ಈ ವಾರ ಬಿಡುಗಡೆ ಆಗುತ್ತಿರುವ ಕನ್ನಡ ಸಿನಿಮಾಗಳು

'ಕೆಜಿಎಫ್ 2' ಬಳಿಕ ಸಾಲು ಸಾಲು ಹೊಸಬರ ಸಿನಿಮಾಗಳು, ಭಿನ್ನ ಕತೆಯುಳ್ಳ ಸಿನಿಮಾಗಳು ತೆರೆಗೆ ಬರುತ್ತಿವೆ. ಕಳೆದ ವಾರ ಹಲವು ಕನ್ನಡ ಸಿನಿಮಾಗಳು ತೆರೆಗೆ ಬಂದಿದ್ದವು, ಈ ವಾರವೂ ಸಹ ಹಲವು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ.

ಹೊಸಬರ ಸಿನಿಮಾಗಳು, ಭಿನ್ನ ಕತೆಯುಳ್ಳ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು, ಫ್ಯಾಷನ್‌ಗಾಗಿ ಮಾಡಿದ ಸಿನಿಮಾಗಳು, ಹೇಗೋ ಒಟ್ಟಾರೆ ಒಳ್ಳೆಯ ಸಂಖ್ಯೆಯಲ್ಲಿ ಈ ವಾರ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.

'ಕೆಜಿಎಫ್ 2' ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವಾಗಲೇ ಹಲವು ಕನ್ನಡ ಸಿನಿಮಾಗಳು ಧೈರ್ಯ ಪ್ರದರ್ಶಿಸಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿವೆ. 'ಕೆಜಿಎಫ್ 2' ಹೊರತಾಗಿ ಇನ್ನಾವುದೇ ದೊಡ್ಡ ಬಜೆಟ್ ಸಿನಿಮಾ ಸ್ಪರ್ಧೆಯಲ್ಲಿರದ ಕಾರಣ ಸಣ್ಣ ಸಿನಿಮಾಗಳಿಗೆ ಲಾಭವಾಗುವ ನಿರೀಕ್ಷೆ ಇದೆ.

'ಕಾಣೆಯಾದವರ ಬಗ್ಗೆ ಪ್ರಕಟಣೆ'

'ಕಾಣೆಯಾದವರ ಬಗ್ಗೆ ಪ್ರಕಟಣೆ'

ರಂಗಾಯಣ ರಘು, ರವಿಶಂಕರ್, ತಬಲಾ ನಾಣಿ ಒಟ್ಟಿಗೆ ನಟಿಸಿರುವ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾ ಈ ವಾರ ಬಿಡುಗಡೆ ಆಗಿದೆ. ಕಳೆದ ವಾರವೇ ಈ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತು. ಆದರೆ ಕಾರಣಾಂತರಗಳಿಂದ ಈ ವಾರ ತೆರೆಗೆ ಬರುತ್ತಿದೆ. ಬಹಳ ಭಿನ್ನವಾದ ಕತಾವಸ್ತುವನ್ನು ಈ ಸಿನಿಮಾ ಒಳಗೊಂಡಿರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

ಲೂಸ್ ಮಾದ ಯೋಗಿಯ 'ಕಿರಿಕ್ ಶಂಕರ್'

ಲೂಸ್ ಮಾದ ಯೋಗಿಯ 'ಕಿರಿಕ್ ಶಂಕರ್'

ಲೂಸ್ ಮಾದ ಯೋಗಿ ನಟನೆಯ 'ಕಿರಿಕ್ ಶಂಕರ್' ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಅನಂತ್ ರಾಜು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಎಂಎನ್ ಕುಮಾರ್. ಆದ್ವಿಕಾ ಈ ಸಿನಿಮಾ ಮೂಲಕ ನಾಯಕ ನಟಿಯಾಗುತ್ತಿದ್ದಾರೆ. ಯೋಗಿಯದ್ದು ಸಿನಿಮಾದಲ್ಲಿ ಕಿರಿಕ್ ಮಾಡುವ ಯುವಕನ ಪಾತ್ರ. ಆದರೆ ತಾನು ಮಾಡದ ಕೊಲೆಗೆ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಾಗ ಆ ಸ್ಥಿತಿಯಿಂದ ಹೇಗೆ ಪಾರಾಗುತ್ತಾನೆ ಎಂಬುದು ಕತೆ.

ಶಶಿಕುಮಾರ್ ಪುತ್ರನ 'ಸೀತಾಯಣ' ಬಿಡುಗಡೆ

ಶಶಿಕುಮಾರ್ ಪುತ್ರನ 'ಸೀತಾಯಣ' ಬಿಡುಗಡೆ

ಕನ್ನಡದ ಸುಪ್ರಿಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ನಟಿಸಿರುವ 'ಸೀತಾಯಣ' ಸಿನಿಮಾ ಇಂದು ತೆರೆಗೆ ಬಂದಿದೆ. ಅಕ್ಷಿತ್ ನಟಿಸಿದ ಮೊದಲ ಸಿನಿಮಾ 'ಸೀತಾಯಣ' ಆದರೆ ಇದು ಬಿಡುಗಡೆ ಆಗುವ ಮುನ್ನವೇ ಅಕ್ಷಿತ್ ನಟನೆಯ ಇನ್ನೆರಡು ಸಿನಿಮಾಗಳು ಬಿಡಗುಡೆ ಆಗಿಬಿಟ್ಟಿವೆ. ಸುಂದರ ಪ್ರೇಮಕತೆ ಹೊಂದಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಅನಹಿತಾ ಭೂಷಣ್ ನಟಿಸಿದ್ದಾರೆ. ಸಿನಿಮಾದ ಹಾಡೊಂದನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.

ಭಿನ್ನ ಕತೆಯುಳ್ಳ 'ವ್ಹೀಲ್ ಚೇರ್ ರೋಮಿಯೊ'

ಭಿನ್ನ ಕತೆಯುಳ್ಳ 'ವ್ಹೀಲ್ ಚೇರ್ ರೋಮಿಯೊ'

ಭಿನ್ನ ಕತೆಯುಳ್ಳ, ಪ್ರತಿಭಾವಂತ ಕಲಾವಿದರ ದಂಡೇ ಉಳ್ಳ 'ವ್ಹೀಲ್ ಚೇರ್ ರೋಮಿಯೊ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಕಣ್ಣು ಕಾಣದ ವೇಶ್ಯೆ, ಸದಾ ವ್ಹೀಲ್‌ ಚೇರ್ ಮೇಲೆ ಕುಳಿತಿರುವ ಅಂಗವಿಕಲನ ನಡುವಿನ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದೆ. ಜೊತೆಗೆ ಅಪ್ಪ-ಮಗನ ಬಾಂಧವ್ಯದ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. ರೋಮಿಯೋ, ಆರೆಂಜ್, ಜೂಮ್, ಚಡ್ಡಿ ದೋಸ್ತ್ ಚಿತ್ರಗಳಿಗೆ ಸಂಭಾಷಣೆ ಬರೆದು ಖ್ಯಾತಿ ಗಳಿಸಿರುವ ನಟರಾಜ್ ಅವರು, ವ್ಹೀಲ್ ಚೇರ್ ರೋಮಿಯೋ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸಿನಿಮಾದಲ್ಲಿ ರಾಮ್ ಚೇತನ್ ನಾಯಕ, ಮಯೂರಿ ನಾಯಕಿಯಾಗಿ ನಟಿಸಿದ್ದಾರೆ. ರಂಗಾಯಣ ರಘು ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭ್ರಮೆ-ವಾಸ್ತವಗಳ ಸಂಘರ್ಷ 'ಫಿಸಿಕ್ಸ್ ಟೀಚರ್'

ಭ್ರಮೆ-ವಾಸ್ತವಗಳ ಸಂಘರ್ಷ 'ಫಿಸಿಕ್ಸ್ ಟೀಚರ್'

ಭಿನ್ನ ಕಥಾಹಂದರವುಳ್ಳ 'ಫಿಸಿಕ್ಸ್ ಟೀಚರ್' ಸಿನಿಮಾ ಮೇ 27 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಕಾಣಲಿದೆ. ಭ್ರಮೆ ಹಾಗೂ ವಾಸ್ತವಗಳ ಬಗೆಗಿನ ಕತೆಯನ್ನು ಸಿನಿಮಾ ಒಳಗೊಂಡಿದೆ. ಸುಮುಖ್ ಈ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ ಸಹ. ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ವೈರಲ್ ಆಗಿದೆ. ಈ ಸಿನಿಮಾವು ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ.

'ಧೀರೆನ್' ಮೂಲಕ ಕನಸು ನನಸು ಮಾಡಿಕೊಂಡ ಸ್ವಾಮಿ

'ಧೀರೆನ್' ಮೂಲಕ ಕನಸು ನನಸು ಮಾಡಿಕೊಂಡ ಸ್ವಾಮಿ

ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸ್ವಾಮಿ ನಿರ್ದೇಶನ ಮಾಡಿರುವ 'ಧೀರನ್' ಸಿನಿಮಾ ಮೇ 27 ರಂದು ತೆರೆಗೆ ಬರುತ್ತಿದೆ. ನಿರ್ದೇಶನ ಮಾಡಿರುವ ಸ್ವಾಮಿ, ನಾಯಕನಾಗಿಯೂ ನಟಿಸಿದ್ದಾರೆ. 'ಶಿವ ಅಡ್ಡ' ಹೆಸರಿನ ಗುಂಪು ಮಾಡಿಕೊಂಡು ಸಿನಿಮಾ ಪ್ರಚಾರ ಮಾಡುತ್ತಿದ್ದ ಸ್ವಾಮಿ, 'ಧೀರನ್' ಸಿನಿಮಾ ಮೂಲಕ ತಮ್ಮ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

'ಅಂಜನ್', 'ಪ್ರೀತ್ಸು', 'ಚೆಲ್ಲಗುರ್ಗಿ ಶ್ರೀ ಎರ್ರಿತಾತಯ್ಯ ಮಹಿಮೆ'

'ಅಂಜನ್', 'ಪ್ರೀತ್ಸು', 'ಚೆಲ್ಲಗುರ್ಗಿ ಶ್ರೀ ಎರ್ರಿತಾತಯ್ಯ ಮಹಿಮೆ'

ಎರ್ರಿತಾತಯ್ಯ ಸ್ವಾಮಿಯ ಮಹಿಮೆ ಸಾರುವ 'ಚೆಲ್ಲಗುರ್ಗಿ ಶ್ರೀ ಎರ್ರಿತಾತಯ್ಯ ಮಹಿಮೆ' ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ ಹೊಸಬರ ಪ್ರಯತ್ನ 'ಅಂಜನ್' ಹೆಸರಿನ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಜೊತೆಗೆ ಸಾಕಷ್ಟು ಡಬಲ್ ಮೀನಿಂಗ್ ಡೈಲಾಗ್‌ಗಳಿರುವ 'ಪ್ರೀತ್ಸು' ಹೆಸರಿನ ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ.

More from Filmibeat

English summary
List of Kannada movies which is releasing on May 27. Total 9 Movies releasing on May 27.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X