ಈ ಕನ್ನಡ ಚಿತ್ರಗಳು ಹಾಲಿವುಡ್, ಕೊರಿಯನ್‌ ಚಿತ್ರಗಳ ರಿಮೇಕ್ ಅಥವಾ 'ಸ್ಪೂರ್ತಿ' ಎಂಬುದು ನಿಮಗೆ ಗೊತ್ತಾ?

ಭಾಷೆಯೊಂದರಲ್ಲಿ ಹಿಟ್ ಆದ ಚಿತ್ರವನ್ನು ಬೇರೆ ಭಾಷೆಯ ಸಿನಿ ಮಂದಿ ಅದರ ರಿಮೇಕ್ ಹಕ್ಕನ್ನು ಖರೀದಿಸಿ ತಮ್ಮ ಭಾಷೆಗಳಲ್ಲಿ ಪುನಃ ನಿರ್ಮಿಸಿ ಬಿಡುಗಡೆ ಮಾಡುವ ಪ್ರತಿಕ್ರಿಯೆಗೆ ರಿಮೇಕ್ ಎಂದು ಕರೆಯಲಾಗುತ್ತದೆ.

ಸದ್ಯ ಓಟಿಟಿ ಯುಗ ಆರಂಭವಾದ ಮೇಲೆ ಈ ರಿಮೇಕ್ ಪ್ರವೃತ್ತಿ ಕಡಿಮೆಯಾಗಿದ್ದು, ಸಿನಿ ರಸಿಕರು ಎಲ್ಲಾ ಭಾಷೆಯ ಹಿಟ್ ಚಿತ್ರಗಳನ್ನು ಅವುಗಳ ಮೂಲ ಭಾಷೆಯಲ್ಲಿಯೇ ನೋಡಿಬಿಡುತ್ತಿದ್ದಾರೆ. ಆದರೆ ಈ ಹಿಂದೆ ರಿಮೇಕ್ ಹಾವಳಿ ದೊಡ್ಡಮಟ್ಟದಲ್ಲಿಯೇ ಇತ್ತು.

List of kannada films which were remake of Korean and hollywood films

ಪಕ್ಕದ ಚಿತ್ರರಂಗದಲ್ಲಿ ಹಿಟ್ ಆದ ಚಿತ್ರಗಳನ್ನು ತಮ್ಮ ಭಾಷೆಯಲ್ಲಿ ನಿರ್ಮಿಸಿ ಗೆದ್ದು ಬೀಗುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಹೆಚ್ಚೆಚ್ಚು ರಿಮೇಕ್ ಚಿತ್ರಗಳನ್ನು ಮಾಡಿ ಸ್ಟಾರ್ ಆದವರೂ ಸಹ ಇದ್ದಾರೆ. ಆಗಿನ ಸಿನಿ ರಸಿಕರಿಗೆ ಮನರಂಜನೆ ಬೇಕಿತ್ತೇ ಹೊರತು, ಇದು ರಿಮೇಕಾ, ಸ್ವಮೇಕಾ ಎನ್ನುವುದನ್ನು ತಲೆಗೆ ತೆಗೆದುಕೊಳ್ಳುತ್ತಿರಲಿಲ್ಲ.

ಆದರೆ ಈಗ ಹಾಗಲ್ಲ. ಓಟಿಟಿ ಯುಗದಲ್ಲಿ ರಿಮೇಕ್ ಮಾಡಿ ಸೋತವರೇ ಹೆಚ್ಚು. ಸ್ವಂತ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಿದರೆ ಮಾತ್ರ ಗೆಲುವು ಎಂಬುದು ನಿಶ್ಚಯವಾಗಿದೆ. ಇನ್ನು ಈ ಹಿಂದೆ ತೆಲುಗಿನಿಂದ ಹಾಗೂ ತಮಿಳಿನಿಂದ ಕನ್ನಡಕ್ಕೆ ಹೆಚ್ಚು ರಿಮೇಕ್ ಆಗುತ್ತಿದ್ದದ್ದನ್ನು ಕಂಡಿದ್ದೇವೆ. ಆದರೆ ಅದೆಷ್ಟೋ ಚಿತ್ರಗಳು ಹಾಲಿವುಡ್ ಹಾಗೂ ಕೊರಿಯನ್ ಚಿತ್ರಗಳ ರಿಮೇಕ್ ಆಗಿವೆ ಮತ್ತು ಕೆಲವೊಂದು ಚಿತ್ರಗಳನ್ನು ಕೊರಿಯನ್ ಹಾಗೂ ಇಂಗ್ಲಿಷ್ ಚಿತ್ರಗಳಿಂದ ಸ್ಪೂರ್ತಿ ಪಡೆದು ಮಾಡಲಾಗಿದೆ.

ಹೀಗೆ ಹಾಲಿವುಡ್ ಹಾಗೂ ಕೊರಿಯನ್ ಚಿತ್ರಗಳಿಂದ ಕನ್ನಡಕ್ಕೆ ರಿಮೇಕ್ ಆದ ಚಿತ್ರಗಳು ಮತ್ತು ಸ್ಪೂರ್ತಿ ಪಡೆದು ತಯಾರಿಸಿದ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

* ಪುಷ್ಪಕ ವಿಮಾನ: 2017ರಲ್ಲಿ ತೆರೆಗೆ ಬಂದಿದ್ದ ರಮೇಶ್ ಅರವಿಂದ್, ರಚಿತಾ ರಾಮ್ ಹಾಗೂ ಜೂಹಿ ಚಾವ್ಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪುಷ್ಪಕ ವಿಮಾನ ಚಿತ್ರ 2013ರಲ್ಲಿ ಬಿಡುಗಡೆಯಾಗಿದ್ದ 'ಮಿರಾಕಲ್ ಇನ್ ಸೆಲ್ ನಂ. 7' ಎಂಬ ಕೊರಿಯನ್ ಚಿತ್ರದ ಅನಧಿಕೃತ ರಿಮೇಕ್ ಎಂಬ ಮಾಹಿತಿ ವಿಕಿಪೀಡಿಯಾದಲ್ಲಿ ಲಭ್ಯವಿದೆ. ಇನ್ನು 'ಮಿರಾಕಲ್ ಇನ್ ಸೆಲ್ ನಂ. 7' ಚಿತ್ರದ ನಿರ್ಮಾಣ ಸಂಸ್ಥೆ ಕ್ರಾಸ್ ಪಿಕ್ಚರ್ಸ್ ಕಾಪಿರೈಟ್ ದೂರನ್ನು ದಾಖಲಿಸಿ ಸಹ ಗೆದ್ದಿತ್ತು.

* ಜೂಮ್ : 2016ರಲ್ಲಿ ತೆರೆಗೆ ಬಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಾಧಿಕಾ ಪಂಡಿತ್ ನಟನೆಯ ಜೂಮ್ ಚಿತ್ರ 1961ರಲ್ಲಿ ತೆರೆಗೆ ಬಂದಿದ್ದ 'ಲವರ್ ಕಮ್ ಬ್ಯಾಕ್' ಎಂಬ ಅಮೆರಿಕನ್ ಚಿತ್ರದ ರಿಮೇಕ್ ಎಂದು ವಿಕಿಪೀಡಿಯಾ ತಿಳಿಸಿದೆ.

* ಚಿಂಗಾರಿ: 2012ರಲ್ಲಿ ಬಿಡುಗಡೆಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ಎ ಹರ್ಷ ಕಾಂಬಿನೇಶನ್‌ನ ಚಿಂಗಾರಿ ಚಿತ್ರ 2008ರಲ್ಲಿ ಬಿಡುಗಡೆಗೊಂಡಿದ್ದ ಫ್ರೆಂಚ್ - ಇಂಗ್ಲಿಷ್ ಚಿತ್ರ ಟೇಕನ್‌ನ ರಿಮೇಕ್ ಎಂದು ವಿಕಿಪೀಡಿಯಾ ತಿಳಿಸಿದೆ.

* 2011ರಲ್ಲಿ ಬಿಡುಗಡೆಗೊಂಡು ನಟ ದರ್ಶನ್ ಸಿನಿ ಕೆರಿಯರ್‌ಗೆ ದೊಡ್ಡ ತಿರುವು ತಂದುಕೊಟ್ಟ ಚಿತ್ರ ಸಾರಥಿ 1994ರಲ್ಲಿ ಬಿಡುಗಡೆಗೊಂಡಿದ್ದ ದ ಲಯನ್ ಕಿಂಗ್‌ನಿಂದ ಸ್ಪೂರ್ತಿ ಪಡೆದು ನಿರ್ಮಿಸಿದ ಚಿತ್ರವಾಗಿದೆ. ಈ ವಿಷಯವನ್ನು ಸ್ವತಃ ದರ್ಶನ್ ವೇದಿಕೆ ಮೇಲೆ ಮುಕ್ತವಾಗಿ ಬಹಿರಂಗವನ್ನೂ ಸಹ ಮಾಡಿದ್ದರು.

ಈ ಚಿತ್ರಗಳಷ್ಟೇ ಅಲ್ಲದೇ ಇನ್ನೂ ಮುಂತಾದ ಚಿತ್ರಗಳು ಬೇರೆ ದೇಶಗಳ ಚಿತ್ರಗಳ ಕಾಪಿ ಎಂದು ಸಿನಿ ರಸಿಕರು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ನಿರ್ದೇಶಕರು ಪ್ರೇಕ್ಷಕ ಹೇಳಿದ್ದನ್ನು ಒಪ್ಪದೇ ಕಿಡಿಕಾರಿದ ಉದಾಹರಣೆಗಳೂ ಸಹ ಇವೆ. ಹೀಗೆ ವಿದೇಶಿ ಚಿತ್ರಗಳ ರಿಮೇಕ್ ಆಗಿರುವ ಅಥವಾ ಅಲ್ಲಿಂದ ಸ್ಪೂರ್ತಿಗೊಂಡು ನಿರ್ಮಾಣವಾಗಿರುವ ಚಿತ್ರಗಳು ನಿಮಗೆ ತಿಳಿದಿದ್ದರೆ ಅವುಗಳನ್ನೂ ಸಹ ಕಾಮೆಂಟ್ ಮೂಲಕ ತಿಳಿಸಿ.

More from Filmibeat

English summary
List of kannada films which were remake of Korean and hollywood films. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X