For Quick Alerts
  ALLOW NOTIFICATIONS  
  For Daily Alerts

  ಥಿಯೇಟರ್‌ನಲ್ಲಿ ಬರಲು ಸಜ್ಜಾಗಿರುವ ಸ್ಟಾರ್ ನಟರ ಚಿತ್ರಗಳು

  |

  ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗಿರುವ ಹಿನ್ನೆಲೆ ಕರ್ನಾಟಕದಲ್ಲಿ ಅನ್‌ಲಾಕ್ ಮಾಡಲಾಗುತ್ತಿದೆ. ನಿಧಾನವಾಗಿ ಎಲ್ಲಾ ಕ್ಷೇತ್ರಗಳು ಕಾರ್ಯನಿರ್ವಹಿಸಲು ಶುರು ಮಾಡುತ್ತಿದೆ. ಸಿನಿಮಾ ಶೂಟಿಂಗ್‌ಗೆ ಅವಕಾಶ ಕೊಟ್ಟಿರುವ ಸರ್ಕಾರ ಚಿತ್ರಮಂದಿರ ತೆರೆಯಲು ಅನುಮತಿ ಕಾಯ್ದಿರಿಸಿದೆ.

  Lockdown ನಂತರ ಬರ್ತಿರೋ ಬಿಗ್ ಬಜೆಟ್ ಸಿನಿಮಾಗಳು | Filmibeat Kannada

  ಬಹುಶಃ ಜುಲೈ 5ರ ಬಳಿಕ ರಾಜ್ಯದಲ್ಲಿ ಸಿನಿಮಾ ಹಾಲ್‌ಗಳು ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆರಂಭಿಕ ಹಂತದಲ್ಲಿ ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಕೊಡಲಾಗುವುದು. ಮತ್ತೊಂದೆಡೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಚಿತ್ರಗಳು ಥಿಯೇಟರ್‌ನಲ್ಲೇ ಬರ್ತಿವಿ ಅಂತ ಕಾದು ಕುಂತಿವೆ. ಹಾಗಾದ್ರೆ, ಯಾವೆಲ್ಲ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದೆ. ಮುಂದೆ ಓದಿ....

  ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್

  ಕೋಟಿಗೊಬ್ಬನ ಜೊತೆ ಭಜರಂಗಿ

  ಕೋಟಿಗೊಬ್ಬನ ಜೊತೆ ಭಜರಂಗಿ

  ಪೊಗರು, ರಾಬರ್ಟ್, ಯುವರತ್ನ ಸಿನಿಮಾಗಳು ಅದೃಷ್ಟ ಎನ್ನುವಂತೆ ಲಾಕ್‌ಡೌನ್‌ಗೂ ಮುಂಚೆ ರಿಲೀಸ್ ಆಯಿತು. ಆದರೆ, ಕೋಟಿಗೊಬ್ಬ 3 ಹಾಗೂ ಭಜರಂಗಿ 3 ಸಿನಿಮಾಗಳು ರಿಲೀಸ್ ಆಗುವ ವೇಳೆಗೆ ಲಾಕ್‌ಡೌನ್ ಜಾರಿಯಾಯಿತು. ಈಗ ಥಿಯೇಟರ್‌ ತೆರೆಯಲಿ ಎಂದು ಕಾದಿರುವ ಚಿತ್ರಗಳು ಆಗಸ್ಟ್ ತಿಂಗಳಿಂದ ದರ್ಶನ ಕೊಡಲು ಸಿದ್ದವಾಗಿದೆ.

  ದುನಿಯಾ 'ಸಲಗ'

  ದುನಿಯಾ 'ಸಲಗ'

  ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಸಿನಿಮಾ ಥಿಯೇಟರ್‌ನಲ್ಲೇ ಬರೋದು ಎಂದು ಕಾದಿದೆ. ಕೆಪಿ ಶ್ರೀಕಾಂತ್ ನಿರ್ಮಾಣ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಂಜನಾ ಪ್ರಕಾಶ್ ನಾಯಕಿಯಾಗಿದ್ದಾರೆ.

  ವಿಕ್ರಾಂತ್ ರೋಣ

  ವಿಕ್ರಾಂತ್ ರೋಣ

  ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದೆ. ಸದ್ಯ, ಕಲಾವಿದರು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಕೊಂಡಿದ್ದಾರೆ. ಅನೂಪ್ ಭಂಡಾರಿ ಈ ಚಿತ್ರ ನಿರ್ದೇಶಿಸಿದ್ದು, ಜಾಕ್ ಮಂಜು ಬಂಡವಾಳ ಹಾಕಿದ್ದಾರೆ.

  ತೋತಾಪುರಿ-ಪೆಟ್ರೋಮ್ಯಾಕ್ಸ್

  ತೋತಾಪುರಿ-ಪೆಟ್ರೋಮ್ಯಾಕ್ಸ್

  ಜಗ್ಗೇಶ್-ವಿಜಯ್‌ ಪ್ರಸಾದ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ತೋತಾಪುರಿ ಸಿನಿಮಾ ಹಾಗೂ ಸತೀಶ್ ನೀನಾಸಂ-ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಪೆಟ್ರೋಮ್ಯಾಕ್ಸ್ ಚಿತ್ರಗಳು ಬಿಡುಗಡೆಯ ಸಾಲಿನಲ್ಲಿದೆ.

  ಕೆಜಿಎಫ್ 2

  ಕೆಜಿಎಫ್ 2

  ಜುಲೈ 16ಕ್ಕೆ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬರಬೇಕಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮತ್ತಷ್ಟು ದಿನ ಮುಂದಕ್ಕೆ ಹೋಗಲಿದೆ. ಈಗ ಹೊಸ ದಿನಾಂಕ ಘೋಷಿಸುವ ಚಿಂತನೆಯಲ್ಲಿದೆ ಚಿತ್ರತಂಡ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ನಿರ್ದೇಶಿಸಿದ್ದಾರೆ.

  777 ಚಾರ್ಲಿ-ಕನ್ನಡಿಗ

  777 ಚಾರ್ಲಿ-ಕನ್ನಡಿಗ

  ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ, ರವಿಚಂದ್ರನ್ ಅಭಿನಯದ 'ಕನ್ನಡಿಗ', ಅಜಯ್ ರಾವ್ ನಟನೆಯ 'ಶೋಕಿವಾಲ', ಶರಣ್ ನಟನೆಯ 'ಅವತಾರ ಪುರುಷ', ರಮೇಶ್ ಅರವಿಂದ್ ಅವರ '100', ಪ್ರಜ್ವಲ್ ದೇವರಾಜ್ 'ಅರ್ಜುನ್ ಗೌಡ', ನೆನಪಿರಲಿ ಪ್ರೇಮ್ ಅವರ 'ಪ್ರೇಮಂ ಪೂಜ್ಯಂ' ಸಿನಿಮಾಗಳು ನಿರೀಕ್ಷೆ ಹುಟ್ಟಿಸಿದೆ.

  English summary
  Karnataka Unlock: List of Kannada Movies Lined up for Release post Theaters Open in Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X