನಾಯಕ್' ಚಿತ್ರಕ್ಕೆ ಡೈಲಾಗ್

    ಸಿನಿಮಾದಲ್ಲಿ ನಟನೆ ಮಾತ್ರವಲ್ಲದೆ ತೆರೆಯ ಹಿಂದೆ ಕೂಡ ಬೆಳಗೆರೆ ತಮ್ಮ ಪ್ರತಿಭೆ ತೋರಿಸಿದರು. ಅಕ್ಷರ ಮಾಂತ್ರಿಕ ರವಿ ಬೆಳಗೆರೆ 'ಎನ್ ಕೌಂಟರ್ ದಯಾನಾಯಕ್' ಸಿನಿಮಾಗೆ ಡೈಲಾಗ್ ಬರೆದಿದ್ದರು.

    'ಓಂ' ವಿವಾದ

    'ಓಂ' ವಿವಾದ

    'ಓಂ' ಚಿತ್ರದ ಸಂಭಾಷಣೆ ನಾನು ಬರೆದದ್ದು' ಎಂದು ರವಿ ಬೆಳಗೆರೆ ವಿವಾದವನ್ನು ಹುಟ್ಟಿಸಿದ್ದರು. ಆದರೆ ಇದಕ್ಕೆ ಯಾವುದೇ ಆಧಾರ ಇರಲಿಲ್ಲ. ನಂತರ ಅವರೇ ಉಪೇಂದ್ರ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ್ದರು. 'ಉಪೇಂದ್ರ ಅವರನ್ನು ರಾಜ್ ಕಪೂರ್ ಮಟ್ಟದಲ್ಲಿ ನಾನು ನೋಡಬೇಕು' ಎಂದು ಉಪ್ಪಿ ಟ್ಯಾಲೆಂಟ್ ಕೊಂಡಾಡಿದ್ದರು.

    'ಬೀಮಾ ತೀರದಲ್ಲಿ' ಕಿರಿಕ್

    'ಬೀಮಾ ತೀರದಲ್ಲಿ' ಕಿರಿಕ್

    ಕನ್ನಡ ಚಿತ್ರರಂಗದ ದೊಡ್ಡ ವಿವಾದಗಳಲ್ಲಿ 'ಬೀಮಾ ತೀರದಲ್ಲಿ' ಕೂಡ ಒಂದು. ಈ ಚಿತ್ರದ ಕಥೆಯ ವಿಚಾರದಲ್ಲಿ ರವಿಬೆಳಗೆರೆ ಕಿರಿಕ್ ತೆರೆದರು. ಇದರಿಂದ ನಟ ದುನಿಯಾ ವಿಜಯ್ ಮತ್ತು ನಿರ್ಮಾಪಕ ಅಣಜಿ ನಾಗರಾಜ್ ಬೆಳಗೆರೆ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು.

    ರವಿ ಬೆಳಗೆರೆ ಬಂಧನ: ಶನಿವಾರದ 9 ಪ್ರಮುಖ ಬೆಳವಣಿಗೆ

    ನಿರ್ದೇಶನದ ಕನಸು

    ನಿರ್ದೇಶನದ ಕನಸು

    ನಟನೆ, ಕಥೆ, ಸಂಭಾಷಣೆ ಬರೆದಿದ್ದ ರವಿ ಬೆಳಗೆರೆಗೆ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಮಹದಾಸೆ ಇತ್ತು. 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರ ಮಾಡುತ್ತೇನೆ ಎಂದಿದ್ದ ಬೆಳಗೆರೆ ಅದನ್ನು ಅರ್ಧಕ್ಕೆ ಕೈ ಬಿಟ್ಟರು. ಈ ಸಿನಿಮಾ ಕರ್ನಾಟಕದ ಮುಖ್ಯಮಂತ್ರಿಯೊಬ್ಬರ ಕಥೆ ಎಂದು ಹೇಳಲಾಗಿತ್ತು.

    ರವಿ ಬೆಳಗೆರೆ ಬಂಧನ : ವಿಜು ಬಡಿಗೇರ್‌ಗಾಗಿ ಪೊಲೀಸರ ತೀವ್ರ ಶೋಧ

    'ರಾಜ್ ಲೀಲಾ ವಿನೋದ' ಪುಸ್ತಕ

    'ರಾಜ್ ಲೀಲಾ ವಿನೋದ' ಪುಸ್ತಕ

    ಡಾ.ರಾಜ್ ಕುಮಾರ್ ಅವರ ಬಗ್ಗೆ ರವಿ ಬೆಳಗೆರೆ ಕೆಲ ತಿಂಗಳುಗಳ ಹಿಂದೆ ಒಂದು ಪುಸ್ತಕ ಬರೆದಿದ್ದರು. 'ರಾಜ್ ಲೀಲಾ ವಿನೋದ' ಹೆಸರಿನ ಈ ಪುಸ್ತಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಪುಸ್ತಕದಿಂದ ಅನೇಕ ಕೆಂಗಣ್ಣಿಗೆ ಬೆಳಗೆರೆ ಗುರಿ ಆದರು.

    'ರವಿ ಅವರ 2ನೇ ಪತ್ನಿಗೂ ಸುನೀಲ್ ಗೂ ಸಂಬಂಧವಿಲ್ಲ'

    ಚಿತ್ರರಂಗದಲ್ಲಿ ಬೆಳಗೆರೆ ಕುಟುಂಬ

    ಚಿತ್ರರಂಗದಲ್ಲಿ ಬೆಳಗೆರೆ ಕುಟುಂಬ

    ಬೆಳಗೆರೆ ಮಾತ್ರವಲ್ಲದೆ ಅವರ ಕುಟುಂಬ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದೆ. ಮಗಳು ಭಾವನ ಬೆಳಗೆರೆ ಪತಿ ಶ್ರೀನಗರ ಕಿಟ್ಟಿ ಒಬ್ಬ ನಟ. ಜೊತೆಗೆ ಬೆಳಗೆರೆ ಮೊಮ್ಮಗಳು ಕೂಡ 'ಮಾಸ್ ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಮಗಳ ಪಾತ್ರವನ್ನು ಮಾಡಿದ್ದರು.

    English summary
    List of Journalist Ravi Belagere movies. which he is acted, wrote stories and dialogues. Now Ravi Belagere on allegation of attempt to killing another journalist through supari killers.
    Friday, November 13, 2020, 10:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X