Don't Miss!
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ಕ್ಕೆ ಶುಭಾರಂಭ: ಜನವರಿ 1 ರಂದು ಹಲವು ಸರ್ಪ್ರೈಸ್ ನಿಮಗಾಗಿ
ಕೊನೆಗೂ 2020ನೇ ವರ್ಷ ಮುಗಿತು. ಈ ವರ್ಷ ಚಿತ್ರರಂಗಕ್ಕೆ ಹೇಳಿಕೊಳ್ಳುವಂತಿರಲಿಲ್ಲ. ಲೆಕ್ಕಾಚಾರದಂತೆ ಯಾವ ಕಾರ್ಯಕ್ರಮವೂ ನಡೆದಿಲ್ಲ, ಯಾವ ಸಿನಿಮಾನೂ ರಿಲೀಸ್ ಆಗಿಲ್ಲ. ಶೂಟಿಂಗ್‌ಗಳು ಅರ್ಧಕ್ಕೆ ನಿಂತಿದ್ದವು. ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿರುವ ಸ್ಯಾಂಡಲ್‌ವುಡ್ ಹೊಸ ವರ್ಷದಿಂದ ಹೊಸ ಹುರುಪಿನೊಂದಿಗೆ ಕೆಲಸ ಶುರು ಮಾಡಲು ಸಜ್ಜಾಗಿದೆ.
ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತ ಮಾಡಿಕೊಳ್ಳಲು ಕೆಲವು ಸರ್ಪ್ರೈಸ್‌ಗಳನ್ನು ಸಿದ್ಧ ಮಾಡಿಕೊಂಡಿವೆ. 2021ರ ಜನವರಿ 1ನೇ ತಾರೀಕು ಹೊಸ ಪೋಸ್ಟರ್, ಟ್ರೈಲರ್, ಹೊಸ ಪ್ರಾಜೆಕ್ಟ್ ಘೋಷಣೆ ಸೇರಿದಂತೆ ಹಲವು ಸುದ್ದಿಗಳು ನಿಮಗಾಗಿ ಕಾಯುತ್ತಿದೆ. ಸದ್ಯಕ್ಕೆ ಜನವರಿ 1 ರಂದು ಯಾವೆಲ್ಲ ಸರ್ಪ್ರೈಸ್ ಇದೆ ಎಂಬ ಪಟ್ಟಿ ಇಲ್ಲಿದೆ. ಮುಂದೆ ಓದಿ...

ಎಪಿ ಅರ್ಜುನ್ ಹೊಸ ಸಿನಿಮಾ
ಕಿಸ್ ಸಿನಿಮಾದ ಬಳಿಕ ನಿರ್ದೇಶಕ ಎಪಿ ಅರ್ಜುನ್ ಮತ್ತೊಂದು ಲವ್ ಸ್ಟೋರಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈ ಚಿತ್ರದಲ್ಲೂ ಕಿಸ್ ಖ್ಯಾತಿಯ ವಿರಾಟ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್‌ನ್ನು ಜನವರಿ 1 ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
'ಕಿಸ್'
ನಾಯಕನ
ಜೊತೆ
ಮತ್ತೊಮ್ಮೆ
ಲವ್
ಸ್ಟೋರಿ
ಹೇಳಲು
ಸಜ್ಜಾದ
ಎಪಿ
ಅರ್ಜುನ್

ಪೊಗರು ತೆಲುಗು ಟ್ರೈಲರ್
ಕನ್ನಡದಲ್ಲಿ ಘರ್ಜಿಸುತ್ತಿರುವ ಪೊಗರು ಸಿನಿಮಾ ಈಗ ತೆಲುಗು ಹಾಗೂ ತಮಿಳಿನಲ್ಲಿ ಸದ್ದು ಮಾಡ್ತಿದೆ. ಹೊಸ ವರ್ಷದ ಪ್ರಯುಕ್ತ ತೆಲುಗಿನಲ್ಲಿ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗುತ್ತಿದೆ. ಈ ಟ್ರೈಲರ್ ಕನ್ನಡದಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈಗ ತೆಲುಗಿನಲ್ಲಿ ಜನವರಿ 1 ರಂದು ಮಧ್ಯಾಹ್ನ ರಿಲೀಸ್ ಆಗಲಿದೆ.

ಮದಗಜ ತೆಲುಗು ಟ್ರೈಲರ್
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಜನವರಿ 1 ರಂದು ತೆಲುಗು ಭಾಷೆಯಲ್ಲಿ ಮದಗಜ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ಸ್ವತಃ ಶ್ರೀಮುರಳಿ ತಿಳಿಸಿದ್ದಾರೆ.
ಹೊಷ
ವರ್ಷಕ್ಕೆ
ತೆಲುಗು
ಪ್ರೇಕ್ಷಕರಿಗೆ
ಭರ್ಜರಿ
ಉಡುಗೊರೆ
ಘೋಷಿಸಿದ
ಧ್ರುವ
ಸರ್ಜಾ

ಅರ್ಜುನ್ ಜನ್ಯ ಹೊಸ ಆಲ್ಬಂ
ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮೊಟ್ಟ ಮೊದಲ ಬಾರಿ ಭಕ್ತಿಗೀತೆಗಳ ಕಡೆ ಗಮನ ನೀಡಿದ್ದಾರೆ. ಸಂಪೂರ್ಣವಾಗಿ ದೇವರ ಕುರಿತು ಹೊಸ ಆಲ್ಬಂ ರಚಿಸಿದ್ದಾರೆ. ಓಂ ಶಕ್ತಿ ದೇವರ ಬಗ್ಗೆ ಆಲ್ಬಂ ರಚಿಸಿದ್ದು ಹೊಸ ವರ್ಷದ ಪ್ರಯುಕ್ತ ಜನವರಿ 1 ರಂದು ಲೋಕಾರ್ಪಣೆಯಾಗುತ್ತಿದೆ.

'ಸಲಗ' ಟೈಟಲ್ ಹಾಡು
ಹೊಸ ವರ್ಷದ ಪ್ರಯುಕ್ತ ದುನಿಯಾ ವಿಜಯ್ ನಟಿಸಿರುವ 'ಸಲಗ' ಸಿನಿಮಾದ ಟೈಟಲ್ ಹಾಡು ಬಿಡುಗಡೆಯಾಗಲಿದೆ. ಅದರ ಜೊತೆಗೆ ಸಲಗ ಸಿನಿಮಾದ ಹೊಸ ಪೋಸ್ಟರ್ ಸಹ ರಿಲೀಸ್ ಆಗುತ್ತಿದೆ. ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುವುದರ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ.
ಆಂಧ್ರ-ತೆಲಂಗಾಣಕ್ಕೆ
ಕಾಲಿಟ್ಟ
ಮದಗಜ:
ಹೊಸ
ವರ್ಷಕ್ಕೆ
ಸರ್ಪ್ರೈಸ್

ರಾಜತಂತ್ರ ಸಿನಿಮಾ ಬಿಡುಗಡೆ
2021ರ ಮೊದಲ ಸಿನಿಮಾ ಜನವರಿ 1 ರಂದು ತೆರೆಕಾಣುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ನಟಿಸಿರುವ ರಾಜತಂತ್ರ ಸಿನಿಮಾ ಹೊಸ ವರ್ಷದ ಪ್ರಯುಕ್ತ ಬಿಡುಗಡೆಯಾಗುತ್ತಿದೆ.