ಫೆಬ್ರವರಿಯಲ್ಲಿ ಕನ್ನಡ ಚಿತ್ರಗಳ ದರ್ಬಾರ್: ಯಾವ ಸಿನಿಮಾ ಯಾವ ಡೇಟ್‌ಗೆ ರಿಲೀಸ್?

ಕೊರೊನಾ ಸಂಕಷ್ಟದಿಂದ ಸದ್ಯ ಸಿನಿಮಾರಂಗ ಚೇತರಿಸಿಕೊಳ್ಳುತ್ತಾ ಇದೆ. ಲಾಕ್‌ಡೌನ್ ಬಳಿಕ ಈಗ ಚಿತ್ರಗಳು ರಿಲೀಸ್‌ಗೆ ರೆಡಿ ಆಗ್ತಿವೆ. ಕನ್ನಡದಲ್ಲಿ ಕೂಡ ಅನೇಕ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರೋಕೆ ಸಜ್ಜಾಗಿವೆ. ನಾ ಮುಂದು ತಾ ಮುಂದು ಅಂತ ಹಲವು ಸಿನಿಮಾಗಳಿಗೆ ಸಾಲು ಸಾಲಾಗಿ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿವೆ.

ಜನವರಿಯಲ್ಲಿ ಕೊರೊನಾ ಹೆಚ್ಚಾದ ಕಾರಣ, ಸಾಕಷ್ಟು ಸಿನಿಮಾಗಳು ರಿಲೀಸ್ ಇಂದ ದೂರ ಉಳಿದಿದ್ದವು. ಹಾಗಾಗಿ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಅದರಲ್ಲೂ ಕನ್ನಡದ ಅನೇಕ ಚಿತ್ರಗಲು ಫೆಬ್ರವರಿಯಲ್ಲಿಯೇ ತೆರೆಗೆ ಬರುತ್ತಿವೆ.

Recommended Video

ಜೇಮ್ಸ್ ಗಾಗಿ ದಾರಿ ಮಾಡಿಕೊಟ್ಟ ರಾಜಮೌಳಿ

ಫೆಬ್ರವರಿ ತಿಂಗಳಲ್ಲಿ ಕನ್ನಡದ ಸಾಲು ಸಾಲು ಚಿತ್ರಗಳು ತೆರೆಗೆ ಬರ್ತಿವೆ. ಉಳಿದಿರುವ 3 ವಾರಗಳಲ್ಲಿ ಹೆಚ್ಚು ಕನ್ನಡ ಚಿತ್ರಗಳು ತೆರೆಗೆ ಬರ್ತಿವೆ. ಈ ಸಾಲಿನಲ್ಲಿ ಲವ್ ಮಾಕ್ಟೇಲ್ 2, ಏಕ್ ಲವ್ ಯಾ, ಬೈಟು ಲವ್ ಚಿತ್ರಗಳು ಕೂಡ ಇವೆ. ಯಾವ ಸಿನಿಮಾ ಯಾವಾಗ ರಿಲೀಸ್ ಎನ್ನುವ ಮಾಹಿತಿಗಾಗಿ ಮುಂದೆ ಓದಿ...

'ಲವ್‌ ಮಾಕ್ಟೇಲ್ 2' ಜೊತೆಗೆ ರೌಡಿ 'ಬೇಬಿ' ತೆರೆಗೆ!

'ಲವ್‌ ಮಾಕ್ಟೇಲ್ 2' ಜೊತೆಗೆ ರೌಡಿ 'ಬೇಬಿ' ತೆರೆಗೆ!

ಚಿತ್ರಮಂದಿರಗಳಲ್ಲಿ ಇನ್ನೂ 50% ಆಕ್ಯೂಪೆನ್ಸಿ ಮುಂದುವರೆದಿದೆ. ಆದರೆ ಚಿತ್ರರಂಗಕ್ಕೆ ಸರ್ಕಾರದಿಂದ ಭರವಸೆ ಸಿಕ್ಕಿದೆ. ಸದ್ಯದಲ್ಲಿಯೇ 100% ಆಕ್ಯೂಪೆನ್ಸಿಗೆ ಅವಕಾಶ ನೀಡುವುದಾಗಿ ಭರವಸೆ ಸಿಕ್ಕಿದೆ‌. ಹಾಗಾಗಿ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಫೆಬ್ರವರಿ 11ಕ್ಕೆ ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಲವ್ ಮಾಕ್ಟೇಲ್ 2' ರಿಲೀಸ್ ಆಗ್ತಿದೆ. ಮಿಲನ ನಾಗರಾಜ್ ಮತ್ತು ಕೃಷ್ಣ ಕಾಂಬಿನೇಷನ್‌ನಲ್ಲಿ ಬಂದಿದ್ದ ಮೊದಲ ಪಾರ್ಟ್ ಹಿಟ್ ಆಗಿತ್ತು. ಹಾಗಾಗಿ ಈಗ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದ ಜೊತೆಗೆ ಕನ್ನಡದ ಮತ್ತೊಂದು ಸಿನಿಮಾ 'ರೌಡಿ ಬೇಬಿ' ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ದಿವ್ಯ ಸುರೇಶ್ ಹಾಗೂ ರವಿ ಗೌಡ ಅಭಿನಯಿಸಿದ್ದಾರೆ.

ಫೆಬ್ರವರಿ 18ಕ್ಕೆ ಒನ್ ಅಂಡ ಓನ್ಲೀ 'ವರದ' ತೆರೆಗೆ!

ಫೆಬ್ರವರಿ 18ಕ್ಕೆ ಒನ್ ಅಂಡ ಓನ್ಲೀ 'ವರದ' ತೆರೆಗೆ!

ಇನ್ನೂ ಫೆಬ್ರವರಿ 18ಕ್ಕೆ ವಿನೋದ್ ಪ್ರಭಾಕರ್ ಅಭಿನಯದ 'ವರದ' ಚಿತ್ರ ರಿಲೀಸ್ ಆಗುತ್ತಿದೆ. ಈ ಬಗ್ಗೆ ಪೋಸ್ಟರ್ ಮೂಲಕ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. 'ವರದ' ಚಿತ್ರಕ್ಕೆ ಸವಾಲು ಹಾಕಲು ಯಾವ ಚಿತ್ರವೂ ಇಲ್ಲ. ಸದ್ಯ ಫೆಬ್ರವರಿ 18 ಕನ್ನಡದ ಇದೊಂದೇ ಸಿನಿಮಾ ರಿಲೀಸ್ ದಿನಾಂಕ ಪ್ರಕಟ ಮಾಡಿಕೊಂಡಿದೆ.

ಫೆಬ್ರವರಿ ಅಂತ್ಯಕ್ಕೆ ಕನ್ನಡದ ಬಹುನಿರೀಕ್ಷಿತ 3 ಚಿತ್ರಗಳು!

ಇನ್ನೂ ಫೆಬ್ರವರಿ ಕೊನೆಯ ವಾರದಲ್ಲಿ ಸಿನಿಮಾ ಹಬ್ಬ ನಡೆಯಲಿದೆ. ಕನ್ನಡದ ಮೂರು ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಫೆಬ್ರವರಿ 24ಕ್ಕೆ 'ಏಕ್ ಲವ್ ಯಾ' ಸಿನಿಮಾ ತೆರೆಗೆ ಬರ್ತಿದೆ. ಪ್ರೇಮ್ ನಿರ್ದೇಶನದಲ್ಲಿ ರಚಿತಾ ರಾಮ್, ರಾಣ, ರೇಷ್ಮ ನಾನಯ್ಯ ಅಭಿನಯಿಸಿದ್ದಾರೆ. ನಂತ ಫೆಬ್ರವರಿ 25ಕ್ಕೆ ಶ್ರೀಲೀಲಾ ಮತ್ತು ಧನ್ವಿರ್ ಅಭಿನಯದ 'ಬೈಟು ಲವ್' ಸಿನಿಮಾ ರಿಲೀಸ್ ಆಗುತ್ತಿದೆ. ಇದರೊಂದಿಗೆ ಫೆಬ್ರವರಿ 25ಕ್ಕೆ ಅದಿತಿ ಪ್ರಭುದೇವ ಮತ್ತು ಶ್ರೀನಿ ಅಭಿನಯದ 'ಓಲ್ಡ್ ಮಾಂಕ್' ಕೂಡ ತಾತ್ಕಾಲಿಕವಾಗಿ ಚಿತ್ರದ ರಿಲೀಸ್ ಪ್ರಕಟಿಸಿದೆ.

ಮಾರ್ಚ್ ತಿಂಗಳಿನಲ್ಲಿ 'ಜೇಮ್ಸ್' ಅಬ್ಬರ!

ಮಾರ್ಚ್ ತಿಂಗಳಿನಲ್ಲಿ 'ಜೇಮ್ಸ್' ಅಬ್ಬರ!

ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಕನ್ನಡದ ಚಿತ್ರ ಅಂದರೆ, ಅದು 'ಜೇಮ್ಸ್'. 'ಜೇಮ್ಸ್' ಸಿನಿಮಾ ಮಾರ್ಚ್ 17ಕ್ಕೆ ತೆರೆಗೆ ಬರಲಿದೆ. ನಂತರ ಮಾರ್ಚ್ 25ಕ್ಕೆ 'RRR' ಚಿತ್ರ ತೆರೆಗೆ ಬರ್ತಿದೆ. ಹಾಗಾಗಿ ಬಳಿಕ ಏಪ್ರಿಲ್‌ನಲ್ಲೂ ಕೂಡ ಸಾಕಷ್ಟು ಸಿನಿಮಾಗಳು ತೆರೆಗೆ ಬರ್ತಿವೆ. ಸದ್ಯ ಫೆಬ್ರವರಿ ಒಂದೇ ರಿಲೀಸ್‌ಗೆ ಉತ್ತಮ ತಿಂಗಳು. ಹಾಗಾಗಿ ಆದಷ್ಟು ಸಿನಿಮಾಗಳು ಈಗಲೇ ತೆರೆಗೆ ಬರೋಕೆ ಸಜ್ಜಾಗಿವೆ.

More from Filmibeat

English summary
Here Is The Details Of 2022 Kannada Movies Release In February,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X