twitter
    For Quick Alerts
    ALLOW NOTIFICATIONS  
    For Daily Alerts

    ನವೆಂಬರ್ ನಮ್ದಲ್ಲ: ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಫಲಿತಾಂಶವೇನು? ಗೆದ್ದಿದ್ಯಾರು, ಬಿದ್ದಿದ್ಯಾರು?

    |

    ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಬಿಡುಗಡೆಗೊಂಡಿದ್ದ ಕನ್ನಡದ ಹಲವಾರು ಚಿತ್ರಗಳು ಅಬ್ಬರಿಸಿ ಬೊಬ್ಬರಿದಿದ್ದವು. ಬಾಕ್ಸ್ ಆಫೀಸ್‌ ಮಾತ್ರವಲ್ಲದೇ ಸಿನಿ ಪ್ರೇಕ್ಷಕರ ಮನಸ್ಸನ್ನು ತನ್ನ ಕಂಟೆಂಟ್‌ನಿಂದ ಗೆದ್ದಿದ್ದವು. ಅದರಲ್ಲಿಯೂ ಕಾಂತಾರ ಹಾಗೂ ಗಂಧದಗುಡಿ ಚಿತ್ರಗಳಿಗೆ ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಆದರೆ ನಂತರದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳು ಈ ಯಶಸ್ಸನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಲಿಲ್ಲ ಎಂದೇ ಹೇಳಬಹುದು.

    ಹೌದು, ನವೆಂಬರ್ ತಿಂಗಳಿನಲ್ಲಿ ಕನ್ನಡದ ಹಲವಾರು ಚಿತ್ರಗಳು ಬಿಡುಗಡೆಗೊಂಡಿದ್ದು ಯಾವ ಚಿತ್ರವೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ. ಝೈದ್ ಖಾನ್ ಅಭಿನಯದ ಬನಾರಸ್ ವಿಭಿನ್ನ ಕಥಾಹಂದರವನ್ನು ಹೊಂದಿದೆ ಎಂಬುದನ್ನು ಹೊರತುಪಡಿಸಿದರೆ ಚಿತ್ರ ಆರಂಭದಲ್ಲಿ ಚರ್ಚೆಗೀಡಾಗಿದ್ದಷ್ಟು ಯಶಸ್ಸನ್ನು ಬಾಕ್ಸ್ ಆಫೀಸ್ ವಿಚಾರವಾಗಿ ಕಾಣಲಿಲ್ಲ. ಹೊಸಬರ ಕಂಬ್ಳಿಹುಳ ಹಾಗೂ ಖಾಸಗಿ ಪುಟಗಳು ಚಿತ್ರಗಳು ಪಡೆದುಕೊಂಡಷ್ಟು ಒಳ್ಳೆಯ ವಿಮರ್ಶೆಗಳನ್ನು ಚಿತ್ರರಂಗದ ಅನುಭವವಿರುವ ಹಲವು ನಟ ಹಾಗೂ ನಿರ್ದೇಶಕರ ಚಿತ್ರಗಳೇ ಪಡೆದುಕೊಳ್ಳಲಿಲ್ಲ ಎನ್ನುವುದು ತಿಳಿದಿರುವ ಸತ್ಯವೇ..

    ಇನ್ನು ನವೆಂಬರ್ ತಿಂಗಳಿನಲ್ಲಿ ಅನುಭವಿ ನಟ ಹಾಗೂ ನಿರ್ದೇಶಕರ ಚಿತ್ರಗಳಿಗಿಂತ ಹೊಸಬರ ಚಿತ್ರಗಳ ಸದ್ದೇ ಹೆಚ್ಚಾಗಿದ್ದು, ಯಾವ ಚಿತ್ರಗಳು ಯಾವ ಫಲಿತಾಂಶವನ್ನು ಕಂಡಿವೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

    ನವೆಂಬರ್ ಮೊದಲ ವಾರ ಬಿಡುಗಡೆಗೊಂಡ ಚಿತ್ರಗಳ ಫಲಿತಾಂಶ

    ನವೆಂಬರ್ ಮೊದಲ ವಾರ ಬಿಡುಗಡೆಗೊಂಡ ಚಿತ್ರಗಳ ಫಲಿತಾಂಶ

    ಬನಾರಸ್: ಬೆಲ್ ಬಾಟಂ ರೀತಿಯ ಬ್ಲಾಕ್ ಬಸ್ಟರ್ ಚಿತ್ರ ನಿರ್ದೇಶಿಸಿದ್ದ ಜಯತೀರ್ಥ ನಿರ್ದೇಶನ ಇದ್ದ ಬನಾರಸ್ ಚಿತ್ರ ಸಾಧಾರಣ ಎನಿಸಿಕೊಂಡಿತ್ತು. ಝೈದ್ ಖಾನ್ ತನ್ನ ಮೊದಲ ಚಿತ್ರದ ನಟನೆಗೆ ಮೆಚ್ಚುಗೆ ಗಿಟ್ಟಿಸಿಕೊಂಡರಾದರೂ ಚಿತ್ರ ದೊಡ್ಡ ಗೆಲುವು ಕಾಣಲಿಲ್ಲ.

    ಕಂಬ್ಳಿಹುಳ: ಇನ್ನು ಹೊಸಬರ ಕಂಬ್ಳಿಹುಳ ಚಿತ್ರ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಚಿತ್ರ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರಕ್ಕೆ ಸಿಗಬೇಕಿದ್ದ ಸಿಗಲಿಲ್ಲ.

    ಇನ್ನು ನವೆಂಬರ್ ಮೊದಲ ವಾರ 'ನೀ ಮಾಯೆಯೊಳಗೊ ಮಾಯೆ ನಿನ್ನೊಳಗೋ', 'ಸೆಪ್ಟೆಂಬರ್ ೧೩' ಮತ್ತು 'ನಹೀ ಜ್ಞಾನೇನ ಸದೃಶಂ' ಚಿತ್ರಗಳು ಬಿಡುಗಡೆಗೊಂಡಿದ್ದವು ಎಂಬ ವಿಷಯವೇ ಹಲವು ಸಿನಿ ರಸಿಕರಿಗೆ ತಿಳಿದಿಲ್ಲ.

    ನವೆಂಬರ್ ಎರಡನೇ ವಾರ

    ನವೆಂಬರ್ ಎರಡನೇ ವಾರ

    ನವೆಂಬರ್ ಎರಡನೇ ವಾರ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರ ತೆರೆಕಂಡಿತ್ತು. ಇತ್ತೀಚಿನ ದಿನಗಳಲ್ಲಿ ರಿಮೇಕ್ ಚಿತ್ರಗಳಿಗೆ ಬೆಂಬಲ ನೀಡದ ಕನ್ನಡ ಸಿನಿ ರಸಿಕರು ತಮಿಳಿನ 'ತಡಯಾರಾ ತಾಕ್ಕಾ' ಎಂಬ ಚಿತ್ರದ ರಿಮೇಕ್ ಆಗಿದ್ದ ರಾಣಾ ಚಿತ್ರವನ್ನೂ ಸಹ ಮುಗಿಬಿದ್ದು ನೋಡಲಿಲ್ಲ. ಇನ್ನುಳಿದಂತೆ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಇದೇ ವಾರ ಬಿಡುಗಡೆಗೊಂಡಿದ್ದ ಓ, ಹುಬ್ಬಳ್ಳಿ ಡಾಬಾ ಹಾಗೂ ಎಲ್ಲೋ ಗ್ಯಾಂಗ್ಸ್ ಚಿತ್ರಗಳೂ ಸಹ ಸೋತವು.

    ನವೆಂಬರ್ ಮೂರನೇ ವಾರ

    ನವೆಂಬರ್ ಮೂರನೇ ವಾರ

    ತಿಂಗಳ ಮೂರನೇ ವಾರ ಬಿಡುಗಡೆಗೊಂಡ ಪ್ರಜ್ವಲ್ ದೇವರಾಜ್ ಅವರ ಅಬ್ಬರ, ಮಠ ಹಾಗೂ ಆವರ್ತ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡಲಿಲ್ಲ, ಇತ್ತ ಪ್ರೇಕ್ಷಕರಿಂದಲೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳಲಿಲ್ಲ. ಇನ್ನು ಇದೇ ವಾರ ಬಿಡುಗಡೆಗೊಂಡ ಖಾಸಗಿ ಪುಟಗಳು ಚಿತ್ರ ಮಾತ್ರ ಚಿತ್ರ ವೀಕ್ಷಿಸಲ್ಪಟ್ಟ ಸಿನಿ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ಗಿಟ್ಟಿಸಿಕೊಂಡಿದೆ.

    ನವೆಂಬರ್ ನಾಲ್ಕನೇ ವಾರ

    ನವೆಂಬರ್ ನಾಲ್ಕನೇ ವಾರ

    ನವೆಂಬರ್ ಅಂತಿಮ ವಾರ ಬಿಡುಗಡೆಗೊಂಡ ಚಿತ್ರಗಳಲ್ಲಿ ಒಂದು ಕ್ಲೀನ್ ಹಿಟ್ ನಿರೀಕ್ಷೆ ಇತ್ತಾದರೂ ಅದು ನೆರವೇರಲೇ ಇಲ್ಲ. ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ದೊಡ್ಡದಾಗಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೆ, ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡವು. ಇನ್ನುಳಿದಂತೆ ಈ ವಾರ ಬಿಡುಗಡೆಯಾದ ಸದ್ದು ವಿಚಾರಣೆ ನಡೆಯುತ್ತಿದೆ ಹಾಗೂ ಮಿಸ್ ನಂದಿನಿ ಚಿತ್ರಗಳು ಫ್ಲಾಪ್ ಲಿಸ್ಟ್ ಸೇರಿವೆ.

    English summary
    List of Kannada films released on November 2022 and their result details. Take a look
    Thursday, December 1, 2022, 10:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X